fbpx

ಸುಮಧುರ ಬಾಂಧವ್ಯ ಹಳ್ಳಿ ಸೊಗಡಿನಲಿ

ಸಣ್ಣ ಕಥೆ

ಎತ್ತನೋಡಿದರೂ ಹಸಿರುಡುಗೆ, ಭತ್ತದ ಪೈರು,ಜುಳು ಜುಳು ನೀರು, ನೀಲಾಗಸ, ಅಣ್ಣಾ ಅಕ್ಕಳೆಂಬ ಆತ್ಮೀಯ ಮಾತುಕತೆಯ ಮಲ್ಲಿಗೆ ಹಳ್ಳಿ..ಎಷ್ಟೊಂದು ಸುಂದರ ಬಂದುರ…ಇಬ್ಬರು ಹುಡುಗರು ೧೨ ನೇ ಕ್ಲಾಸಿನಲ್ಲಿ ಪಟಿಂಗರ ಸಹವಾಸದೆಡೆ ಫೇಲ್ ಆದರು…ಮನೆಯವರ,ಊರವರ ಬೈಗುಳಕ್ಕೆ ತುತ್ತಾಗಿ ಒಂದಿಷ್ಟು ದುಡ್ಡು ಕದ್ದು ಬಾಂಬೆ ಶಹರ ಸೇರಿದರು…

ಅಬ್ಬಾ ಹೈಟೆಕ್ ಸಿಟಿ, ಹೋಟೆಲ್,ಬಸ್ಸುಕಾರು ,ಕೂಲಿಂಗ್ಗ್ಲಾಸ್ಹಾಕಿದ ಹುಡುಗಹುಡುಗಿ ನೋಡಿ ಬೆರಗಾಗಿ,ಹಣ ಖಾಲಿಯಾಗಿ ಬಾರ್ ಕೆಲಸಕ್ಕೆ ಸೇರಿದರು..ಶ್ರೀ ಮಂತ ಕಸ್ಟಮರ್ಸ್ ನೋಡಿ ಅಚ್ಚರಿ..ನಿತ್ಯ ಮೇಜುವರೆಸಿ ಗ್ಲಾಸು ತೊಳೆಯುವ ,ಕುಡುಕ ಪಡ್ಡೆಯವರನ್ನು ನೋಡಿ ,ಕೆಲಸ ಮಾಡಿ ಕೈಮೈ ಸುಟ್ಟ ಗಾಯದೊಡನೆ ಸಂಕಟಕ್ಕೀಡಾದರು… ಊಟವಿಲ್ಲ, ಕಣ್ತುಂಬ ನಿದ್ರೆ ಇಲ್ಲ,ದುಡಿತದ ಕೂಲಿಯೂ ಇಲ್ಲದೆ ಕಂಗಾಲಾದರು…ಮಲಗಿದಾಗ ಕಣ್ಣಲ್ಲಿ ಅಪ್ಪ, ಅಮ್ಮನ ಪ್ರೀತಿವಾತ್ಸಲ್ಯ ಸಂಬಂಧ,ತಪ್ಪಿನ ಅರಿವು ನೆನಪಿಗೆ ಬಂದಿತು…ಮರುದಿನ ಇಬ್ಬರು ಕೆಲಸ ಬಿಡುವ ನಿರ್ಧಾರಕೈಗೊಂಡು, ಉಳಿದಕೂಲಿಕೊಡಿ ಎಂದು ಮಾಲೀಕನಿಗೆ ತಿಳಿಸಿದಾಗ ಆತ ಒಪ್ಪಲಿಲ್ಲ….

ಅಂತೂ ತಪ್ಪಿಸಿ ಕೊಂಡು ರೈಲ್ವೆಸ್ಟೇಷನ್ ಗೆ ಬರುವಾಗ ಇವರ ಕೊಳಕು ವೇಷಭೂಷಣ ಕಂಡು ಪೋಲೀಸರು ಕಳ್ಳರೆಂದು ತಿಳಿದು ಬಡಿತಕೊಟ್ಟು ಕಂಬಿಯೊಳಗೆ ದಬ್ಬಿದರು….ಎಷ್ಟು ಹೇಳಿದರೂ ಕೇಳಲಿಲ್ಲ….ಅಯ್ಯೋ “ಪೇಟೆ ಜನ,ಬದುಕು,ಕರುಣೆಯೇ ಇಲ್ಲದ ಸ್ಥಿತಿ ಅನುಭವಿಸುತ್ತಾ ಸರಿಯಾಗಿ ಶಿಕ್ಷಣ ಓದದೇ ಮನೆಯವರ ಮಾತು ಕೇಳದೆ ತಪ್ಪು ಮಾಡಿದೆವು” ಎಂದು ತಪ್ಪಿತಸ್ಥ ಮನಸ್ಸು ಹೇಳುತ್ತಿತ್ತು..ಇವರ ವರ್ತನೆಯು ಕಳ್ಳರಲ್ಲವೆಂದು ತೀರ್ಮಾನಿಸಿ ಪೋಲಿಸರು ಹೊರ ಬಿಟ್ಟರು…

ಇಂದು ಸುರೇಶ ವೈದ್ಯನಾಗಿ ಅದೇ ಊರಿನಲ್ಲಿ ಜನಾನುರಾಗಿಯಾಗಿ ಸೇವೆ ಮಾಡುತ್ತಿದ್ದರೆ ಗೆಳೆಯ ಚಿದಾನಂದ ಪ್ರಾಥಮಿಕ ಶಿಕ್ಷಕ ನಾಗಿ ಮದುವೆಯಾಗಿ ಅದೇ ತಾಲ್ಲೂಕಿನ ಹಳ್ಳಿಯ ಶಾಲೆಯಲ್ಲಿ ತನ್ನ ಅಪ್ಪ ಅಮ್ಮನೊಡನೆ ಮಧುರ ಜೀವನ ನೆಡೆಸುತ್ತಿದ್ದಾನೆ……..

ನೀತಿ:: ೧.ದೂರದ ಬೆಟ್ಟ ನುಣ್ಣಗೆ….
೨.ಎಡುವುದು ಸಹಜ.ಸರಿಪಡಿಸಿ ಕೊಂಡವನು ನಿಜವಾದ ಜಾಣ….

ವಾಣಿ. ಎಸ್.ಕೆ ಸಾಗರ….

error: Content is protected !!