ಸೆ.17 ರಿಂದ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ

ಮಡಿಕೇರಿ ಸೆ.16:-ರಕ್ತದಾನ ಅಮೃತ್ ಮಹೋತ್ಸವ ಅಭಿಯಾನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯು “ರಕ್ತದಾನವು ಒಗ್ಗಟ್ಟಿನ ಕಾರ್ಯವಾಗಿದೆ. ಪ್ರಯತ್ನಕ್ಕೆ ಕೈಜೋಡಿಸಿ ಮತ್ತು ಜೀವಗಳನ್ನು ಉಳಿಸಿ” ಎಂಬ ಘೋಷವಾಕ್ಯದೊಂದಿಗೆ ನಡೆಯಲಿದೆ. ರಕ್ತಕ್ಕೆ ಪರ್ಯಾಯ (ಬದಲಿಯಾದ) ವಸ್ತುವಿಲ್ಲ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ., ರಕ್ತವನ್ನು ಮನುಷ್ಯನಿಂದ ಮಾತ್ರ ಪಡೆಯಬಹುದು. ರಕ್ತದಾನ ಮಾಡುವುದು ಪ್ರತೀ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ರೋಗಗ್ರಸ್ಥರು ಮತ್ತು ಗಾಯಗೊಂಡಿರುವವರನ್ನು ಬದುಕಿಸಲು ಸಾಧ್ಯ. ರಕ್ತವು ಮಾನವ ದಾನಿಗಳಿಂದ ಮಾತ್ರ ಪಡೆದ ಅಮೂಲ್ಯ ಜೀವ ಉಳಿಸುವ ಸಂಪನ್ಮೂಲವಾಗಿದೆ. 350 ಮಿಲಿ ರಕ್ತವು ಮೂರು ಜೀವಗಳನ್ನು ಉಳಿಸಬಹುದು. ಪ್ರತಿ ಎರಡು ಸೆಕೆಂಡಿಗೆ ಭಾರತದಲ್ಲಿ ಯಾರಿಗಾದರೂ ರಕ್ತದ ಅಗತ್ಯವಿದೆ. ನಮ್ಮ ಜೀವಿತಾವದಿಯಲ್ಲಿ ಪ್ರತಿ ಮೂವರಲ್ಲಿ ಒಬ್ಬರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇಂದಿನ ಎಲ್ಲಾ ತಂತ್ರಜ್ಞಾನದ ಹೊರತಾಗಿಯೂ ರಕ್ತಕ್ಕೆ ಪರ್ಯಾಯವಿಲ್ಲ. ರಾಷ್ಟ್ರಾದಾದ್ಯಂತ ಸೆಪ್ಟೆಂಬರ್ 17 ರಿಂದ ಮೆಗಾ ರಕ್ತದಾನ ಶಿಬಿರ ನಡೆಯಲಿದೆ.

ಈ ಚಟುವಟಿಕೆಯು ಸ್ವಯಂಪ್ರೇರಿತ ರಕ್ತದಾನಿಗಳಿಂದ ಸುಮಾರು 1 ಲಕ್ಷ ಯೂನಿಟ್ ರಕ್ತವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ. ರಕ್ತದಾನ ಅಮೃತ್ ಮಹೋತ್ಸವ ಅಭಿಯಾನವು ಸೆಪ್ಟೆಂಬರ್, 17 ರಿಂದ ಅಕ್ಟೋಬರ್, 01 ರವರೆಗೆ ನಡೆಯಲಿದೆ. ಅಕ್ಟೋಬರ್, 01 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ರೋಟರಿ ಮತ್ತು ಮಡಿಕೇರಿ ಮಾಜಿ ಸೈನಿಕರ ಸಂಘ ಇವರ ಸಂಯುಕ್ತ ಆಶ್ರಯದಲಿ,್ಲ ರೋಟರಿ ಹಾಲ್‍ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ರಕ್ತದಾನ ಅಮೃತ್ ಮಹೋತ್ಸವ ಅಭಿಯಾನದಲ್ಲಿ ಕೊಡಗು ಜಿಲ್ಲೆಯಲ್ಲಿ 8 ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್, 17 ರಂದು ಬೆಳಗ್ಗೆ 10.30 ಗಂಟೆಗೆ ನಗರದ ರೆಡ್ ಕ್ರಾಸ್ ಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಸೆಪ್ಟೆಂಬರ್, 18 ರಂದು ಬೆಳಗ್ಗೆ 10.30 ಗಂಟೆಗೆ ರಾಮಮಂದಿರ ದಸರಾ ದಶಮಂಟಪ ಸಮಿತಿ ವತಿಯಿಂದ ಚೌಡೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ, ಸೆಪ್ಟೆಂಬರ್, 21 ರಂದು ವಿರಾಜಪೇಟೆ ಕ್ಲಬ್ ಮಹೇಂದ್ರ ವತಿಯಿಂದ ವಿರಾಜಪೇಟೆ ಕಡಂಗ ಕ್ಲಬ್ ಮಹೇಂದ್ರದಲ್ಲಿ, ಸೆಪ್ಟೆಂಬರ್, 23 ರಂದು ಬೆಳಗ್ಗೆ 10.30 ಗಂಟೆಗೆ ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸೆಪ್ಟೆಂಬರ್, 28 ರಂದು ಬೆಳಗ್ಗೆ 10.30 ಗಂಟೆಗೆ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ, ಅಕ್ಟೋಬರ್, 01 ರಂದು ಬೆಳಗ್ಗೆ 10.30 ಗಂಟೆಗೆ ಮಡಿಕೇರಿ ರೋಟರಿ ಮತ್ತು ಎಕ್ಸ್ ಸರ್ವಿಸಸ್ ಮೆನ್ ಅಸೋಷಿಯೇಷನ್ ವತಿಯಿಂದ ರೋಟರಿ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಈ ಶಿಬಿರಗಳಲ್ಲಿ ಹೆಚ್ಚು ಜನರು ಪಾಲ್ಗೊಂಡು ರಕ್ತದಾನ ಮಾಡುವಂತೆ ಕೋರಿದೆ. ಮಾರ್ಗಸೂಚಿಯನ್ವಯ ರಕ್ತದಾನ ಶಿಬಿರಗಳನ್ನು ಹಾಗೂ ರಕ್ತ ದಾನಿಗಳು ಇ-ರಕ್ತಕೋಶ ತಂತ್ರಾಂಶ/ಆರೋಗ್ಯ ಸೇತು ಆ್ಯಪ್‍ನಲ್ಲಿ ಗರಿಷ್ಠ ಮಟ್ಟದಲ್ಲಿ ನೋಂದಣಿ ಮಾಡುವುದು. https://www.eraktkosh.in/BLDAHIMS/bloodbank/transactions/bbpublicindex.html, https://www.eraktkosh.in/BLDAHIMS/bloodbank/campSchedule.cnt ಇ-ರಕ್ತಕೋಶ ತಂತ್ರಾಂಶದಲ್ಲಿ ರಕ್ತದಾನ ಶಿಬಿರ ಆಯೋಜಿಸುವ ಸಂಘ ಸಂಸ್ಥೆಗಳು ಮತ್ತು ರಕ್ತದಾನಿಗಳು ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 08272-296708, 9480770287 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.

error: Content is protected !!