ಸೆ.18 ರಂದು ನೂತನ ಸಭಾ ಭವನ ಉದ್ಘಾಟನೆ

ಮಡಿಕೇರಿ ಸೆ.16:-ಚೇರಂಬಾಣೆ ಗೌಡ ಸಮಾಜದ ವತಿಯಿಂದ ನೂತನ ಸಭಾ ಭವನ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್, 18 ರಂದು ಬೆಳಗ್ಗೆ 10 ಗಂಟೆಗೆ ಕಾರುಗುಂದದಲ್ಲಿ ನಡೆಯಲಿದೆ.
ಶಾಸಕರು ಹಾಗೂ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ, ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷರಾದ ಕೊಡಪಾಲು ಗಣಪತಿ, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಂ.ಪಿ.ಸುಜಾ ಕುಶಾಲಪ್ಪ, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎನ್.ಮಂಜುನಾಥ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಆರ್.ಸೋಮಣ್ಣ, ಬೆಂಗೂರಿನ ಹೃದ್ರೋಗ ಹಾಗೂ ಮಧುಮೇಹ ತಜ್ಞರಾದ ಡಾ.ಬೋಜಮ್ಮ ಜೋಯಪ್ಪ ಬೈತಡ್ಕ, ಉದ್ಯಮಿಗಳಾದ ಕೇಕಡ ಎ.ನಂದ, ತೇನನ ಎಸ್.ರಾಜೇಶ್, ಆರ್ಕಿಟೆಕ್ಟ್ ಎಂಜನಿಯರ್ ಮುಕ್ಕಾಟಿ ಎ.ಮನೋಜ್ ಕುಮಾರ್, ಕುಂದಚೇರಿ ನಿವೃತ್ತ ಎಂಜಿನಿಯರ್ ಕೆದಂಬಾಡಿ ಆರ್.ರಾಜು, ಇತರರು ಪಾಲ್ಗೊಳ್ಳಲಿದ್ದಾರೆ.