ಸೈಕಲ್ ಜಾಥ ನಡೆಸಿ ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದ ವಾಯುಸೇನೆಯ ಯೋಧರು!
Western aircommand ( ಸುಭ್ರತೋ ಪಾರ್ಕ್ ) ನಿಂದ ಕೆಂಪು ಕೋಟೆ ಮಾರ್ಗವಾಗಿ ದೆಹಲಿ ಗೇಟ್ ವರೆಗೂ ವಾಯುಪಡೆ ಯೋಧರಿಂದ ಕನ್ನಡ ರಾಜ್ಯೋತ್ಸವವನ್ನ ಸೈಕಲ್ ಜಾಥ ಮಾಡುವ ಮೂಲಕ ವಿಭಿನ್ನವಾಗಿ ಆಚರಿಸಲಾಯ್ತು.
ಸುಮಾರು 20 k.m ಸೈಕಲ್ ಜಾಥವನ್ನ ಮೂಲಕ ಇಂಡಿಯಾ ಗೇಟ್ ತಲುಪಿ ಅಲ್ಲಿ ಕನ್ನಡ ಧ್ವಜ ಹಾರಿಸಿ ಕನ್ನಡಾಭಿನಾನ ಮೆರೆದಿದ್ದಾರೆ. ಬೆಳಗ್ಗೆ 9 ಗಂಟೆಯಿಂದ western aircommand ನಿಂದ ಸೈಕಲ್ ಜಾಥ ನಡೆಸಲಾಯಿತು.

ಸೇನೆಯಲ್ಲಿ ಸೇವೆ ಸಲ್ಲಿಸುವ ನಾವು ವಿವಿಧ ಪ್ರಾಂತ್ಯಗಳಲ್ಲಿ ಕೆಲಸ ಮಾಡ್ತೀವಿ. ಕರ್ನಾಟಕ ಬಿಟ್ಟು ಬೇರೆ ರಾಜ್ಯದಲ್ಲಿ ನಮ್ಮ ಭಾಷೆ ಕನ್ನಡ ಕೇಳೋದಕ್ಕೆ ಕುಷಿ, ಮೈ ರೋಮಾಂಚನ ಆಗುತ್ತದೆ ಎಂದು ಕನ್ನಡ ಪ್ರೇಮವನ್ನು ವ್ಯಕ್ತಪಡಿಸಿದರು ಈ ಯೋಧರು.

ಹೀಗಾಗಿ ಈ ಸಂದರ್ಭ, ನಾವೆಲ್ಲ ಕನ್ನಡಿಗರು ಸೇರಿ ಕನ್ನಡ ರಾಜ್ಯೋತ್ಸವ ಆಚರಿಸೋಣ ಎಂದು ನಿರ್ಧರಿಸಿ ಇಂದು ರಾಷ್ಟ್ರ ರಾಜಧಾನಿ ದೆಹಲಿಯ ಇಂಡಿಯ ಗೇಟ್ ಬಳಿ ಕನ್ನಡ ಧ್ವಜ ಹಾರಿಸಿ ಕನ್ನಡಾಭಿಮಾನ ಮೆರೆದಿದ್ದೀವಿ ಎಂದರು.