fbpx

ಸೈನಿಕನ ಮೇಲಾದ ಹಲ್ಲೆ ಪ್ರಕರಣ ಖಂಡನಾರ್ಹ ಬಿ.ಜೆ.ಪಿ ಶಕ್ತಿ ಕೇಂದ್ರ

ಕೊಡಗು: ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ದುಡಿಯುವ ಸೈನಿಕ ಮಡಿಕೇರಿಯ ಯೋಧ ಅಶೋಕ್ ಕುಮಾರ್ ಮತ್ತು ಅವರ ಕುಟುಂಬದವರನ್ನು ಕಾರ್ಗಿಲ್ ಯುದ್ಧದ ವಿಜಯೋತ್ಸವದ ಹಿಂದಿನ ದಿನ, ಆಕಸ್ಮಿಕವಾಗಿ ವಾಹನ ಅಪಘಾತ ಆದ ವಿಷಯವನ್ನು ಹಿಡಿದುಟ ವಯಸ್ಸಾದವರು, ಮಕ್ಕಳು, ಮಹಿಳೆಯರು ಎಂಬುದು ಕೂಡಾ ಪರಿಗಣಿಸದೆ ಮಾರಣಾಂತಿಕ ಹಲ್ಲೆ ಮಾಡಿ ಚಿನ್ನಾಭರಣಗಳನ್ನು ದುಶ್ಕರ್ಮಿಗಳು ದೋಚಿದ ಘಟನೆ ಕೊಡಗಿನ ಸಮಸ್ತ ಪ್ರಜ್ಞಾವಂತ ನಾಗರೀಕರು ತಲೆ ತಗ್ಗಿಸುವಂತಹ ನೀಚ್ಛ ಕೃತ್ಯವಾಗಿದ್ದು, ಈ ಘಟನೆಯನ್ನು ಸಿದ್ಧಾಪುರ ಬಿಜೆಪಿ ಶಕ್ತಿಕೇಂದ್ರ ತೀವ್ರವಾಗಿ ಖಂಡಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು, ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವ ಪುಡಾರಿಗಳು ಇವರು ಎಂಬುದು ದುರಂತ ವಿಚಾರ.

ಇವರಲ್ಲಿ ಬಂಧಿತನಾದ ವ್ಯಕ್ತಿಯೊಬ್ಬ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷರು ಎಂಬ ಮಾಹಿತಿ ಹೊರಬರುತ್ತಿದ್ದು, ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಗೂಂಡಾಗಿರಿಯಿಂದಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುವ ಸಾಧ್ಯತೆಯಿದ್ದು, ಇಂತಹ ಗೂಂಡಾಗಳ ವಿರುದ್ಧ ಸಮಾಜದ ಸರ್ವರೂ ಕೂಡ ಕೈಜೋಡಿಸಬೇಕು ಹಾಗೂ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡವರ ಈ ರೀತಿಯ ಗೂಂಡಾವರ್ತನೆಯನ್ನು ನಾವು ವಿರೋಧಿಸುತ್ತಿದ್ದು, ಸೈನಿಕನ ಮೇಲಿನ ಹಲ್ಲೆಗೆ ಸಂಭಂದಿಸಿದಂತೆ ಆರೋಪಿಗಳನ್ನು ರಕ್ಷಿಸಲು ತೆರೆಮರೆಯಲ್ಲಿ ರಾಜಕೀಯ ಕಸರತ್ತು ನಡೆಸದೆ ಜೆಡಿಎಸ್ ಪಕ್ಷದ ಜಿಲ್ಲಾ ನಾಯಕರು ತಕ್ಷಣವೇ ಗೂಂಡಾಗಳನ್ನು ಪಕ್ಷದಿಂದ ಹೊರಹಾಕಬೇಕು ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇದರ ಹಿಂದಿರುವ ಎಲ್ಲಾ ದುಶ್ಕರ್ಮಿಗಳನ್ನು ಬಂಧಿಸಿ, ಕಾನೂನಿನ ಕಟಕಟೆ ಮುಂದೆ ನಿಲ್ಲಿಸಬೇಕು. ಅವರುಗಳಿಗೆ ತಕ್ಕ ಶಿಕ್ಷೆಯನ್ನು ನೀಡಿ, ಸೈನಿಕ ಮತ್ತು ಆತನ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಸಿದ್ಧಾಪುರ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ಪ್ರವೀಣ್ ಸಿದ್ಧಾಪುರ, ಗಿರೀಶ್, ಸಹ ಪ್ರಮುಖರಾದ ರವಿ, ರಂಜನ್ ಒತ್ತಾಯಿಸಿದ್ದಾರೆ.

error: Content is protected !!