ಸೆ.15 ರಂದು ಮಿಶ್ರತಳಿ ಹಸು ಮತ್ತು ಕರುಗಳ ಪ್ರದರ್ಶನ

ಮಡಿಕೇರಿ ಸೆ.13:-ಜಿಲ್ಲಾ ಪಂಚಾಯತಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳು, ಮಡಿಕೇರಿ ಪಶು ವೈದ್ಯಕೀಯ ಆಸ್ಪತ್ರೆ, ಮರಗೋಡು, ಗ್ರಾಮ ಪಂಚಾಯತಿ ಇವರ ಸಂಯುಕ್ತಾಶ್ರಯದಲ್ಲಿ “ಮಿಶ್ರತಳಿ ಹಸು ಮತ್ತು ಕರುಗಳ ಪ್ರದರ್ಶನ”ವು ಸೆಪ್ಟೆಂಬರ್, 15 ರಂದು ಮರಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆಟದ ಮೈದಾನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮರಗೋಡು ಗ್ರಾ.ಪಂ.ಅಧ್ಯಕ್ಷರಾದ ಅಯ್ಯಂಡ್ರ ಪೂರ್ಣಿಮ, ಉಪಾಧ್ಯಕ್ಷರಾದ ಬಿ.ಪಿ.ಚಿತ್ರಾ, ಮಡಿಕೇರಿ ಪಶುವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ.ಕೆ.ಎ.ಪ್ರಸನ್ನ ಇತರರು ಭಾಗವಹಿಸಲಿದ್ದಾರೆ.

ತಜ್ಞ ವೈದ್ಯರಿಂದ ಜಾನುವಾರುಗಳ ತಪಾಸಣೆ, ಬಂಜೆ ರಾಸುಗಳ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ, ಹೋರಿ, ಕೋಣಗಳ ಕಸಿ ಮಾಡುವುದು, ಔಷಧಿ ಮತ್ತು ಲವಣ ಮಿಶ್ರಣ ವಿತರಣೆ, ಪಶುವೈದ್ಯರಿಂದ ಜಾನುವಾರುಗಳ ವೈಜ್ಞಾನಿಕ ಸಾಕಾಣಿಕೆ ಬಗ್ಗೆ ಮಾಹಿತಿ, ಜಾನುವಾರುಗಳಿಗೆ ಕಿವಿಯೋಲೆ ಅಳವಡಿಕೆ (ಪಶುಪಾಲಕರು ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ತರುವುದು), ರಾಷ್ಟ್ರೀಕ ಕೃತಕಗರ್ಭಧಾರಣೆ ಯೋಜನೆ (ರಾಷ್ಟ್ರೀಯ ಗೋಕುಲ್ ಮಿಷನ್) ಬಗ್ಗೆ ಮಾಹಿತಿ, ಶಿಬಿರದಲ್ಲಿ ಸಾಕುನಾಯಿಗಳಿಗೆ ಉಚಿತವಾಗಿ ನಾಯಿ ಹುಚ್ಚು (ರೇಬಿಸ್) ನಿರೋಧಕ ಲಸಿಕೆಯನ್ನು ನೀಡಲಾಗುತ್ತದೆ. ಶಿಬಿರದಲ್ಲಿ ಭಾಗವಹಿಸಿದ ಉತ್ತಮ ತಳಿಯ ಮಿಶ್ರತಳಿ ಕರು ಹಸುಗಳಿಗೆ ಪೆÇ್ರೀತ್ಸಾಹಕ ಬಹುಮಾನ ವಿತರಿಸಲಾಗುವುದು ಎಂದು ಪಶುವೈದ್ಯಾಧಿಕಾರಿ ಅವರು ತಿಳಿಸಿದ್ದಾರೆ.

error: Content is protected !!