fbpx

ಸೈನಿಕನಾಗಿ ದೇಶ  ರಕ್ಷಣೆ, ಪೊಲೀಸಾಗಿ ಆಂತರಿಕ ಭದ್ರತೆಗಾಗಿ ದುಡಿಯುತ್ತಿರುವ ಧೀರ ಇವರು!

EPISODE-13

ರಾಷ್ಟ್ರ ರಕ್ಷಕರು               

ಆದಾಗತಾನೆ ಸೇನೆಗೆ ಸೇರಿದ್ದವು, ಸೇನಾ ತರಬೇತಿಯಲ್ಲಿ ನೀಡಿದಂತೆ ನಾವೂ ಉತ್ಸಾಹದಿಂದ ಪಾಕ್ ಗಡಿಯಲ್ಲಿ ಯುವ ಸೈನಿಕರು ಇದ್ದವು ಬಾಂಬಿಂಗ್, ಶೆಲ್ಲಿಂಗ್ ನೈಜ ದರ್ಶನವಾಯಿತು, ಒಂದು ರಾತ್ರಿ ನೈಟ್ ವಿಷನ್ ಕ್ಯಾಮರಾದಲ್ಲಿ ನನ್ನ ತಾಯ್ನಾಡಿನ ಗಡಿಯೊಳಗೆ ದೈತ್ಯಾಕಾರದ ವೈರಿಗಳು ನುಸುಳುವುದು ನೋಡಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು, ಅಬ್ಬಾ… ಸೇನೆಯ ಸೇವೆ ನಿಜಕ್ಕೂ ಸವಾಲೇ ಸರಿ… ಮುಂದೆ ಹೇಳ್ತಿನಿ ನೋಡಿ ಹವಲ್ದಾರ್ ಕೋಡಿ ರಾಜಗೋಪಾಲ್ ರವರ ಸೇನಾ ಜರ್ನಿ ಬಗ್ಗೆ.

West begal mi 17 helicopter helibone operation ತರಬೇತಿಯಲ್ಲಿ ಪಾಲ್ಗೊಂಡಿದ್ದ ಸಂದರ್ಭ

ಹವಲ್ದಾರ್  ರಾಜಗೋಪಾಲ್ ಮೂಲತಃ ಭಾಗಮಂಡಲದ ಚೇರಂಗಾಲ ಗ್ರಾಮದ ಕೋಡಿ ಕುಟುಂಬಕ್ಕೆ ಸೇರಿದವರು.ಎರಡು ಅಣ್ಣಂದಿರು, 3 ಅಕ್ಕಂದಿರ ಜೊತೆಗಿನ ತುಂಬು ಕುಟುಂಬ ಅವರದ್ದಾಗಿತ್ತು. ಕೋಡಿ ಪೂವಯ್ಯ ಹಾಗು ಕೂಸಕ್ ದಂಪತಿಯ ಕೊನೆಯ ಮುದ್ದಿನ ಮಗ, ರಾಜಗೋಪಾಲರಿಗೆ ಊರಿನಲ್ಲಿ ಯಾರೇ ಸೇನೆಗೆ ಸೇರಲಿ ತಾನೂ ಸೇನೆಗೆ ಸೇರಬೇಕೆಂದು ಹಠ ಹಿಡಿದು, ಅಲ್ಲಿನ ಚಟುವಟಿಕೆಗಳು  ದೇಶದ ಮೇಲಿನ ಗೌರವ ಹೆಚ್ಚಾಗಿ ಪ್ರೇರಣೆಗೊಂಡು ಅವರಿಗೆ ತಮ್ಮ ಸಂಬಂಧಿಕರು ಸೇನೆಗೆ ಸೇರಲು ಮುಂದೆ ಬಂದರು.

ಅಂತೆಯೇ ನಿರಂತರ ಪ್ರಯತ್ನ ನಡೆಸಿದರು, ಕೆಲವೆಡೆ ಎತ್ತರ, ಕೆಲವೆಡೆ ಎದೆ ಮತ್ತು ತೂಕದ ಸಲುವಾಗಿ ಮೂರು ಪ್ರಯತ್ನದ ಬಳಿಕ  ಮಡ್ರಾಸ್ ಇನ್ಫೆಂಟರಿಗೆ ಸೇರ್ಪಡೆಯಾದರು. ಬಡತನದ ನಡುವೆಯೇ ಕಾಲ್ನಡಿಗೆಯಲ್ಲಿ ಶಾಲೆಗೆ ತೆರಳಿ ವಿದ್ಯಾಭ್ಯಾಸ ಮುಗಿಸಿದವರು ಮಡ್ರಾಸ್ ರೆಜಿಮೆಂಟ್ ಸೆಂಟರ್ ಅಲ್ಲಿ ತರಬೇತಿ ಪಡೆದರು.

