ಸೇಲಂನಲ್ಲಿ ಮೋದಿ ಇಡ್ಲಿ ಹವಾ

ತಮಿಳುನಾಡು:ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್,ಕುಮಾರಣ್ಣ ಕ್ಯಾಂಟೀನ್ ಕೇವಲ 10 ರುಪಾಯಿಗೆ ಆಹಾರ ನೀಡುವುದರ ಮೂಲಕ ಒಂದು ಸಣ್ಣ ಕ್ರಾಂತಿಯನ್ನೇ ನಡೆಸಲು ಕೈ ಹಾಕಿ ಹಲವು ವಿವಾದ,ಕೊರೊನಾ ನಡುವೆ ಇದೀಗ ಎಲ್ಲಾ ಕಡೆಗಳಲ್ಲಿ ಸ್ಥಗಿತಗೊಂಡಿದೆ.ಹೀಗಿರುವಾಗ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಮೋದಿ ಇಡ್ಲಿ ಸಾಂಬಾರ್ ಸದ್ದು ಮಾಡುತ್ತಿದೆ.

ಅಪ್ಪಟ ಮೋದಿ ಅಭಿಮಾನಿ ಮಹೇಶ್ ವ್ಯಾಸಂಗ ಮಾಡುವ ವೇಳೆ ತನ್ನ ಗುರುಗಳು ಹೇಳಿದ ಮಾತಿನಿಂದ ಪ್ರೇರಣೆಗೊಂಡು ಇದೀಗ ಈ ಸಮಾಜಮುಖಿ ಕೆಲಸ ನಡೆಸುತ್ತಿದ್ದಾರೆ. ಆರಂಭದಲ್ಲಿ 500 ಇಡ್ಲಿ ತಯಾರಿಸಿ ಹೆಚ್ಚೆಚ್ಚು ಕಾರ್ಮಿಕರು,ಆರ್ ಎಂ ಸಿ,ಮಾರುಕಟ್ಟೆ ಪ್ರದೇಶದಲ್ಲಿ 200 ಎಂಎಲ್ ಸಾಂಬಾರ್ ಜೊತೆ ನಾಲ್ಕು ಇಡ್ಲಿಯನ್ನು ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ನೀಡಲಾಗುತ್ತಿತ್ತು,ಇದೀಗ ದಿನಕ್ಕೆ 40,000 ಇಡ್ಲಿ ತಯಾರಿಸುಷ್ಟರ ಮಟ್ಟಿಗೆ ಬೆಳೆದು ನಿಂತಿದೆ‌ಇವರು ಯಾವುದೇ ಕಟ್ಟಡಗಳನ್ನು ನಿರ್ಮಿಸಿಲ್ಲ ಬದಲಾಗಿ ತಮ್ಮ ಬಳಿರುವ ಬಳದಲ್ಲೇ ಒಂದಿಬ್ಬರು ಇಡ್ಲಿ ತಯಾರಿಸಿದ್ದರೆ,ಇನ್ನಿಬ್ಬರು ಸಾಂಬಾರ್ ತಯಾರಿಸಿ ಎರಡು ಮೇಜು ಇಟ್ಟು ಇಡ್ಲಿ ಕೊಡುವುದರ ಮೂಲಕ ತಮಿಳುನಾಡಿನಲ್ಲಿ ಅಮ್ಮಾ ಕ್ಯಾಂಟೀನ್ ಬಳಿಕ ಹೊಸದೊಂದು ಕ್ರಾಂತಿ ಶುರುವಾದಂತಿದೆ.

error: Content is protected !!