ಸ್ಕೀಯಿಂಗ್ ನಲ್ಲಿ ಕೊಡಗಿನ ಯುವತಿ ಸಾಧನೆ: ದಕ್ಷಿಣ ಭಾರತದ ಮೊದಲ ಕ್ರೀಡಾಪಟುವಿನ ಸಾಧನೆ



ರಾಷ್ಟ್ರೀಯ ಚಳಿಗಾಲದ ಬಯಥ್ಲಾನ್ (ಸ್ಕೀಯಿಂಗ್) ಚಾಂಪಿಯನ್ ಶಿಪ್ ನಲ್ಲಿ ಕೊಡಗಿನ ತೆಕ್ಕಡ ಭವಾನಿ ಸಾಧನೆ ತೋರಿದ್ದಾರೆ.
ಜಮ್ಮು ಕಾಶ್ಮೀರ ದಲ್ಲಿ ನಡೆದ ಈ ಕ್ರಾಸ್ ಕಂಟ್ರಿ, ಸಾಹಸ ಕ್ರೀಡೆಯಲ್ಲಿ 10 ಕಿಲೋಮೀಟರ್ ಸ್ಪರ್ಧೆಯಾಗಿದ್ದು, 2.5 ಕಿ.ಮೀ ಜಾರುತ್ತಲೇ ಬುಲೆಟ್ ಫೈರಿಂಗ್ ಮಾಡಬೇಕಾಗಿದ್ದು 10 ಬುಲೆಟ್ ಪೈಕಿ 7 ಬುಲೆಟ್ ಗುರಿ ತಲುಪಿದ್ದು , ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿನ ಸ್ಪರ್ಧೆಯಲ್ಲಿ 5/5 ಸಾಧನೆ ಮಾಡಿದ್ದಾರೆ.
ಈ ಮೊದಲೇ ಈ ಭಾಗದ ಪ್ರದೇಶದಲ್ಲಿ ಉದ್ಯೊಗದಲ್ಲಿದ್ದ ಭವಾನಿ ಹವ್ಯಾಸವಾಗಿ ಪಡೆದು, ಕ್ರೀಡೆಗೆ ಯಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ. ಈ ಸಾಹಸ ಕ್ರೀಡೆಗೆ
ನಾರ್ವೆ ದೇಶದಲ್ಲಿ ತರಬೇತಿ ಪಡೆದ ಭವಾನಿ, ನಾಪೋಕ್ಲು ಗ್ರಾಮದ ಪೇರೂರುವಿನ ತೆಕ್ಕಡ ನಂಜುಂಡ ಹಾಗು ಪಾರ್ವತಿ ದಂಪತಿ ಪುತ್ರಿ.