ಸ್ಮಶಾನಕ್ಕೆ ಸಿಲಿಕಾನ್ ಚೇಂಬರ್ ಕೊಡುಗೆ


ಸೋಮವಾರಪೇಟೆ ಪಟ್ಟಣದ ಸುತ್ತಮುತ್ತಲ ಸಾರ್ವಜನಿಕ ಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣಪಂಚಾಯ್ತಿ ವತಿಯಿಂದ ಕರ್ಕಳ್ಳಿಯಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಸಾರ್ವಜನಿಕ ಸ್ಮಶಾನಕ್ಕೆ ಸ್ಥಳೀಯ ರೋಟರಿ ಸಂಸ್ಥೆ ಸುಮಾರು ಎರಡು ಲಕ್ಷ ರೂ ವೆಚ್ಚದಲ್ಲಿ ಸಿಲಿಕಾನ್ ಚೆಂಬರ್ (ಶವ ಸುಡುವ ಒಲೆ) ಆನ್ನು ದಾನವಾಗಿ ನೀಡುತ್ತಿದ್ದು ಅದನ್ನು ಅಳವಡಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಪದಾದಿಕಾರಿಗಳು, ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ಕೊರೊನಾ ಸಂಕಷ್ಟದಲ್ಲಿ ಹೆಚ್ಚುತ್ತಿರುವ ಸಾವಿನಿಂದಾಗಿ ಶವ ಸಂಸ್ಕಾರಕ್ಕೆ ತೊಂದರೆ ಆಗಬಾರದು ಹಾಗೂ ಸಾರ್ವಜನಿಕ ಸ್ಮಶಾನದ ಕೊರತೆ ಅರಿತ ಕಂದಾಯ ಇಲಾಖೆ ಕರ್ಕಳ್ಳಿಯಲ್ಲಿ 1.75 ಎಕರೆ ಜಾಗ ಗುರುತಿಸಿ ತಹಶೀಲ್ದಾರ್ ಗೋವಿಂದರಾಜು ಪಟ್ಟಣಪಂಚಾಯ್ತಿಗೆ ಹಸ್ತಾಂತರಿಸಿದರು.

ಸ್ಥಳೀಯವಾಗಿ ಸೌದೆ ಹಾಗೂ ಪ್ರಾಕೃತಿಕ ಸಮಸ್ಯೆಗಳನ್ನು ಅರಿತ ರೋಟರಿ ಸಂಸ್ಥೆ ನೆರವಾಗಲು ಮುಂದೆಬಂದಿದೆ.
ಸೋಮವಾರಪೇಟೆ ಸುತ್ತಮುತ್ತಲಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸ್ಮಶಾನವಿಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು ಇದನ್ನು ಮನಗಂಡ ಕಂದಾಯ ಇಲಾಖೆ ಜಾಗ ಒದಗಿಸಿದೆ.

error: Content is protected !!