ಸೆ.06 ರಂದು ಅರೆಭಾಷೆ ಸಂಸ್ಕøತಿ ಶಿಬಿರ

ಮಡಿಕೇರಿ ಸೆ.1:-ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಪಿರಿಯಾಪಟ್ಟಣ ಕೊಡಗು ಗೌಡ ಸಮಾಜ ಇವರ ಸಹಯೋಗದಲ್ಲಿ ಅರೆಭಾಷೆ ಸಂಸ್ಕøತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಸೆಪ್ಟೆಂಬರ್, 06 ರಂದು ಬೆಳಗ್ಗೆ 10 ಗಂಟೆಗೆ ಪಿರಿಯಾಪಟ್ಟಣ ಕೊಡಗು ಗೌಡ ಸಮಾಜದಲ್ಲಿ ನಡೆಯಲಿದೆ.

ಪಿರಿಯಾಪಟ್ಟಣ ಅರೆಭಾಷೆ ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೊಕ್ಕಳಂಡ ವಸಂತ್ ಕುಮಾರ್, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ, ಪಿರಿಯಾಪಟ್ಟಣ ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷರಾದ ತೋಟಂಬೈಲು ಪ್ರಭಾಕರ, ಮೇಡತ್ತನ ಶಿವಾಜಿ, ಜಿ.ಪಂ. ಮಾಜಿ ಸದಸ್ಯರಾದ ಬಳ್ಜೆಂಟಿ ಧನ್ಯವತಿ, ತಳೂರು ಯಶೋಧ ಸೋಮಣ್ಣ, ಕುಲ್ಲಚೆಟ್ಟಿ ಪೂವಯ್ಯ, ಕೋಲ್ಪೆ ದೇವಕಿ ಇತರರು ಪಾಲ್ಗೊಳ್ಳಲಿದ್ದಾರೆ.

ಸೆಪ್ಟೆಂಬರ್, 09 ರಂದು ಮಧ್ಯಾಹ್ನ 2 ಗಂಟೆಗೆ ಪಿರಿಯಾಪಟ್ಟಣ ಕೊಡಗು ಗೌಡ ಸಮಾಜದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ, ಪಿರಿಯಾಪಟ್ಟಣ ಕೊಡಗು ಗೌಡ ಸಮಾಜದ ಮಾಜಿ ಉಪಾಧ್ಯಕ್ಷರಾದ ಕಾಳೇರಮ್ಮನ ಗಣಪತಿ, ನಿವೃತ್ತ ಉಪನ್ಯಾಸಕರಾದ ಕುಯ್ಯಮುಡಿ ಅಶ್ವಿನಿಕುಮಾರ್ ಇತರರು ಪಾಲ್ಗೊಳ್ಳಲಿದ್ದಾರೆ.

error: Content is protected !!