ಸೆ.17 ರಂದು ಆಡಲಿದೆ ವಿದ್ಯುತ್ ಕಣ್ಣಾಮುಚ್ಚಾಲೆ

ಮಡಿಕೇರಿ ಸೆ.15:-ಮಡಿಕೇರಿ 66/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಗದ್ದಿಗೆ ಮತ್ತು ಗಾಳಿಬೀಡು ಫೀಡರ್‍ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಿರುವುರಿಂದ ಸೆಪ್ಟೆಂಬರ್, 17 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಸಂಪಿಗೆಕಟ್ಟೆ, ಕನ್ನಂಡಬಾಣೆ ಬೀರಪ್ಪದೇವಸ್ಥಾನ, ತ್ಯಾಗರಾಜ ಕಾಲೊನಿ, ಗದ್ದಿಗೆ, ಆಜಾದ್‍ನಗರ, ಉಕ್ಕುಡ, ರಾಜೇಶ್ವರಿನಗರ, ಎ.ವಿ.ಶಾಲೆ, ಮಹದೇವಪೇಟೆ, ಮಲ್ಲಿಕಾರ್ಜುನ ನಗರ, ಭಗವತಿನಗರ, ಹಿಲ್ ರಸ್ತೆ, ರಾಣಿಪೇಟೆ, ಮಾರ್ಕೆಟ್, ಕಾನ್ವೆಂಟ್ ಜಂಕ್ಷನ್, ಸಿದ್ದಿಕಾಡು, ಕ್ಲಬ್ ಮಹೇಂದ್ರ, ಗಾಳಿಬೀಡು, ಕಾಲೂರು, ಕೂಟುಹೊಳೆ, ಮೊಣ್ಣಂಗೇರಿ, ವಣಾಚಲು, ಮಾಂದಲ್‍ಪಟ್ಟಿ, ಹೆಬ್ಬೆಟ್ಟಗೇರಿ, ಕೆ.ನಿಡುಗಣೆ, ಅಬ್ಬಿ ಫಾಲ್ಸ್ ರಸ್ತೆ, ದೇವಸ್ಥೂರು ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.