fbpx

ಸ್ಥಳೀಯ ಯುವಕರಿಗೆ ಜಿಲ್ಲೆಯಲ್ಲಿಯೇ ಉದ್ಯೋಗ ಕಲ್ಪಿಸಿ ಕೊಡಿ ಎಂದು ನಗರ ಯುವ ಜೆ.ಡಿ.ಎಸ್ ಒತ್ತಾಯ ಹಾಗು ಪ್ರತಿಭಟನೆ ಎಚ್ಚರಿಕೆ

ವರದಿ:ರಂಜಿತ್ ಕವಲಪಾರ

ಮಡಿಕೇರಿ 27 ಆಗಸ್ಟ್: ಕೋವಿಡ್ ಬಳಿಕ ರಾಜ್ಯಾದ್ಯಂತ ಹಲವು ಯುವಕ ಯುವತಿಯರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ನಮ್ಮ ಕೊಡಗು ಜಿಲ್ಲೆಯೂ ಹೊರತಾಗಿಲ್ಲ. ವರ್ಷಾನುಕಾಲ ಪ್ರವಾಸಿಗರು ತುಂಬಿರುವ ಈ ಜಿಲ್ಲೆಯಲ್ಲಿ ಅನೇಕ ವಿದ್ಯಾವಂತ, ಪ್ರತಿಭಾವಂತ ಯುವಕರು ಸೂಕ್ತ ಉದ್ಯೋಗಾವಕಾಶವಿಲ್ಲದೆ ಭವಿಷ್ಯದ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ. ರಾಜ್ಯಕ್ಕೆ ನೀರುಣಿಸುವ ಜೀವನದಿ ಕಾವೇರಿ ತವರಿನ ಮಕ್ಕಳು ತಮ್ಮ ಸ್ವಂತ ಜಿಲ್ಲೆಯಲ್ಲಿ ಬದುಕು ಕಟ್ಟಿಕೊಳ್ಳಲಾಗದೆ ಉದ್ಯೋಗಕ್ಕಾಗಿ ಬೆಂಗಳೂರು, ಮೈಸೂರು ಸೇರಿದಂತೆ ಹೊರರಾಜ್ಯಗಳನ್ನು ಅವಲಂಬಿಸಬೇಕಾದ ಶೋಚನೀಯ ಸ್ಥಿತಿ ನಿರ್ಮಾಣವಾಗಿರುವುದು ದುರಂತವೇ ಸರಿ.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೊಡಗಿನ ಯುವಕರಿಗೆ ಜಿಲ್ಲೆಯಲ್ಲಿಯೇ ಉದ್ಯೋಗ ಕಲ್ಪಿಸಲು ಅಗತ್ಯ ಕ್ರಮ ವಹಿಸಬೇಕು. ಪ್ರವಾಸೋದ್ಯಮಕ್ಕೆ ಹೇರಳ ಅವಕಾಶವಿರುವ ಜಿಲ್ಲೆಯ ಎಲ್ಲಾ ಹೋಂಸ್ಟೇ, ರೆಸ್ಟೋರೆಂಟ್, ಹೋಟೆಲ್ ಸೇರಿದಂತೆ ಮುಂತಾದ ಖಾಸಗಿ ವಲಯದಲ್ಲಿ ಶೇ.೭೦ ರಷ್ಟು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ನೀಡಬೇಕು. ಜೊತೆಗೆ ಸರ್ಕಾರಿ ಇಲಾಖೆ/ಕಚೇರಿಗಳಲ್ಲಿ ತಾತ್ಕಾಲಿಕ/ಅರೆಕಾಲಿಕ/ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಸಂದರ್ಭ ಕೊಡಗು ಜಿಲ್ಲೆಯ ಯುವಕರಿಗೆ ಶೇ.೧೦೦ ರಷ್ಟು ಅವಕಾಶ ಕಲ್ಪಿಸಬೇಕು. ಇದರೊಂದಿಗೆ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಕುಶಾಲನಗರ ತಾಲೂಕಿನಲ್ಲಿ ಐಟಿ ಹಬ್ ನಿರ್ಮಾಣ ಮಾಡಿ, ಹಲವು ನಿರುದ್ಯೋಗಿ ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗ ದೊರಕಿಸಿಕೊಡುವಂತೆ ಜಿಲ್ಲೆಯ ಎಲ್ಲಾ ಯುವಜನತೆಯ ಪರವಾಗಿ ಜಿಲ್ಲಾ ಜಾತ್ಯಾತೀತ ಜನತಾದಳದ ಯುವ ಘಟಕ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ.
ಇದು ಸಾಧ್ಯವಾಗದೆ ಇದ್ದಲ್ಲಿ, ಜಿಲ್ಲೆಯ ಯುವ ಜನತೆಗೆ ಇಲ್ಲಿ ಕೆಲಸ ನಿರ್ವಹಿಸಲು ಅವಕಾಶ ಸಿಗದಿದ್ದ ಪಕ್ಷದಲ್ಲಿ ಕೊಡಗಿನ ಯುವಕರಿಗಾಗಿ ಜೆಡಿಎಸ್ ಪಕ್ಷವು ಬೀಗಿಗಿಳಿದು ಹೋರಾಟ ಆರಂಭಿಸಲಿದೆ. ಎಂದು ಈ ಸಂದರ್ಭ ಮಾದ್ಯಮಕ್ಕೆ ಹೇಳಿಕೆ ನೀಡಿದೆ.

ಮನವಿ ಪತ್ರ ನೀಡುವ ಸಂದರ್ಭ
ಜೆ.ಡಿ.ಎಸ್ ಮಡಿಕೇರಿ ನಗರ ಯುವ ಘಟಕದ ಜಿಲ್ಲಾ ವಕ್ತಾರ ರವಿ ಕಿರಣ್, ಮಡಿಕೇರಿ ನಗರ ಯುವ ಘಟಕದ ಅಧ್ಯಕ್ಷ ಮೋನಿಶ್ ಪಕ್ಷದ ಪ್ರಮುಖರಾದ, ಮದನ್, ಅಭಿತ್, ಪ್ರತಿಕ್ಷಾ, ಸೌಜನ್ಯ ಉಪಸ್ಥಿತರಿದ್ದರು.

error: Content is protected !!