ಸೊಂಕಿತರ ವಸ್ತುಗಳ ಕಳ್ಳತನ ಪ್ರಕರಣ; ಆರೋಪಿ ಪೊಲೀಸ್ ವಶಕ್ಕೆ

ಕೊಡಗು:ಜಿಲ್ಲಾ ಕೇಂದ್ರ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಮೃತ ಸೋಂಕಿತರ ವಸ್ತುಗಳ ಕಳ್ಳತನ ಪ್ರಕರಣ ಸಂಬಂಧ ಮೇಕೇರಿ ಮೂಲದ ಬಿಳಿಗೇರಿ ಜಂಕ್ಷನ್ ನಿವಾಸಿ ಲೇಟ್ ದೇವರಾಜು ಪುತ್ರ ಸುಮಂತ್ (24)ನನ್ನು ಬಂಧಿಸಿದ್ದು, ಈತನ ಬಳಿಯಿದ್ದ ಮೂರು ಮೊಬೈಲ್,3 ಎಟಿಂ ಕಾರ್ಡ್ ವಶಕ್ಕೆ ಪಡೆಯಲಾಗಿದೆ.

ನಗರ ಪೋಲಿಸ್ ಠಾಣೆಯಲ್ಲಿ ದಾಖಲಾದ ದೂರಿನ ಹಿನ್ನಲೆಯಲ್ಲಿ ಸೋಮವಾರಪೇಟೆಯ ತೇಜಸ್ವಿ ಎಂಬುವವರ ಪತ್ನಿಗೆ ಸೇರಿದ ಮೊಬೈಲ್,ಕುರ್ಚಿ ಗ್ರಾಮದ ಸೋಮಯ್ಯ ರವರ ಮೊಬೈಲ್ ಮತ್ತೊಂದು ವಿಳಾಸ ಪತ್ತೆಯಾಗದ ಮೊಬೈಲ್ ಜೊತೆ ಇತರರ ಎಟಿಎಂ ಕಾರ್ಡ್ ಸಹ ವಶಕ್ಕೆ ಪಡೆಯಲಾಗಿದೆ. ಈ ಕೃತ್ಯ ನಡೆಸಲು ಟಿ.ಕಾಫಿ ಜೊತೆ ಆಹಾರ ಸರಬರಾಜು ಮಾಡುವ ಕೆಲಸಕ್ಕೆ ಕೋವಿಡ್ ಆಸ್ಪತ್ರೆಗೆ ಸೇರಿಕೊಂಡಿದ್ದ.

error: Content is protected !!