ಸೆ. 15ರಿಂದ 29ರವರೆಗೆ ವಿಶ್ವ ರೇಬಿಸ್ ದಿನಾಚರಣೆ ಪ್ರಯುಕ್ತ ಲಸಿಕಾ ಅಭಿಯಾನ

ಮಡಿಕೇರಿ ಸೆ.13:-ಸೆಪ್ಟೆಂಬರ್ ಮಾಹೆಯಲ್ಲಿ ಆಚರಿಸುವ ವಿಶ್ವ ರೇಬಿಸ್ ದಿನಾಚರಣೆಯ ಪ್ರಯುಕ್ತ ಸೆಪ್ಟೆಂಬರ್ 15 ರಿಂದ 29 ರ ವರೆಗೆ ಮಡಿಕೇರಿ ತಾಲ್ಲೂಕಿನ ವಿವಿಧ ಸಂಸ್ಥೆಗಳಲ್ಲಿ ರೇಬಿಸ್ ಲಸಿಕಾ ಅಭಿಯಾನ ನಡೆಯಲಿದೆ.

ಸೆಪ್ಟೆಂಬರ್, 15 ರಂದು ಮರಗೋಡುವಿನಲ್ಲಿ ಆಯೋಜಿಸಿರುವ ಮಿಶ್ರತಳಿ ಹಸು, ಕರು ಪ್ರದರ್ಶನ ಕಾರ್ಯಕ್ರಮದಲ್ಲಿ ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಸೆಪ್ಟೆಂಬರ್, 16 ರಂದು ಸಂಪಾಜೆ ಪಶುವೈದ್ಯ ಆಸ್ಪತ್ರೆ, ಸೆ.17 ರಂದು ಬೆಟ್ಟಗೇರಿ, ಸೆಪ್ಟೆಂಬರ್, 19 ರಂದು ಮಕ್ಕಂದೂರು ಪ್ರಾ.ಪ.ಚಿ.ಕೇಂದ್ರ, ಸೆಪ್ಟೆಂಬರ್, 20 ರಂದು ಬಲ್ಲಮಾವಟಿ ಪಶು ಚಿಕಿತ್ಸಾಲಯ, ಸೆಪ್ಟೆಂಬರ್, 21 ರಂದು ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಆವರಣ, ಸೆಪ್ಟೆಂಬರ್, 22 ರಂದು ಮೂರ್ನಾಡು ಪಶು ಚಿಕಿತ್ಸಾಲಯ, ಸೆಪ್ಟೆಂಬರ್, 23 ರಂದು ಚೇರಂಬಾಣೆ ಪಶು ಚಿಕಿತ್ಸಾಲಯ, ಸೆಪ್ಟೆಂಬರ್, 24 ರಂದು ಭಾಗಮಂಡಲ, ಸೆಪ್ಟೆಂಬರ್, 26 ರಂದು ನಾಪೋಕ್ಲು ಪಶುವೈದ್ಯ ಆಸ್ಪತ್ರೆ, ಸೆಪ್ಟೆಂಬರ್, 27 ರಂದು ಚೆಂಬು, ಸೆಪ್ಟೆಂಬರ್, 29 ರಂದು ಕಕ್ಕಬೆ ಪ್ರಾ.ಪ.ಚಿ.ಕೇಂದ್ರ ಹಾಗೂ ಸೆಪ್ಟೆಂಬರ್, 30 ರಂದು ತಾಳತ್ತಮನೆ ನೇತಾಜಿ ಯುವ ಕೇಂದ್ರ(ಆವರಣ) ಇಲ್ಲಿ ಆಯಾಯ ದಿನಗಳಂದು ಬೆಳಗ್ಗೆ 9 ಗಂಟೆಯಿಂದ 1 ಗಂಟೆಯವರೆಗೆ ರೇಬಿಸ್ ಲಸಿಕಾ ಶಿಬಿರ ನಡೆಯಲಿದೆ ಎಂದು ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಪ್ರಸನ್ನ ತಿಳಿಸಿದ್ದಾರೆ. ಸೆಪ್ಟೆಂಬರ್, 01 ರಿಂದ 14 ರವರೆಗೆ ತಾಲ್ಲೂಕಿನ ವಿವಿಧ ಪ್ರೌಢಶಾಲೆಯಲ್ಲಿ ರೇಬಿಸ್ ಜಾಗೃತಿ ಮೂಡಿಸುವ ಕಾರ್ಯಕ್ರಮವು ಕಡಗದಾಳು, ನಾಪೋಕ್ಲು, ಬಲ್ಲಮಾವಟಿ ಹಾಗೂ ಕಕ್ಕಬೆಯಲ್ಲಿ ಈಗಾಗಲೇ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!