‘ಸ್ಪೀಡ್ ಮೆಷಿನ್’ ವಿಶು ರಾಘವಯ್ಯ!

ಅಂಜೇರಿರ ವಿಶು ರಾಘವಯ್ಯ ಇವರು ಆರೋಗ್ಯ ಇಲಾಖೆಯ ಕುಶಾಲನಗರದ “ಬ್ಯಾಕ್ ಬೋನ್ ” ಸಮುದಾಯ ಆರೋಗ್ಯ ಕೇಂದ್ರ ಕುಶಾಲನಗರದ ಕಛೇರಿಯ ದ್ವಿತೀಯ ದರ್ಜೆಯ ಸಹಾಯಕರಾಗಿರುವ ಇವರು ಕುಶಾಲನಗರದಲ್ಲಿ ಎಲ್ಲರಿಗೂ ಪರಿಚಯ, ದಿವಂಗತ ರಾಘವಯ್ಯ ಅಂಜೇರಿರ( ಎಂ. ಇ‌. ಜಿ. ಆರ್ಮಿ) ಮತ್ತು ದಿವಂಗತ ಶುಶ್ರೂಷಕಿಯರಾದ ಚಂದ್ರಮ್ಮ (೨೦೧೩ ನೇ ಸಾಲಿನ ಫ್ಲಾರೇನ್ಸ್ ನೈಟಿಂಗೇಲ್‌ ಆರನೇ ) ವಿಜೇತರರು ಇವರ ದ್ವಿತೀಯ ಪುತ್ರರಾದ ವಿಶು ರಾಘವಯ್ಯ ಕೊಡಗಿನ ಪ್ರತಿಯೊಬ್ಬರಿಗೂ (ಬಬ್ಲು) ಎಂದೇ ಖ್ಯಾತಿ, ಇವರು ಅರೆ ಭಾಷೆಯ ಲೇಖಕರು ಮತ್ತು ಅರೆಭಾಷೆ ಹಾಡುಗಳ ಲಿರಿಕ್ಸ್ ರೈಟರ್ ಕೂಡ ಆಗಿದ್ದಾರೆ.

ಪ್ರಸ್ತುತ ಹಲವಾರು ಕನ್ನಡ ಮತ್ತು ಅರೆಭಾಷೆಯಲ್ಲಿ ಮತ್ತು ಆಲ್ ಇಂಡಿಯಾ ರೇಡಿಯೋದಲ್ಲೂ (ಮಡಿಕೇರಿ) ಕಥೆ ಕವನಗಳು ಹೇಳಿದ್ದಾರೆ, ಪ್ರತಿಯೊಬ್ಬರಿಗೂ ಆನ್ ಲೈನ್ ಎಂಟ್ರಿಯನ್ನು‌ ಅತಿ ವೇಗವಾಗಿ ಮಾಡಿ ಆರೋಗ್ಯ ಇಲಾಖೆಯಲ್ಲಿ “ಸ್ಪೀಡ್ ಮೆಷಿನ್” ಎಂದು ಕರೆಸಿಕೊಳ್ಳುವ ಇವರು ಒಂದು ನಿಮಿಷಗಳ ಅವಧಿಯಲ್ಲಿ ತಲಾ ೪-೫ ರಿಜಿಸ್ಟ್ರೇಷನ್ ಮಾಡುತ್ತಾರೆ, ಸದಾ ಕೆಲಸದಲ್ಲಿ‌ ನಿಷ್ಠೆ , ಆಡಳಿತ ವೈದ್ಯಾಧಿಕಾರಿಗಳಾದ ಮಧುಸೂದನ ಇವರು ಸೂಚಿಸುವ ಎಲ್ಲಾ ಸಿಸ್ಟಮ್ ಕೆಲಸವನ್ನು ಮಾಡುವ ಇವರು ಎಲ್ಲಾದರು ಕೆಲಸದಲ್ಲಿ‌ ಆನ್ ಲೈನ್ ವೆಬ್ ಸೈಟ್ ಅಲ್ಲಿ ತೊಂದರೆ ಯಾದರೆ ,‌ ಆಫೀಸಿನಲ್ಲೂ ಮತ್ತು ಗಂಟಲು ದ್ರವ ಪರೀಕ್ಷೆ ಕೇಂದ್ರಕ್ಕೂ ಅತಿ ವೇಗದಲ್ಲಿ ಬಂದು ಅಲ್ಲಿನ ತಂತ್ರಗಾರಿಕೆಯಲ್ಲಿ ದೋಷ ನಿವಾರಣೆ‌ ಮಾಡಿ ಅಲ್ಲಿನ ಜನರನ್ನು‌ ಸಮಾಧಾನಗೊಳಿಸಿ‌ ದಿನಕ್ಕೆ ೧೦೦ರ ತನಕ ಜನಗಳ ರಿಜಿಸ್ಟ್ರೆಷನ್ ಕಾರ್ಯ ಮುಗಿಯುವವರೆಗೂ ಇದ್ದು ರಿಪೋರ್ಟ್ ಮಾಡುವರೆಗೆ ಇವರ ಕೆಲಸ ಅಪಾರವಾಗಿರುತ್ತದೆ ಇವರು ಅಸ್ಟೆ ಅಲ್ಲ ಇವರೊಂದಿಗೆ ‌ಮುತ್ತಮ್ಮ, ಶ್ರೀಲತ‌ ,‌ ಇನ್ನು‌ ಹಲವಾರು ಸ್ಪೀಡ್ ಮೆಷನ್ಗಳು ಕಾರ್ಯನಿರ್ವಾಹಣೆ ಮಾಡತ್ತಿದ್ದಾರೆ . ಅಂಜೇರಿರ ವಿಶು ರಾಘವಯ್ಯರವರು ಕೆಲವರಿಗೆ ಟ್ರೈನರ್ ಕೊಡ ಆಗಿದ್ದಾರೆ.

ಕರ್ತವ್ಯ ನಿಷ್ಠೆಯ ಜೊತೆಗೆ ವೇಗವನ್ನು ಕಾಯ್ದುಕೊಂಡು ಶಿಪ್ರಗತಿಯಲ್ಲಿ ಜನರಿಗೆ ಸ್ಪಂದಿಸುತ್ತಿರುವ ಮತ್ತು ಸೇವೆಯಲ್ಲಿರುವ ವಿಶು ರಾಘವಯ್ಯ ಅಂತಹವರು ಸರಕಾರಿ ಕಛೇರಿಗಳಲ್ಲಿ ಇದ್ದರೆ ಆಮೆಗತಿಯ ಕಾರ್ಯ ಪ್ರವೃತ್ತಿಯ ಶೈಲಿ ಇರುವುದಿಲ್ಲ ಎನ್ನಬಹುದು

error: Content is protected !!