ಸುಂದರ ನೀಲಕುರುಂಜಿ ಬೆಟ್ಟಗಳಲ್ಲಿ ಪ್ರವಾಸಿಗರ ತ್ಯಾಜ್ಯದ ಕೊಡುಗೆ

ಹನ್ನೆರೆಡು ವರ್ಷಗಳಿಗೊಮ್ಮೆ ಅರಳುವ ನೀಲ ಕುರುಂಜಿ ವೀಕ್ಷಿಸಲು ಕೋವಿಡ್ ನಿಯಮಗಳನ್ನೂ ಉಲಂಘಿಸಿ ಕೋಟೆ ಬೆಟ್ಟ,ಮಾಂದಲ್ಪಟ್ಟಿ ಹಾಗು ಕುಮಾರಪರ್ವತಗಳೇನೋ ಪ್ರವಾಸಿಗರಿಂದೇನೋ ತುಂಬಿ ತುಳುಕುತ್ತಿತ್ತು,ಆದರೆ ಪ್ರವಾಸಿಗರು ಬಂದು ಮಾಡಿರುವ ಅವಾಂತರ ಅಷ್ಟಿಷ್ಟಲ್ಲ.
ಪ್ರಕೃತಿ ಮಾತೆಯ ಸೌಂದರ್ಯ ವೀಕ್ಷಿಸಲು ಬಂದವರು,ಪ್ರಕೃತಿಯನ್ನೇ ಕೊಳಕು ಮಾಡಿ ಹೋಗಿರುವುದಕ್ಕೆ ಇಲ್ಲಿ ಕಂಡು ಬರುವ ಮದ್ಯದ ಬಾಟಲಿಗಳು,ಆಹಾರ ಪೊಟ್ಟಣ,ಪ್ಲಾಸ್ಟಿಕ್ ತ್ಯಾಜ್ಯ ಎಲ್ಲೆಂದರಲ್ಲಿ ಕಂಡು ಬರುತ್ತಿದೆ ನೆಪ ಮಾತ್ರಕ್ಕೆ ನಾಮಫಲಕವಿದ್ದರೂ ಅದರ ಬುಡದಲ್ಲೇ ಕಸದ ರಾಶಿಗಳು ಕೊಳೆತುನಾರುತ್ತಿದೆ.