ಸಹೋದ್ಯೋಗಿಗಳೊಂದಿಗೆ ಹವಲ್ದಾರ್ ಕೋಡಿ ರಾಜಗೋಪಾಲ್

ನಂತರ ಜಮ್ಮುವಿನಲ್ಲಿ 1997- 98 ಸಾಲಿನಲ್ಲಿ ಕಿರಣ್ ಸೆಕ್ಟರ್ ಎಂಬಲ್ಲಿ ರಾತ್ರಿ ಗಸ್ತು ತಿರುಗಬೇಕಿತ್ತು. ಫೀಲ್ಡ್ ಸರ್ವೀಸ್ ಎಂದು ಸುಮಾರು ಎಂಟು ವರ್ಷದ ಸೇನಾ ಸೇವೆಯನ್ನು ಅಲ್ಲಿಯೇ ಮಾಡಿದರು. ಅಲ್ಲಿ 12 ಮಂದಿಯ ತಂಡದಲ್ಲಿದ್ದರು  ರಾಜಗೋಪಾಲ್
ಬಂಕರ್ ಇಂದ  ಪಾಕಿಸ್ತಾನಿ Convoy, Bunkerಗಳು ಕಾಣುವಷ್ಟು ಸಮೀಪದಲ್ಲಿ ಇದ್ದವು.‌

ಅಲ್ಲಿ ಪ್ರಾಥಮಿಕ ಹಂತದ ಸೇವೆ ನಡೆಸಿ 2000 ಇಸವಿಗೆ ಚೆನೈಯಲ್ಲಿ ಮೀನಂ ಪಕ್ಕಂ ಏರ್ಪೋಟ್ ಬಳಿಯ Quick reaction teamನಲ್ಲಿ ಡೆಮೋ ಟೀಂನಲ್ಲಿ ಸೇವೆ  ನಂತರ ಕುಪುವಾಡ, ಹಂಡ್ವಾರ, ಬಾರಾಮುಲ್ಲಾ, ನೌಶೇರಾ, ಓರೈ, ತಾಂಗದಾರ್, ಶ್ರೀನಗರ, ಪಟಾನು, ನೌವ್ ಗಾವ್, ರಾಜಸ್ಥಾನ್, ತವಾಂಗ್, ಲಾಲ್ ಘಡ್, ಅರುಣಾಚಲ ಪ್ರದೇಶ, ಸಿಖ್ಖಿಂ ಈ ಎಲ್ಲಾ ಕಡೆಗಳಲ್ಲಿ ದೇಶದ ಸೇವೆ ಮಾಡಿದರು. ಭೂತಾನ್ ಅಲ್ಲಿ ಕೂಡ ಶಸ್ತ್ರಾಸ್ತ್ರ ತರಬೇತಿಗಾಗಿ 8 ತಿಂಗಳ ಕಾಲ ಕರ್ತವ್ಯ ಸಲ್ಲಿಸಿದರು.‌

ಹವಲ್ದಾರ್ ಆಗಿ ವಿವಿಧ ಕಡೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಬಂದರು. Betalian CSD, Kote NCO, Drill Couse, Rashtriya Rifles ನಲ್ಲಿ ತಮ್ಮ ಅಪೂರ್ವ ಸೇವೆ ಸಲ್ಲಿಸಿದರು. ಆ ಜವಾಬ್ದಾರಿಗಳ ಪೈಕಿ  Hawaldar Major ಎಂಬ ಸ್ಥಾನದ ಜವಾಬ್ದಾರಿಯು ಬಹಳ ಸಂತಸ ತಂದಿತ್ತು ಎಂದು ನೆನೆದರು. Company Hawaldar Major ಆಗಿ ಸೇನೆಗೆ ಸೇರುವ ಹೊಸ ಯುವಕರ ಬಗ್ಗೆ ತಿಳಿದುಕೊಂಡು ಅವರ ಸಮಸ್ಯೆಗಳನ್ನೆಲ್ಲಾ ಗೊತ್ತು ಮಾಡಿಕೊಳ್ಳಬೇಕಿತ್ತು.

