fbpx

ಸುದ್ದಿ ಸಂತೆ ಶುರುವಾಗಿ ಇಂದಿಗೆ ಸರಿಯಾಗಿ 100 ದಿನಗಳು…!

ಸುದ್ದಿ ಸಂತೆ ಶುರುವಾಗಿದ್ದೇ ಒಂದು ಅಚ್ಚರಿ! ನಾನು ಒಂದು ವಾರ ಪತ್ರಿಕೆಯನ್ನು ಸ್ವಂತವಾಗಿ ಆರಂಭಿಸಬೇಕು ಎಂದು ಕ್ಯಾಂಪಸ್ ಸೆಲೆಕ್ಷನ್ ಅಲ್ಲಿ ಸಿಕ್ಕ ಉದ್ಯೋಗಗಳನ್ನೂ ಬಿಟ್ಟು ಬಂದ ಹುಚ್ಚು ನನ್ನದು. ಆದರೆ ಆ ನನ್ನ ಆಲೋಚನೆ ಪಾಕ್ಷಿಕ ಪತ್ರಿಕೆಯ ಆಲೋಚನೆಗೆ ಮಾರ್ಪಾಡಾಗಿತ್ತು.

ಗೆಳಯ ಹಾಗು ಸಹ ಸಂಪಾದಕರಾದ ಜೀವನ್ ಅಚ್ಚಲ್ಪಾಡಿ

ಅದರ ಪರವಾನಗಿ ತಡವಾಗಿದ್ದರಿಂದ ವಿಚಾರವನ್ನು ಗೆಳೆಯ ಜೀವನ್ ಅಚ್ಚಲ್ಪಾಡಿ ಅವರಿಗೆ ತಿಳಿಸಿ, ಒಂದು ಸುದ್ದಿ ವೆಬ್ಸೈಟ್ ಮಾಡುವ ಇರಾದೆ ಕುರಿತು ಹೇಳಿದೆ. ಮಿಕ್ಕ ಎಲ್ಲಾ ವ್ಯವಸ್ಥೆಗಳನ್ನು ಮಾಡಿ, ಅದರ ಮರುದಿನವೇ ಸುದ್ದಿ ಸಂತೆ ಕಟ್ಟುವ ತಾಂತ್ರಿಕ ಕೆಲಸಗಳು ಆರಂಭಗೊಂಡವು.

ತಾಂತ್ರಿಕ ಮುಖ್ಯಸ್ಥರು ಹಾಗು
Ecoorg.in ಸ್ಥಾಪಕರು

ಆಗ ತಾಂತ್ರಿಕ ಮುಖ್ಯಸ್ಥರಾಗಿ ಸೇರಿಕೊಂಡವರು ತೇಜಸ್ ಧಾಯನ. ಅದು ತೇಜಸ್ ಅವರ ಮೇಲುಸ್ತುವಾರಿಯಲ್ಲಿ, ಮುತುವರ್ಜಿಯಲ್ಲಿ ಮುಂದುವರೆದು ಮೇ 3 ರಿಂದ ನಡೆದು 5ಕ್ಕೆ ಪರವಾನಗಿ ಆಯಿತು. ಅಧಿಕೃತವಾಗಿ ಆರಂಭವುಗೊಂಡಿತು. ಎಲ್ಲವೂ ವ್ಯವಸ್ಥೆಯಾಗಿ 2 ದಿನಗಳಲ್ಲಿ ಸುದ್ದಿ ಸಂತೆ ವೆಬ್ಸೈಟ್ ಶುರುವಾಯಿತು. ಎಲ್ಲವೂ ಶಿಪ್ರಗತಿಯಲ್ಲಿ ನಡೆದಿತ್ತು.

ಪ್ರಧಾನ ವರದಿಗಾರರಾದ ಗಿರಿಧರ್ ಕೊಂಪುಳಿರ

ಮೊದಲಿಗೆ ಕರ್ನಾಟಕದ ಹಲವು ಪ್ರತಿಭಾನ್ವಿತ ಸಿನಿಮಾ, ರಂಗಭೂಮಿ ಹಾಗು ಕಿರುತೆರೆಯ ಪ್ರತಿಭಾನ್ವಿತ ಕಲಾವಿದರೊಂದಿಗೆ‌ ಸಂದರ್ಶನ ಮಾಡಿ, ಪ್ರಕಟಿಸಿದೆವು. ಮತ್ತು ಅಂತರ್ಜಾಲದ ಮಾಹಿತಿಗಳ ಆಧಾರದಲ್ಲಿ ಹಲವು ವಿಚಾರಗಳ ಬಗ್ಗೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹಾಕಿದೆವು. ಒಳ್ಳೆಯ ಸಕಾರಾತ್ಮಕ ವಿಚಾರಗಳತ್ತಲೇ ನಮ್ಮ ಗಮನ ಹರಿಸಿದೆವು. ಯಾವುದೇ ಪೂರ್ವಗ್ರಹ ಪೀಡಿತ, ಬರಹಗಳನ್ನೂ ಹಾಕಲಿಲ್ಲ. ಜನರಿಗೆ ಹತ್ತಿರವಾದೆವು. ಇತ್ತೀಚೆಗೆ ವರದಿಗಳನ್ನು ಆರಂಭಿಸಿರುವೆವು. ವರದಿಗಳನ್ನು ನಮ್ಮ ಪ್ರಧಾನ ವರದಿಗಾರರಾದ ಗಿರಿಧರ್ ಕೊಂಪುಳಿರ ಅವರು ನೀಡುತ್ತಿದ್ದಾರೆ. ಅವರ ಸಾಥ್ ಕೂಡ ನಮ್ಮ ತಂಡಕ್ಕೆ ಬಲ ತಂದಿದೆ.

