fbpx

ಸುಧೀರನಿಗೆ ಸಿಕ್ಕ ‘ಹೂ ಅಣಬೆ’!

ಮಳೆಗಾಲದ ಆರಂಭದಲ್ಲಿ ಕೊಡಗಿನ ಭಾಗದಲ್ಲಿ ಗುಡುಗು ಸಿಡಿಲು ಬಂತೆಂದರೆ ಸಾಕು ಮರು ದಿನ ಗದ್ದೆ ತೋಟದಲ್ಲಿ ಅಣಬೆಗಳು ಹುಟ್ಟಿಕೊಳ್ಳುವ ದೃಶ್ಯ ಸಹಜ.

ತಿನ್ನುವ ಅಣಬೆಗಳು ಸೇರಿದಂತೆ ವಿಷಪೂರಿತ ಅಣಬೆಗಳೂ ಬಹಳಷ್ಟು ಇವೆ. ಹೀಗೆ ಮಳೆ ಕಡಿಮೆಯಾಯಿತೆಂದು ಅಣಬೆ ಹುಡುಕಿ ಹೊರಟ ಕರಿಕೆ ಗ್ರಾಮದ ಹೊದೆಟ್ಟಿ ಸುಧೀರ್ ಅವರಿಗೆ ಸಿಕ್ಕ ಅರಳಿದ ಹೂವಿನಾಕಾರದ ಅಣಬೆ ಚಿತ್ರವಿದು.

ಈ ಅಣಬೆಗಳನ್ನು  ಬೆರಗು ಕಂಗಳಿಂದ ನೋಡಿ, ಅಪರೂಪದ ಹೂವಿನಾಕಾರದ ಈ ಅಣಬೆಗಳ ಚಿತ್ರವನ್ನು ಕ್ಲಿಕ್ಕಿಸಿ ಸುದ್ದಿ ಸಂತೆಗೆ ಅದನ್ನು  ಕಳುಹಿಸಿಕೊಟ್ಟಿದ್ದಾರೆ.

error: Content is protected !!