fbpx

ಸುಂದರನಗರ ಸಮುದಾಯ ಭವನ ಅಭಿವೃದ್ಧಿ: ಕಾಮಗಾರಿ ಪರಿಶೀಲನೆ

ಕೂಡುಮಂಗಳೂರು ಗ್ರಾ.ಪಂ ಎರಡನೇ ವಾರ್ಡ್ ಸುಂದರನಗರದ ಸಮುದಾಯ ಭವನ ಅಭಿವೃದ್ಧಿ ಕಾಮಗಾರಿಯನ್ನು ಕೂಡುಮಂಗಳೂರು ಗ್ರಾ.ಪಂ ಸದಸ್ಯರು ಪರಿಶೀಲನೆ ನಡೆಸಿದರು.

ಸುಂದರನಗರದ ಸಮುದಾಯ ಭವನದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿದ್ದವು. ಸಮುದಾಯ ಭವನದ ಗೇಟ್ ಕೂಡಾ ರಿಪೇರಿ‌ಯಾಗಿ ಬಳಕೆಗೆ ಯೋಗ್ಯವಿಲ್ಲದಂತಾಗಿತ್ತು. ಇದನ್ನು ಕಂಡ ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್, ಕೇಂದ್ರ ಸರ್ಕಾರದ ೧೫ನೇ ಹಣಕಾಸಿನಲ್ಲಿ ಸಮುದಾಯ ಭವನವನ್ನು ಅಭಿವೃದ್ಧಿ ಪವಡಿಸಿದ್ದು,
ಒಂದು‌ ಲಕ್ಷ ರೂ ವೆಚ್ಚದಲ್ಲಿ ಸಮುದಾಯ ಭವನದ ಸುತ್ತಲೂ ಕಾಂಕ್ರೀಟ್ ಹಾಕಿಸಲಾಗಿದ್ದು, ಸಮುದಾಯ ಭವನದ ಮುಂಭಾಗ ಟೈಕ್ಸ್ ಅಳವಡಿಸಲಾಗಿದೆ. ಗೇಟನ್ನು ಅಳವಡಿಸಲಾಗಿದೆ. ಅಲ್ಲದೇ ಗೇಟ್ ನ ಬಳಿ ಚರಂಡಿಗೆ ಸ್ಲಾಬ್ ಹಾಕಿಸಲಾಗಿದೆ. ಸಮುದಾಯ ಭವನ ಅಭಿವೃದ್ಧಿ ಪಡಿಸಿದ್ದಕ್ಕಾಗಿ, ಸಂಬಂಧಪಟ್ಟವರಿಗೆ ಸುಂದರನಗರದ ಮಹಿಳೆಯವರು ಹಾಗೂ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್, ೧೫ ನೇ ಹಣಕಾಸಿನಲ್ಲಿ ಸುಂದರನಗರ ಸಮುದಾಯ ಭವನವನ್ನು ಒಂದು ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿಸಲಾಗಿದೆ. ಸ್ಥಳದಲ್ಲಿ ಶೌಚಾಲಯ ನಿರ್ಮಿಸಿಕೊಡುವ ಬಗ್ಗೆ ಗ್ರಾಮದ ಮಹಿಳೆಯರು ಮನವಿ‌ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಶೌಚಾಲಯವನ್ನು ನಿರ್ಮಿಸಿಕೊಡಲಾಗುವುದು. ಸುಂದರನಗರದ ಸರ್ಕಲ್ ನಲ್ಲಿ ಹೈಮಾಸ್ಕ್ ಲೈಟನ್ನು ಅಳವಡಿಸಲಾಗುವುದು ಎಂದ ಅವರು, ಅಧಿಕಾರ ವಹಿಸಿಕೊಂಡ ಒಂದೂವರೆ ವರ್ಷದಲ್ಲಿ ವಾರ್ಡ್ ನ‌ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಪಡಲಾಗಿದೆ. ವಾರ್ಡ್ ನ ವ್ಯಾಪ್ತಿ ದೊಡ್ಡದಾಗಿದ್ದು, ಎರಡನೇ ವಾರ್ಡ್‌ನ ನವಗ್ರಾಮ, ವಿನಾಯಕ ಬಡಾವಣೆ, ಸುಂದರನಗರ ಹಾಗೂ ಬಸವೇಶ್ವರ ಬಡಾವಣೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

error: Content is protected !!