ಸುದ್ದಿ ಸಂತೆ

ರಾಜ್ಯ

1.ಕರ್ನಾಟಕ ರಾಜ್ಯದ ನೂತನ ರಾಜ್ಯಪಾಲರಾಗಿ ಮಾಜಿ ಕೇಂದ್ರ ಸಚಿವರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಸ್ವೀಕರಿಸಿದರು.

2.ಕೊರೋನಾ ಕಡಿಮೆಯಾಗುತ್ತಿದ್ದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬೆಳಗಾವಿಯಲ್ಲಿ ನಡೆಸುವ ವಿಚಾರವಾಗಿ ಚರ್ಚಿಸುವುದಾಗಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

3.ಗ್ರಾಮೀಣಾಭಿವೃದ್ದಿ ಇಲಾಖೆ ವತಿಯಿಂದ ರಾಜ್ಯಾಧ್ಯಂತ ನಡೆಯುತ್ತಿಿರುವ ಜಲಜೀವನ್ ಯೋಜನೆ ತಿಂಗಳ ಅಂತೊಯಕೊಕೆ ಪೂರ್ಣಗೊಳಿಸುವಂತೆ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

4.ಅನ್ಲಾಕ್ ಆಗಿದ್ದೇ ತಡ
ಬಂಡೀಪುರದಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು ವೀಕೆಂಡ್ ನಲ್ಲಿ ಸಫಾರಿಗಳು ಬಿರುಸುಗೊಂಡಿದೆ.

ದೇಶ

5.ಪದ್ಮ ಪ್ರಶಸ್ತಿಗಳಿಗಾಗಿ ಸಾಧಕರ ನಾಮನಿರ್ದೇಶನವನ್ನು “ಪೀಪಲ್ಸ್ ಪದ್ಮ” ಹ್ಯಾಷ್ ಟ್ಯಾಗ್ ನೊಂದಿಗೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದಾರೆ.

6.ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿ ಕಳ್ಳಬಟ್ಟಿ ತಯಾರು ಮಾಡುವವರ ಮೇಲೆ ಪೋಲಿಸ್ ಇಲಾಖೆ ಡ್ರೋಣ್ ಕ್ಯಾಮರಾ ಮೂಲಕ ಕಣ್ಣಿಟ್ಟಿದ್ದಾರೆ.

ವಿದೇಶ

7.ಡೆನ್ಮಾರ್ಕ್ ನಲ್ಲಿ ಮರಳಿನಲ್ಲಿ 70 ಅಡಿ ಎತ್ತರದ ಕೋಟೆಯೊಂದನ್ನು ನಿರ್ಮಿಸಿ ಗಿನ್ನೀಸ್ ರೆಕಾರ್ಡ್ ಮಾಡಲಾಗಿದೆ.4.8 ಟನ್ ಮರಳು ಬಳಕೆಯಾಗಿದ್ದು,30 ಕಲಾವಿದರು ಕೈಜೋಡಿಸಿದ್ದಾರೆ.
ಕೋಟೆ ಭೌಗೋಳಿಕ ಸಮಸ್ಯೆಗಳನ್ನು ಒಳಗೊಂಡಿದೆ.

ಕ್ರೀಡೆ


8.ಕೂಪ ಅಮೇರಿಕ ಫುಟ್ಬಾಲ್ ಟೂರ್ನಿ ಅರ್ಜಂಟೇನಿಯಾ ಪಾಲಾಗಿದೆ.ಬ್ರೆಜಿಲ್ ವಿರುದ್ದ 1-0ಅಂತರದಲ್ಲಿ ಲಿಯೋನಿಯಲ್ ಮೆಸ್ಸಿ ತಂಡ ಚಾಂಪಿಯನ್ ಆಗಿದೆ.

9.ಕ್ರೋವೆಷಿಯಾದಲ್ಲಿ ನಡೆದ ಚೆಸ್ ಪಂದ್ಯಾವಳಿಯಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಮಾಜಿ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವಿಚ್ ವಿರುದ್ದ ಗೆಲುವು ಸಾಧಿಸಿದ್ದಾರೆ.

ಸಿನೆಮಾ

10.ಇತ್ತೀಚೆಗಷ್ಟೆ ಅಪಘಾತದಲ್ಲಿ ಮೃತಪಟ್ಟ ಸಂಚಾರಿ ವಿಜಯ್ ರವರ ಕೊನೆಯ ಆಸೆಯನ್ನು ತನ್ನ “ಉಸಿರು” ಸ್ನೇಹಿತರ ಬಳಗ ರಾಜ್ಯದ ಬುಡಕಟ್ಟು ಜನಗಳಿಗೆ ನೆರವು ಸಂಬಂಧ ಟಾರ್ಪಲ್ ಗಳನ್ನು ನೀಡುವ ಮೂಲಕ ಕೊನೆಯ ಆಸೆ ಪೂರೈಸಿದ್ದಾರೆ.

error: Content is protected !!