ನಂತರ ಅದನ್ನೆಲ್ಲಾ ಕಂಪೆನಿ Commanderಗೆ ತಿಳಿಸಿ ಬಗೆಹರಿಸಿ ಕೊಡುವ ಹೊಣೆಯನ್ನು ನಿಭಾಯಿಸಬೇಕಿತ್ತು ಎಂದು ನೆನಪಿಸಿಕೊಂಡರು ಹಳೆ ದಿನಗಳನ್ನು. ಹಾಗೆ ಯುವ ಸೇನಾನಿಗಳ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸುವ ವಿಚಾರ ಸಂತೋಷ ಉಂಟು ಮಾಡಿತ್ತು. 2009ಕ್ಕೆ ಮಾವಿನ ಕಟ್ಟೆ ದೇರಣ್ಣ ಗೌಡರೆಂಬುವವರ ಮಗಳಾದ ಶೋಭಿತಾ. ಎಂ ಅವರೊಂದಿಗೆ ವಿವಾಹವಾಯಿತು. ಅನಿವಾರ್ಯ ಕಾರಣಗಳಿಂದಾಗಿ 2017 ಮಾಚ್೯ 31 ರಂದು ಸ್ವಯಂ ನಿವೃತ್ತಿ ತೆಗೆದುಕೊಂಡರು. ಇನ್ನು ಎರಡು ವರ್ಷ ಸೇನೆಯಲ್ಲಿಯೇ ಕರ್ತವ್ಯ ಮುಂದುವರೆಸಿದ್ದರೆ‌, ಹವಲ್ದಾರರ ಸ್ಥಾನದಿಂದ Junior Commissioner officer ಸ್ಥಾನಕ್ಕೆ ಮುಂಬಡ್ತಿ ಸಿಗುವ ಸಾಧ್ಯತೆಯೂ ಇತ್ತು.

ಸೇನೆಯಲ್ಲಿ ಒಟ್ಟು 20 ವರ್ಷ, 9 ತಿಂಗಳು, 5 ದಿನಗಳ ಕಾಲ ಸೇನೆಯಲ್ಲಿ ಕರ್ತವ್ಯವನ್ನು ದೇಶಕ್ಕಾಗಿ ಸಲ್ಲಿಸಿದರು. ನಿವೃತ್ತಿಯ ನಂತರ 2 ವರ್ಷಗಳ ಕಾಲ ಎಂ.ಆರ್.ಪಿ.ಎಲ್, ಹೆಚ್.ಪಿ.ಸಿ.ಎಲ್ ಕಂಪೆನಿಗಳಲ್ಲಿ ಕೆಲಸ ಮಾಡಿ ನಂತರ ಪೊಲೀಸ್ ಪರೀಕ್ಷೆಯಲ್ಲಿ ಉತೀರ್ಣರಾಗಿ ಜನವರಿ 2019ರಂದು ಬೆಂಗಳೂರಿನ City Armed Reserve Police ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಅಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ಬೆಂಗಳೂರಿನ City Armed Reserve Police ಪಡೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ ಈ ಮಾಜಿ ಸೈನಿಕರು

ಮಾವಿನಕಟ್ಟೆಯ ದೇರಣ್ಣ ಗೌಡರ ಮಗಳು  ಶೋಭಿತಾ ಎಂ ಅವರನ್ನು ವಿವಾಹವಾದರು. ಈಗ ಹೆಂಡತಿ ಮಕ್ಕಳಾದ ಪೃಥ್ವಿ ರಾಜ್ ಹಾಗು ಹಾರ್ದಿಕ್ ರಾಜ್ ಅವರೆಲ್ಲಾ ಕೋಡಮನೆ ಕುರುಂಜಿಗುಡ್ಡೆಯಲ್ಲಿ ವಾಸವಾಗಿದ್ದಾರೆ. ಸೇನೆಯಲ್ಲಿನ ತಮ್ಮ ಸೇವಾವಧಿಯನ್ನು ಮೆಲುಕು ಹಾಕಿ, ‘ದೇಶ ಸೇವೆ ಮಾಡಿದ್ದು, ತೃಪ್ತಿಯನ್ನು ತಂದಿದೆಯಂತೆ.

ಸೇನೆಯಲ್ಲಿ ರಾಷ್ಟ್ರದ ರಕ್ಷಣೆ ಮಾಡಿ ದೇಶದ ಬಾಹ್ಯ ಸುರಕ್ಷತೆಗಾಗಿ ದುಡಿದ ಅವರು ಈಗ ರಾಜ್ಯದ ಅಂತರಿಕ ಭದ್ರತೆಗೆ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಸಾರ್ಥಕತೆಯೊಂದಿಗೆ ಸಲ್ಲಿಸುತ್ತಿದ್ದಾರೆ.

ಗಿರಿಧರ್ ಕೊಂಪುಳೀರಾ, ಅಂಕಣಕಾರರು
error: Content is protected !!