fbpx

ಸ್ಯಾಂಡಲ್ ವುಡ್ Showmanನ ಹುಟ್ಟಹಬ್ಬವಿಂದು…

ಅವರ ಸಿನಿಮಾ ಎಂದರೆ ಅದು ವರ್ಣರಂಜಿತ, ಬಣ್ಣಬರಿತವಾಗಿರುತ್ತವೆ. ಪ್ರತಿ ವಸ್ತುಗಳನ್ನು ಕ್ಯಾಮರಾದ ಫ್ರೇಮ್ ಅಲ್ಲಿ ಕಲಾತ್ಮಕವಾಗಿ ತೋರಿಸುವ ಪರಿ ಅವರಿಗೆ ಮಾತ್ರ ಗೊತ್ತು. ಈಶ್ವರಿ ನಿರ್ಮಾಣ ಸಂಸ್ಥೆಯ ನಿರ್ಮಾತೃ ಎನ್. ವೀರಸ್ವಾಮಿ ಅವರ ಮಗನಾಗಿ ವಿ.ರವಿಚಂದ್ರನ್ ಅವರು, ಸಿನಿಮಾ ರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿ ಬೆಳೆದ ಹಠವಾದಿ ಅವರು.


1982ರಲ್ಲಿ ‘ಖದೀಮ ಕಳ್ಳರು’ ಎಂಬ ಸಿನಿಮಾದಲ್ಲಿ ಚೊಚ್ಚಲ ಬಾರಿಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರೊಂದಿಗೆ ನಟಿಸಿದರು. 1983ರಲ್ಲಿ ‘ಚಕ್ರವ್ಯೂಹ’ ಸಿನಿಮಾದಲ್ಲಿ ಅಂಬರೀಶ್ ಅವರೊಂದಿಗೆ ಮತ್ತೊಮ್ಮೆ ಪರದೆ ಹಂಚಿಕೊಂಡರು.


ವಿ.ರವಿಚಂದ್ರನ್ ಅವರೇ ನಟಿಸಿ ನಿರ್ದೇಶಿಸಿದ್ದ ಪ್ರೇಮಲೋಕ 1987ರಲ್ಲಿ ತೆರೆ ಕಂಡು ದಾಖಲೆ ಪ್ರದರ್ಶನ ಕಂಡಿತು. ಅವರ ಪ್ರೇಮಲೋಕ ಧ್ವನಿಸುರುಳಿ ಕ್ಯಾಸೆಟ್ಗಳು ಮಾರಾಟದಲ್ಲಿ ದಾಖಲೆ ಬರೆಯಿತು. ಕನ್ನಡ ಚಿತ್ರರಂಗಕ್ಕೆ ‘ಪ್ರೇಮಲೋಕ’ ಸಿನಿಮಾ ಹೊಸ ದಾರಿಯನ್ನೇ ಮಾಡಿ ತೋರಿಸಿತು.
ಬೃಹತ್ ಬಜೆಟ್ ಹಾಕಿಯೂ ಭಾರಿ ಲಾಭ ಮಾಡಬಹುದು ಎಂಬುದನ್ನು ‘ಪ್ರೇಮಲೋಕ’ ಸಿನಿಮಾ ನಿರೂಪಿಸಿ ತೋರಿಸಿತು‌‌. ನಂತರ ಹತ್ತು ಹಲವು ಸಿನಿಮಾಗಳಲ್ಲಿ ಕೇವಲ ನಟರಾಗಿಯಷ್ಟೇ ಕೆಲಸ ಮಾಡದೆ ನಿರ್ದೇಶಕ, ನಿರ್ಮಾಪಕ, ನೃತ್ಯ ಸಂಯೋಜಕ, ಸಂಗೀತ ನಿರ್ದೇಶಕ, ಸಾಹಿತ್ಯಕಾರರ ಕೆಲಸ ಮಾಡಿಯೂ ಜನರಿಂದ ಶಹಬಾಶ್ ಗಿರಿ ಪಡೆದರು.


ರವಿಚಂದ್ರನ್ ಅವರದೇ ನಿರ್ದೇಶನ, ನಿರ್ಮಾಣ, ನಟನೆ ಇದ್ದ ‘ಶಾಂತಿ ಕ್ರಾಂತಿ’ ಸಿನಿಮಾ ಕನ್ನಡದ ಸ್ಯಾಂಡಲ್ ವುಡ್ಡಿನ ಮೊದಲ Pan India ಸಿನಿಮಾ ಎಂಬುದನ್ನು ನಾವು ಮರೆಯಬಾರದು.
ಕನಸುಗಾರನಾಗಿ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಮಾಡಿದ ‘ಮಂಜಿನ ಹನಿ’ ಸಿನಿಮಾ ಮಾಡಲು ಹೊರಟಿದ್ದು ಒಂದು ದೊಡ್ಡ ಸಾಹಸ. ಪ್ರಯೋಗಾತ್ಮಕತೆಗೆ ಪರ್ಯಾಯ ಹೆಸರೇ ರವಿಚಂದ್ರನ್ ಎಂದು ಹೇಳಲು ಇವರ ನಿರ್ದೇಶನದ ಹಾಗು ವಿನ್ಯಾಸದ ‘ಏಕಾಂಗಿ’, ‘ಅಪೂರ್ವ’ ಸಿನಿಮಾಗಳೇ ಉತ್ತಮ‌ ನಿದರ್ಶನ ಹಾಗು ನಟನೆಯಲ್ಲಿ ಮಗ್ನರಾಗಿರುವ ರವಿ ಚಂದ್ರನ್ ಅವರು ಸ್ಯಾಂಡಲ್ ವುಡ್ಡಿನ ಶೋಮ್ಯಾನ್ ಎನ್ನುವುದರಲ್ಲಿ ಅನುಮಾನವೇ ಇಲ್ಲ.


ಇಂದು ಅವರಿಗೆ 60 ವರ್ಷದ ಸಂಭ್ರಮದ ಹುಟ್ಟುಹಬ್ಬದ ದಿನ ನಮ್ಮ ಸುದ್ದಿ ಸಂತೆ ತಂಡದ ಪರವಾಗಿ ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ಼ ಸ್ಟಾರ್!

error: Content is protected !!