ಇಷ್ಟು ದಿನಗಳಲ್ಲಿ ಬೆರಳೆಣಿಕೆಯಷ್ಟು ತಪ್ಪುಗಳು ಕೂಡ ಆಗಿರಬಹುದು. ಅದನ್ನು ದಯಮಾಡಿ ಮನ್ನಿಸಿ, ಆ ತಪ್ಪುಗಳಾಗಿದ್ದರೆ, ಅವುಗಳಿಂದ ತಿದ್ದಿಕೊಳ್ಳುವ ಯತ್ನಗಳೂ ನಮ್ಮಿಂದ ಆಗುತ್ತಿದೆ. ನಮ್ಮನ್ನು ಈವರೆಗೂ ಹಾಗು ಮುಂದೆಯೂ ಓದಿ ಪ್ರೋತ್ಸಾಹಿಸಲಿರುವ ಓದಿಗರಾದ ನಿಮ್ಮೆಲ್ಲರಿಗೂ ಸಾಷ್ಟಾಂಗ ನಮಸ್ಕಾರ ಹಾಗು ವಂದನೆಗಳು. ಅಲ್ಪಾವಧಿಯಲ್ಲಿ ಭರಪೂರ ಬೆಂಬಲ ನೀಡಿದ ಹಾಗು ನೀಡಲಿರುವ ನಿಮಗೆ ನಾವು ಚಿರ ಋಣಿ. ಸದಾ ಹೀಗೆ ನಮ್ಮ ಬೆಂಬಲಿಸಿ, ಆಶೀರ್ವದಿಸಿ, ಎಂದು ಕೋರುತ್ತೇವೆ.

   ಮತ್ತು ನಮ್ಮನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿಯೂ ಬೆನ್ನು ತಟ್ಟಿ ಹುರಿದುಂಬಿಸಿದ. ಪ್ರತಿಯೊಬ್ಬರಿಗೂ ಧನ್ಯವಾದ. ಇನ್ನು ಮುಂದೆಯೂ ನಿಮ್ಮ ಕುತೂಹಲ ನಮ್ಮ ಬಗ್ಗೆ ಹೀಗೆ ಇರಲಿ‌. ನೀವಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಹಾಗೆ ನಾವು ಜವಾಬ್ದಾರಿಯುತ ಪತ್ರಿಕೋದ್ಯಮವನ್ನು ನಡೆಸುತ್ತೇವೆ. ಹಾಗು ನಮಗೆ ಬರಹಗಳನ್ನು ಕೊಟ್ಟ ಎಲ್ಲಾ ಬರಹಗಾರರಿಗೂ ಥ್ಯಾಂಕ್ಯು. ಅಂತೆಯೇ ನಮ್ಮ ಬಗ್ಗೆ ಅಸೂಯೆ ಪಟ್ಟು, ಕೈ-ಕೈ ಹಿಸುಕಿಕೊಂಡವರಿಗೂ ಋಣಿ ನಾನು…! ಏಕೆಂದರೆ ಹೊಸದೇನನ್ನೋ ಮಾಡಲು ಸ್ಪೂರ್ತಿಯೇ ನಿಮ್ಮ ಹೊಟ್ಟೆಕಿಚ್ಚು ಹಾಗು ಅಸೂಯೆ! ಇನ್ನೇನು ಹೇಳಬೇಕೋ ಗೊತ್ತಿಲ್ಲ. ಉತ್ಪ್ರೇಕ್ಷಾತ್ಮಕವಾಗಿ ನಮ್ಮ ಬಗ್ಗೆಯೇ ನಾನು ಏನನ್ನೂ ಪುಂಕಾನು ಪುಂಕವಾಗಿ ಪುಂಗಲಾರೆ ಏನನ್ನೂ ಹೇಳಲಾರೆ. ಬಟ್ಟಂಗಿತನದ  (Phycho Fancy) ಮನಸ್ಥಿತಿಯಂತೂ ನನ್ನದಲ್ಲ.

ಉಳಿದಂತೆ ಮುಂದಿನ ದಿನಗಳಲ್ಲಿ ಸುದ್ದಿ ಸಂತೆ ಮತ್ತಷ್ಟು ವಿಶೇಷ ಬರಹ, ಮಾಹಿತಿಗಳೊಂದಿಗೆ ನಿಮ್ಮ ಮನದಂಗಳಕ್ಕೆ ಲಗ್ಗೆ ಇಡುತ್ತಲೇ ಇರುತ್ತೇವೆ. ಇದಿಷ್ಟೇ ಹೇಳಿ ನೂರು ದಿನದ ಸಂಭ್ರಮವನ್ನು ನಿಮ್ಮೊಂದಿಗೆ ಹಂಚಿಕೊಂಡೆ.

ರಜತ್ ರಾಜ್ ಡಿ.ಹೆಚ್, ಸಂಪಾದಕರು
error: Content is protected !!