ಸುರಕ್ಷಿತ ಸ್ಥಳಕ್ಕೆ ತೆರಳಲು ಜನರಿಗೆ ಆಯುಕ್ತರ ಮನವಿ

ಕೊಡಗು: ಜಿಲ್ಲೆಯಲ್ಲಿ ಮೇ 14 ಮತ್ತು 15 ರಂದು ಬಾರಿ ಮಳೆಯಾಗುವ ಸಾಧ್ಯತೆ ಇದ್ದು, ಈ ಹಿನ್ನಲೆ ನಗರದ ಇಂದಿರಾನಗರ, ಚಾಮುಂಡೇಶ್ವರಿ ನಗರ ಹಾಗೂ ಇತರರ ಪ್ರದೇಶಗಳಲ್ಲಿ ವಾಸಿಸುವ ಅಪಾಯ ಸ್ಥಿತಿಯಲ್ಲಿರುವ ಮನೆಗಳು, ಎತ್ತರದ ಪ್ರದೇಶಗಳಲ್ಲಿ ಮನೆಗಳು ಮತ್ತು ಇಳಿಜಾರು ಬೆಟ್ಟದ ಕೆಳಗೆ ಇರುವ ಮನೆಗಳು, ಮರಗಳ ಕೆಳಭಾಗದಲ್ಲಿ ಇರುವ ಮನೆಗಳಲ್ಲಿ ವಾಸವಿರುವ ಕುಟುಂಬದವರು ಸುರಕ್ಷತೆ ದೃಷ್ಟಿಯಿಂದ ಮಳೆಗಾಲದ ಅವಧಿಯಲ್ಲಿ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಮಡಿಕೇರಿಯ ನಗರಸಭಾ ಪೌರಾಯುಕ್ತರಾದ ರಾಮದಾಸ್ ಅವರು ಕೋರಿದ್ದಾರೆ.

error: Content is protected !!