fbpx

ಸ್ವಚ್ಛತೆಗೆ ಆದ್ಯತೆ ನೀಡಿ ಸೇವೆಯಲ್ಲಿ ನಿರತ

ವರದಿ:ಗಿರಿಧರ್ ಕೊಂಪುಳೀರ
ಚಿತ್ರ:ಪಪ್ಪು ತಿಮ್ಮಯ್ಯ

ಕೈಗೆ ಗ್ಲೌಸು, ಮುಖಕ್ಕೆ ಮಾಸ್ಕು, ಕೈನಲ್ಲೊಂದು ಪ್ಲಾಸ್ಟಿಕ್ ಚೀಲ ಅತ್ತಿಂದಿತ್ತ ಓಡಾಡಲು ಒಂದು ದ್ವಿಚಕ್ರ ವಾಹನ, ರೀತಿಯ ಒಬ್ಬ ವ್ಯಕ್ತಿ ನಿಮಗೆ ಖಂಡಿತವಾಗಿಯೂ ಮಡಿಕೇರಿಯಿಂದ ಅಬ್ಬಿ ಜಲಪಾತದ ಕಡೆಗೆ ತೆರಳುವ ಮಾರ್ಗದಲ್ಲಿ ಮಳೆ, ಗಾಳಿ, ಚಳಿ ಬಿಟ್ಟು ಅದೇನೋ ಹುಡುಕುತ್ತಿರುವಂತೆ ಗೋಚರಿಸುತ್ತಾರೆ.

ಹೌದು,ಇವರು ರಂಗಯ್ಯ ಕೆ.ನಿಡುಗಣೆ ಗ್ರಾಮ ಪಂಚಾಯ್ತಿಯಲ್ಲೊಬ್ಬ ಸಾಮಾನ್ಯ ಕಾರ್ಮಿಕ,ಆದರೆ ಇವರಿಗೆ ಪರಿಸರ ಮೇಲಿನ ಕಾಳಜಿ ಮಾತ್ರ ಅಧ್ಬುತ. ಲಾಕ್ ಡೌನ್ ಓಪನ್ ಆಗುತ್ತಿದ್ದಂತೆ ಕೊಡಗು ಮತ್ತೆ ಪ್ರವಾಸಿಗರ ಹಾಟ್ ಸ್ಪಾಟ್ ಜೊತೆಗೆ ಗಾರ್ಬೇಜ್ ಸ್ಪಾಟ್ ಮಾಡಲು ಹೊರಟಿರುವ ಮಂದಿಗೆ ಅದೆಷ್ಟು ಹೇಳಿದರೂ ರಸ್ತೆ ಬದಿಯಲ್ಲಿ ವಾಹನಗಳು ನಿಲ್ಲಿಸುವುದು ಮದ್ಯಪಾನ ಸೇರಿದಂತೆ ಅದೆಲ್ಲಿಂದಲೋ ತಂದು ಆಹಾರ ಪೊಟ್ಟಣವನ್ನು ಇಲ್ಲಿ ಬಿಸಾಡಿ ತೆರಳುವುದು ಸರ್ವೆ ಸಾಮಾನ್ಯವಾಗಿದೆ.

ಸ್ವಂತ ಬುದ್ದಿ ಇಲ್ಲದವರಿಗೆ ಕಸ ಹಾಕಬೇಡಿ ಎಂದು ಮನವಿ ಮಾಡಿದರೆ ಕ್ಷಮೆ ಕೇಳುತ್ತಾ ಮತ್ತದೇ ಕಸವನ್ನು ಮತ್ತೆಲ್ಲೋ ಬಿಸಾಕಿ ಹೋಗುತ್ತಾರೆ.

ಇಂತಹ ವಿಲೇವಾರಿ ಆಗದ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡುವುದು ರಂಗಯ್ಯ ರವರ ಕೆಲಸ, ಅಂದ ಹಾಗೆ ಇವರು ತಮ್ಮ ಗ್ರಾಮಪಂಚಾಯ್ತಿಯಲ್ಲಿ ಪೌರಕಾರ್ಮಿಕ ಎಂದು ಈ ಕೆಲಸ ಮಾಡುತ್ತಿಲ್ಲ. ಬದಲಾಗಿ ನನ್ನ ಗ್ರಾಮ ಸ್ವಚ್ಛವಾಗಿಡಬೇಕು ಎನ್ನುವ ಧ್ಯೇಯುದ್ದೇಶವಷ್ಟೆ. ಇವರ ಕಾಯಕಕ್ಕೆ ಪಂಚಾಯ್ತಿ ಅಧ್ಯಕ್ಷರಾದ ಅಯ್ಯಪ್ಪರಿಂದ ಪ್ರೋತ್ಸಾಹವೇನೋ ಇದೆ, ಅಲ್ಲಲ್ಲಿ ಕಸ ಹಾಕದಂತೆ ನಾಮ ಫಲಕವನ್ನೂ ಅಳವಡಿಸಲಾಗಿದೆ. ಆದರೆ ನಗರವಾಸಿ ಪ್ರವಾಸಿಗರ ಬುದ್ದಿ ಸುಟ್ಟರೂ ಹೋಗುವುದಿಲ್ಲ.ಅರ್ಥಾತ್ ತಮ್ಮ ಮನೆಯ ಕಸ ಪಕ್ಕದ ಕಾಂಪೌಂಡ್ ಗೆ ಹಾಕದಿದ್ದರೆ ತಿನ್ನುವ ಅನ್ನ ಕರಗಬೇಕಲ್ಲ…

ಒಟ್ಟಿನಲ್ಲಿ ರಂಗಯ್ಯರ ಕೆಲಸ ಶ್ಲಾಘನೀಯ ಇದು ನಮಗೆ ಅರ್ಥವಾಗುತ್ತದೆ ಪ್ರವಾಸಿಗರಿಗೆ ಅರ್ಥವಾಗಬೇಕಲ್ಲ? ಇದಕ್ಕೆ ತಕ್ಕ ಮದ್ದು “ದಂಡಂ ದಶಗುಣಂ!” ಅಷ್ಟೇ ಹೊರತು ಬೇರೇನು ಅಲ್ಲ.

error: Content is protected !!