ಸೈನಿಕನ ಮೇಲಿನ ಹಲ್ಲೆ ಖಂಡಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಸಿದ್ಧಾಪುರದ ಕೇಸರಿ ಯೂತ್ ಮೂವ್ ಮೆಂಟ್ ಬೆಂಬಲ

ಕೊಡಗು ವೀರಸೈನಿಕರ ಪರಂಪರೆಯ ನಾಡು, ಅಂಥಹ ಕೊಡಗಿನಲ್ಲಿ ದೇಶಕಾಯುವ ಸೈನಿಕನ ಮತ್ತು ಆತನ ಕುಟುಂಬದವರ ಮೇಲೆ ಕೆಲವು ಜಾತ್ಯತೀತ ಪಕ್ಷದ ಮುಖವಾಡ ಹಾಕಿದ ಮತಾಂಧರು ಗೂಂಡಾಗಳನ್ನು ಕರೆಯಿಸಿ ಹಲ್ಲೆ ಮಾಡಿದ್ದು ಅಲ್ಲದೆ ಚಿನ್ನಾಭರಣ ದೋಚಿದ ಘಟನೆ ನಿಜಕ್ಕೂ ಕೊಡಗಿನ ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ಮತಾಂಧ ಗೂಂಡಾಗಳ ವಿರುದ್ಧ ಶುಕ್ರವಾರದಂದು ಮಡಿಕೇರಿಯಲ್ಲಿ ವಿವಿಧ ಹಿಂದೂ ಸಂಘಟನೆಗಳು ನ್ಯಾಯಕ್ಕಾಗಿ ನಡೆಸುವ ಬೃಹತ್ ಪ್ರತಿಭಟನೆಗೆ
ಕೇಸರಿ ಯೂತ್ ಮೂವ್ ಮೆಂಟ್ ನ ಸರ್ವ ಸದಸ್ಯರು ಬೆಂಬಲ ಸೂಚಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದಾಗಿ ಕೇಸರಿ ಯೂತ್ ಮೂವ್ ಮೆಂಟ್ ನ ಪದಾಧಿಕಾರಿಗಳು ತಿಳಿಸಿದ್ದಾರೆ, ಅದರೊಂದಿಗೆ ದೇಶ ಕಾಯುವ ಸೈನಿಕರ ಪರವಾಗಿ ಪ್ರತೀ ಮನೆಯಿಂದ ದೇಶಭಕ್ತರು ರಸ್ತೆಗಿಳಿದು ಈ ಹೋರಾಟಕ್ಕೆ ಕೈ ಜೋಡಿಸಲು ಮನವಿಯನ್ನು ಮಾಡಿದೆ.