ಸೋ.ಪೇಟೆ ಆರೋಗ್ಯ ಅಧಿಕಾರಿಗಳ ಸ್ಟಾಫ್ ತಂಡ ಕ್ರಿಕೇಟ್ನಲ್ಲಿ ಎರಡನೆಯ ಬಾರಿಗೂ ಚಾಂಪಿಯನ್ ಪಟ್ಟ: ಸೋಮವಾರಪೇಟೆ ಜಿ.ಹೆಚ್ ತಂಡ ರನ್ನರ್ಸ್



೨೦೨೧-೨೨ ಸಾಲಿನ ತಾಲ್ಲೂಕು ಮಟ್ಟದ ಆರೋಗ್ಯ ಇಲಾಖೆಯ ಕ್ರೀಡಾಕೂಟ ದಿ 19-2-22 ಮತ್ತು 20-2-22 ರಂದು ಕೂಡಿಗೆಯ ಡಯಟ್ ಮೈದಾನದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮೊದಲಿಗೆ ಟಾಸ್ ಗೆದ್ದ ಟಿ. ಹೆಚ್. ಓ ಸ್ಟಾಫ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿ ಐದು ಓವರ್‌ಗಳಲ್ಲಿ 45 ರನ್ನುಗಳನ್ನು ಕಲೆಹಾಕಿತು. ತಂಡದ ಪರ ಬ್ಯಾಟ ಮಾಡಿದ ಓಪನಿಂಗ್ ಆಟಗಾರ ಸೋಮಣ್ಣ ಮತ್ತು ಮಹೇಶ್ ಪೂಜಾರಿ, ಪ್ರಕಾಶ್, ರಾಘು , ಕವನ್ , ಉತ್ತಮ ಆಟ ಪ್ರದರ್ಶನ ಮಾಡಿ ತಂಡಕ್ಕೆ 45 ರನ್ನುಗಳ ಕಲೆ ಹಾಕಿ ಸೋಮವಾರಪೇಟೆ ಜಿಹೆಚ್ ತಂಡಕ್ಕೆ 46 ರನ್ನಗಳನ್ನು ನೀಡಿತು.
ಸೋಮವಾರಪೇಟೆ ಜಿ.ಹೆಚ್ ಪರ ಬೌಲ್ ಮಾಡಿದ ಹರೀಶ್ , ಬೇಲೂರ್, ವಿನಯ್, ಸುನಿಲ್ ಇವರು ತಲಾ ೧ ವಿಕೇಟ್ ಪಡೆದುರು. ನಂತರ ಬೌಲ್ ಮಾಡಿದ ಸೋಮವಾರಪೇಟೆ ತಾಲ್ಲೂಕು ಕಛೇರಿಯ ಪರ ವಿಜಿತ್ ಮೊದಲನೆಯ ಎಸೆತದಲ್ಲಿ ಸುನಿಲ್ ರವರ ಮೊದಲನೆಯ ವಿಕೇಟ್ ಅನ್ನು ವಿಶು ರಾಘವಯ್ಯ ರವರು ಕ್ಯಾಚ್ ಹಿಡಿದು ಯಶಸ್ಸಿನ ಹಾದಿಯಲ್ಲಿ ಸಂಭ್ರಮಿಸಿದರು. ನಂತರ ಸೋಮಣ್ಣ ತಲಾ ಒಂದು ವಿಕೇಟ್ ಮತ್ತು ಜಗ್ಗು ರವರು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಎದುರಾಳಿಯನ್ನು ಹೊಡೆದುರುಳಿಸಿ ರನ್ನಗಳನ್ನು ಕಟ್ಟಿಹಾಕಿ ನಾಲ್ಕನೆ ಓವರ್ನಲ್ಲಿ ವಿಜಿತ್ ಎರಡು ವಿಕೇಟ್ ಕಬಳಿಸಿ ಕೊನೆಯ ಓವರ್ನಲ್ಲಿ 6 ಎಸೆತಗಳಲ್ಲಿ 22 ರನ್ನಗಳ ಬೇಕಾಗಿದ್ದ ಸಂದರ್ಬದಲ್ಲಿ ವಿಶು ರಾಘವಯ್ಯ ರವರು ಬೌಲ್ ಮಾಡಿ ಮೂರು ಎಸೆತದಲ್ಲಿ ಚುಕ್ಕಿ ಬಾಲ್ ಮಾಡಿ ಎದುರಾಳಿಗಳ ಬೆವರಿಳಿಸಿ ನಂತರ ನಾಲ್ಕನೆ ಬಾಲ್‌ನಲ್ಲಿ ಕೇವಲ ಒಂದು ರನ್ ನೀಡಿ ನಂತರ ಐದನೇ ಬಾಲ್ ನಲ್ಲಿ ವಿಕೇಟ್ ಮತ್ತು ಕೊನೆಯ ಬಾಲ್ ನಲ್ಲಿ ಮತ್ತೊಂದು ವಿಕೇಟ್ ಪಡೆದು ಟಿಹೆಚ್ ಓ ಸ್ಟಾಫ್ ತಂಡದ ಗೆಲುವಿಗೆ ಕಾರಣರಾದರು. ತಂಡದ ಕೋಚ್ ಆಗಿ ಸ್ವಾಮಿ ಅಣ್ಣ ಕಾಣಿಸಿದ್ದು ಸೋಮವಾರಪೇಟೆ ತಾಲ್ಲೂಕಿನ ತಂಡ ಮುನ್ನೆಡೆಸಿದ *ಕ್ಯಾಪ್ಟನ್ ಕವನ್ ಮತ್ತು ಮಹೇಶ್ ಪೂಜಾರಿರವರ ತಂಡ ಎರಡನೇಯ ಬಾರಿಗೂ ಜಯಶಾಲಿಯಾದರು.
ತಂಡದ ಆಟಗಾರರಾದ, ಪಟ್ಟಿಯಲ್ಲಿ, ಮಹೇಶ್ ಪೂಜಾರಿ, ಸೋಮಣ್ಣ, ನಂದೀಶ್, ರಾಘು, ರಿತಿನ್, ಜಗ್ಗು, ವಿಜಿತ್,ವಿಶು, ಮೋಹನ್ ಇದ್ದರು. ಅತ್ಯುತ್ತಮ ಪಂದ್ಯ ಶ್ರೇಷ್ಠ ಪ್ರಶಸ್ತಿ ಶ್ರೀ *ಸೋಮಣ್ಣ , ಪಂಧ್ಯ ಪುರುಷ ವಿಜಿತ್, ಆಲ್ ರೌಂಡ್ ಶ್ರೀ ಬೇಲೂರು ಮತ್ತು ಪಂಧ್ಯ ಸ್ಥಿರ ಆಟಗಾರಾನಾಗಿ ಶ್ರೀ ಅಂಜೇರಿರ ವಿಶು ರಾಘವಯ್ಯ ರವರಿಗೆ ಲಭಿಸಿತು. ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಡಿ ಹಚ್ ಓ, ಆರ್ ಸಿ ಹೆಚ್, ಎಫ್ ಡ್ಬ್ಯೂ, ಬಿಹೆಚ್ಇಓ, ಮತ್ತು ಈ ಕಾರ್ಯಕ್ರಮದ ರುವಾರಿಯಾದ , ಡಾ ಶ್ರೀನಿವಾಸ್ ಮತ್ತು ಶ್ರೀ ರವಿಕುಮಾರ್ ಅವರು ಉಪಸ್ಥಿತಿಯಲ್ಲಿದ್ದರು. ಹಗ್ಗ ಜಗ್ಗಾಟ ದಲ್ಲಿ ಸೋಮವಾರಪೇಟೆ ಡಾ ಭರತ್ ತಂಡ ಜಯಶಾಲಿಯಾದರು, ದ್ವೀತಿಯ ವಿರಾಜಪೇಟೆ ಕಾರ್ಯಪ್ಪ ತಂಡ,ಸೋ ಪೇಟೆ ತ್ರೋಬಾಲ್ ಮಹಿಳೆಯರ ತಂಡ ಪ್ರಥಮ, ಜಿಹೆಚ್ ತಂಡ ದ್ವಿತೀಯ, ,ಮಹಿಳೆಯರ ವಿಭಾಗ ಹಗ್ಗ ಜಗ್ಗಾಟ ವಿರಾಜಪೇಟೆ ಪ್ರಥಮ, ಸೋ ಪೇಟೆ ತಂಡ ದ್ವಿತೀಯ ಸ್ಥಾನ ಪಡೆದರು.