ಸೆ.24 ಮತ್ತು 25ರಂದು ೨೦ ನೇ ವರ್ಷದ ಆಟೋಕ್ರಾಸ್ ರ‍್ಯಾಲಿ

ಗೋಣಿಕೊಪ್ಪ : ಗೋಣಿಕೊಪ್ಪ ದಸರಾ ಪ್ರಯುಕ್ತ ಸೆಪ್ಟೆಂಬರ್ ೨೪ ಮತ್ತು ಸೆ. ೨೫ ರಂದು ಶ್ರೀಕಾವೇರಿ ದಸರಾ ಸಮಿತಿ ಹಾಗೂ ಸೌತ್‌ಕೂರ್ಗ್ ಫಾಮರ್ಸ್ ಅಸೋಸಿಯೇಷನ್ ವತಿಯಿಂದ ಹರಿಶ್ಚಂದ್ರಪುರ ಮನೆಯಪಂಡ ಯಾರ್ಡ್ನಲ್ಲಿ ೨೦ ನೇ ವರ್ಷದ ಆಟೋಕ್ರಾಸ್ ರ‍್ಯಾಲಿ ಆಯೋಜಿಸಲಾಗಿದೆ ಎಂದು ಸೌತ್‌ಕೂರ್ಗ್ ಫಾಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ. ಕೆ. ಬೋಪಣ್ಣ ತಿಳಿಸಿದ್ದಾರೆ.

ಗುರುವಾರ ಪ್ರೆಸ್‌ಕ್ಲಬ್‌ನಲ್ಲಿ ಲಾಂಛನಾ ಬಿಡುಗಡೆಗೊಳಿಸಿ ಮಾತನಾಡಿ, ಸೆ. ೨೪ ರಂದು ದ್ವಿಚಕ್ರ, ೨೫ ರಂದು ನಾಲ್ಕುಚಕ್ರ ರ‍್ಯಾಲಿ ನಡೆಯಲಿದೆ. ಮಹಿಳೆಯರಿಗೆ ಲೇಡಿಸ್ ಕ್ಲಾಸ್ ವಿಭಾಗದಲ್ಲಿ ಕಾರು ಸ್ಪರ್ಧೆ ಇದೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ರ‍್ಯಾಲಿಪಟುಗಳು ಕೂಡ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ೨೦೦ ಕ್ಕೂ ಹೆಚ್ಚು ವಾಹನ ಪಾಲ್ಗೊಳುತ್ತಿವೆ. ದೂದರಿಂದ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ಪ್ರೋತ್ಸಾಹಿಸಲು ೨ ಪಟುಗಳಿಗೆ ಏರ್ ಟಿಕೆಟ್ ನೀಡಲಾಗುವುದು. ಒಂದು ದಿನ ದೇಶದಲ್ಲಿ ಸುತ್ತಾಡಲು ಅವರಿಗೆ ಅವಕಾಶ ದೊರೆಯಲಿದೆ ಎಂದರು. ನಾಲ್ಕುಚಕ್ರ ಚಾಂಪಿಯನ್‌ಗೆ ೧ ಲಕ್ಷ, ದ್ವಿಚಕ್ರ ಚಾಂಪಿಯನ್‌ಗೆ ೨೫ ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.

ಒಟ್ಟು ೨೫ ವಿಭಾಗದ ಸ್ಪರ್ಧೆ ನಡೆಯಲಿದೆ. ದ್ವಿಚಕ್ರದಲ್ಲಿ ಕೂರ್ಗ್ ನಾವೀಸ್, ಕೂರ್ಗ್ ಓಪನ್, ಕೂರ್ಗ್ ಬುಲೆಟ್ ಓಪನ್, ನಾವೀಸ್ ಕ್ಲಾಸ್ ಎನ್ -೧, ಕಿಡ್ಸ್ ಕ್ಲಾಸ್ (೧೪ ವಯೋಮಿತಿ), ೪ ಸ್‌ರೋಕ್ ಓಪನ್, ಕ್ಲಬ್ ಕ್ಲಾಸ್ ಓಪನ್, ನ್ಯೂ ಬಾಯ್ಸ್ ಓಪನ್, ಸ್ಕೂಟರ್ ಓಪನ್, ಮೋಪೆಡ್ ಓಪನ್, ಇಂಡಿಯನ್ ಓಪನ್, ಫಾರಿನ್ ಓಪನ್ ಮೋಟೋ -೧, ಫಾರಿನ್ ಓಪನ್ ಮೋಟೋ -೨, ನಾಲ್ಕುಚಕ್ರ ವಿಭಾಗದಲ್ಲಿ ೮೦೦ ಸಿಸಿ, ೧೧೦೦ ಸಿಸಿ, ಕೂರ್ಗ್ ನಾವೀಸ್, ಕೂರ್ಗ್ ಓಪನ್, ಡೀಸೆಲ್ ಕ್ಲಾಸ್, ಜಿಪ್ಸಿ ಓಪನ್, ಎಸ್ಟೀಮ್ ಕ್ಲಾಸ್, ೧೪೦೦ ಸಿಸಿ, ೧೬೦೦ ಸಿಸಿ, ಇಂಡಿಯನ್ ಒಪನ್ ಕ್ಲಾಸ್, ಅನ್‌ರಿಸ್ಟ್ರಿಕ್ಟೆಡ್ ಓಪನ್, ರೇಸ್ ಫಾರ್ ರೋಲ್ ಕೇಜ್ ಕರ‍್ಸ್, ಟ್ಯೂರ‍್ಸ್ ಕ್ಲಾಸ್ ಸ್ಪರ್ಧೆ ನಡೆಯಲಿದೆ. ರ‍್ಯಾಲಿ ಉತ್ತಮ ಛಾಯಾಚಿತ್ರಕ್ಕೆ ಬೆಸ್ಟ್ ಫೋಟೋಗ್ರಫಿ ಬಹುಮಾನ ಕೂಡ ನೀಡಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಶ್ರೀ ಕಾವೇರಿ ದಸರಾ ಸಮಿತಿ ಪ್ರ. ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಖಜಾಂಚಿ ಗಾಂಧಿ ದೇವಯ್ಯ, ಸೌತ್‌ಕೂರ್ಗ್ ಫಾಮರ್ಸ್ ಅಸೋಸಿಯೇಷನ್ ಸದಸ್ಯರಾದ ಪಂದ್ಯಂಡ ಹರೀಶ್, ಬೇರೇರ ಸೂರಜ್ ಇದ್ದರು.

error: Content is protected !!