fbpx

ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದಾರೆ ಮಿಥುನ್ ಎಂಬ “Expert” ತುರ್ತುವಾಹನ‌ ಚಾಲಕ (Ambulance Driver) . ‌ಹೌದು ಈ ವಿಷಯ ಖುಷಿಕರ ಅಲ್ಲವೇ?

ಕುಶಾಲನಗರದ ಆರೋಗ್ಯ ಕೇಂದ್ರದಲ್ಲಿ ಸತತವಾಗಿ ಆರು ವರ್ಷಗಳಿಂದ ತುರ್ತು ವಾಹನ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಚಾಲಕರಾದ ಮಿಥುನ್ ರವರು ಮೂಲತಃ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಬಸುರಿಗುಪ್ಪೆ, ಅಳುವಾರ ‌ ಕೇಕಡ ಮಾಣಿಚ್ಚ(ಮಣಿ) ಮತ್ತು ಶಶಿಕಲಾ ಅವರ ಪುತ್ರ ಚಿಕ್ಕದ್ರಿಂದಲೂ ಲಾರಿ, ಟ್ರಾಕ್ಟರ್, ಕಾರು, ಬೈಕುಗಳ ಮೇಲೆ ಆಸಕ್ತಿ ಇದ್ದಿದರಿಂದ ಇವರಿಗೆ ತನ್ನಗ್ತಾನೆ ವಾಹನಗಳ ಮೇಲೆ ಪ್ರೀತಿ ಹೆಚ್ಚಾಯಿತು.

ಇವರಿಗೆ ಏನಾದರೂ ಸಾಧನೆ ಮಾಡಬೇಕೆಂದು ಮನದಲ್ಲಿತ್ತು. ಹಾಗಾಗಿ ಇವರು ಆರಿಸಿಕೊಂಡ ಹುದ್ದೆ ವಾಹನ ಚಾಲಕ ಎಂಬ ಕಷ್ಟಕರವಾದ ಕೆಲಸ,ಅದು ಆಸ್ಪತ್ರೆಯ ತುರ್ತುವಾಹನ ಎಂದರೆ ಹುಡುಗಾಟವೇ ಅಲ್ಲ. ಹೀಗಿರುವಾಗ ಮಿಥುನ್ ರವರು ಯಾವುದೇ ಕೊಡಗಿನ ಮೂಲೆಗಳಲ್ಲಿ ರಸ್ತೆ ಅಪಘಾತ ಆದರೆ ಇವರ ತುರ್ತುವಾಹನ ಸಿದ್ದವಾಗಿರುತ್ತದೆ.

ಈ ಆರು ವರ್ಷಗಳ ಸೇವೆಯಲ್ಲಿ ಎಷ್ಟೋ ಸಾವಿರಾರು ಆಸ್ಸಿಡೆಂಟಾದ ಮತ್ತು ಡೆಲಿವರಿ ಪೇಷಂಟ್ ಗಳನ್ನು ಸರಿಯಾದ ಸಮಯಕ್ಕೆ ಬೆಂಗಳೂರು, ‌ಮೈಸೂರು, ಮಂಗಳೂರು ಹೀಗೆ ಹಲವು ಬೇರೊಂದು ಜಿಲ್ಲೆಯ ಆಸ್ಪತ್ರೆಗೆ ಅತೀ ಚುರುಕುತನದ ಡ್ರೈವಿಂಗನಿಂದ ಸಾಗಿಸಿ ಜೀವ ಉಳಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

ಇದೇ ೨೦೨೦ ಮಾರ್ಚ್‌ನಲ್ಲಿ ಕರೋನಾ ಎಂಬ ಮಹಾ ರೋಗ ಕೊಡಗಿನ ಕುಶಾಲನಗರದಲ್ಲಿ ಶುರುವಾಗಿದ್ದ ದಿನದಿಂದ ರೋಗಿಗಳನ್ನು ಆರೋಗ್ಯ ಇಲಾಖೆಯ ಕುಶಾಲನಗರದ ಡಾ. ಮಧುಸೂದನ ಸಾರಥ್ಯದಲ್ಲಿ ೧೦೦ಕ್ಕೋ ರೋಗಿಗಳನ್ನು ಹಗಲು- ರಾತ್ರಿಯಂದು ತನ್ನ ಜೀವವನ್ನೇ ಲೆಕ್ಕಿಸದೆ, ಕಾರ್ಯನಿರ್ವಹಿಸಿದ ಇವರಿಗೆ ಇಂದು ದಿನಾಂಕ ಆಗಸ್ಟ್ ೧೫ ರಂದು ಮಡಿಕೇರಿಯ ಹಳೆ ಕೋಟೆಯ ಆವರಣದಲ್ಲಿ ಮಡಿಕೇರಿ ಮೆಡಿಕಲ್ ಕಾಲೇಜಿನ ಡೀನ್ ಆದಂತಹ ಕಾರ್ಯಪ್ಪ, ಸಚಿವ ವಿ ಸೋಮಣ್ಣ, ಎಂ ಎಲ್ ಎ ಅಪ್ಪಚ್ಚು ರಂಜನ್, ಎಂ ಪಿ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಆದ ಅನ್ಸೀಸ್ ಕಣ್ಮಣಿ ಜಾಯ್ ಇವರ ಸಮ್ಮುಖದಲ್ಲಿ ಸನ್ಮಾನ ಮಾಡಿ, ಅಭಿನಂದನ ಪತ್ರ ಕೊಟ್ಟು ಗೌರವಿಸಿದ್ದು ವಿಷೇಶವಾಗಿತ್ತು.

ಕೇಕಡ ಮಿಥುನ್ ರವರ ಪಬ್ಲಿಕ್ ಸೇವೆ ಆರೋಗ್ಯ ಇಲಾಖೆಯಲ್ಲಿ ಇನ್ನಷ್ಟು ಭರದಲ್ಲಿ ಸಾಗಲಿ . ದೇವರು ಇವರಿಗೆ ಮತ್ತು ಇವರ ಕುಟುಂಬಕ್ಕೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಆಶಿಸೋಣ .

ಜೈ ಹಿಂದ್, ಒಂದೇ ಮಾತರಂ.

error: Content is protected !!