fbpx

ಸುದ್ದಿ ಸ್ವಾರಸ್ಯ

ಭಾರತ ಅಂದ್ರೆ ಸುಮ್ನೇನಾ..!

ಹೌದು ರೀ.. ಎರಡು ಬ್ರೆಡ್ ಟೋಸ್ಟ್ ಅದರ ಮದ್ಯದಲ್ಲಿ ಆಲುಗೆಡ್ಡೆ ಪಲ್ಯನೋ, ಆಮ್ಲೆಟೋ ಸೇರಿಸಿ ಸ್ಯಾಂಡ್ವಿಚ್ ಮಾಡಲಾಗುತ್ತದೆ,ಬ್ರೆಡ್ ಏನಾದ್ರು ಸೀದೋದ್ರೇ ಸ್ಯಾಂಡ್ವಿಚ್ ಕಥೆ ಮುಗೀತು. ಆದರೆ ಒಳಗಿರುವ ಮಸಾಲೆ ಸೇಫಾಗಿರುತ್ತೆ.ಇದ್ಯಾವುದೇ ಅಡುಗೆ ರಸಿಪಿ ಬಗ್ಗೆ ಮಾಹಿತಿಯಲ್ಲ.ಕಾರಿನ ಬಗ್ಗೆ ಇಲ್ಲಿ ಹೇಳ್ತೀವಿ ಕೇಳಿ.

ಕೇರಳದ ಪಟ್ಟಣವೊಂದರಲ್ಲಿ ಕಿರಿದಾದ ರಸ್ತೆ ಪಟ್ಟಣ ಪ್ರವೇಶ ಮಾಡುತ್ತಿದಂತೆ ಒಂದು ಬಿಳಿ ಬಣ್ಣದ ಹೋಂಡಾ ಸಿಟಿ ಕಾರು ರೋಡ್ ಹಂಪ್ ಗಮನಿಸದೆ ಏಕಾಏಕಿ ಚಾಲಕ ಬ್ರೇಕ್ ಹಾಕುತ್ತಾನೆ, ಅದರ ಹಿಂಬದಿಯಲ್ಲಿ ಇದ್ದ ಭಾರತದ ಹೆಮ್ಮೆಯ ಬಡವರ ಬಂದು ಟಾಟಾ ನ್ಯಾನೋ ಮುಂದೆಯಿದ್ದ ಬಿಳಿ ಬಣ್ಣದ ಹೊಂಡಾ ಸಿಟಿ ಕಾರಿಗೆ ಗುದ್ದುತ್ತಾನೆ ನ್ಯಾನೋ ಕಾರಿನ ಹಿಂದೆ ಮತ್ತೊಂದು ಹೋಂಡಾ ಸಿಟಿ ಕಾರು ನ್ಯಾನೋ ಕಾರಿಗೆ ಡಿಕ್ಕಿ ಹೊಡೆಯುತ್ತಾನೆ, ಆದರೆ ನ್ಯಾನೋ ಕಾರಿನ ಮುಂದೆ ಇದ್ದ ಕಾರು ಸಣ್ಣ ಪುಟ್ಟ ಡ್ಯಾಮೆಜ್ ಆದರೆ ಹಿಂಬದಿಯ ಹೊಂಡಾ ಕಾರು ಮುಂದಿನ ಕಾರು ಸಂಪೂರ್ಣ ನಜ್ಜುಗುಜ್ಜಾಗುತ್ತದೆ, ಆದರೆ ನ್ಯಾನೋ ಕಾರಿನ ನಂಬರ್ ಪ್ಲೇಟ್ ಡ್ಯಾಮೇಜ್ ಆಗಿದ್ದು ಬಿಟ್ಟರೆ ಬೇರೇನು ಆಗಿಲ್ಲ,ಮೂರು ಕಾರಿನಲ್ಲಿದ್ದವರೆಲ್ಲರೂ ಸೇಫಾಗಿದ್ದಾರೆ.

ಹೊಂಡ ಕಾರಿನ ಪರಿಸ್ಥಿತಿ ಹೇಗಿದೆ ಅಂದರೆ ಒಂದು ರೋಡ್ ರೋಲರಿಗೆ ಗುದ್ದಿದ ರೀತಿ ಆಗಿದೆ. ನ್ಯಾನೋ ದೇಶ್ ಕಿ ದಡ್ಕನ್ ಅನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಡ,ಕೊನೆಗೆ ನ್ಯಾನೋ ಕಾರಿನವನು ತನ್ನ ನಂಬರ್ ಪ್ಲೇಟ್ ಸರಿ ಪಡಿಸಿಕೊಡುವಂತೆ ಹಿಂಬದಿ ಕಾರಿನವನೊಂದಿಗೆ ಪಟ್ಟು ಹಿಡಿತಾನೆ, ಬಳಿಕ ಹೊಂಡಾ ಕಾರಿನ ಪರಿಸ್ಥಿತಿ ನೋಡಿ ತನ್ನ ಪಾಡಿಗೆ ತಾನು ತನ್ನ ಕಾರಿನ ಬಗ್ಗೆ ಹೆಮ್ಮೆ ಪಡುತ್ತಾ ತೆರಳುತ್ತಾನೆ. ಪಾಪ 10-12 ಲಕ್ಷ ಕೊಟ್ಟು ಖರೀದಿಸಿದ ಹೊಂಡಾ ಕಾರಿನವನ ಪರಿಸ್ಥಿತಿ ಹೇಗಾಗಿರಬೇಡ ನೀವೇ ಊಹಿಸಿಕೊಳ್ಳಿ…

error: Content is protected !!