ಸುಂದರನಗರ ಗಣಪತಿ ಸೇವಾ ಸಮಿತಿಯಿಂದ ೨೮ನೇ ವರ್ಷದ ಅದ್ದೂರಿ ಗಣೇಶೋತ್ಸವ

ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಸುಂದರನಗರದಲ್ಲಿ ಬುಧಾವರ ೨೮ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಯಿತು.
ಸುಂದರನಗರ ಗಣಪತಿ ಸೇವಾ ಸಮಿತಿ ಹಾಗೂ ಗ್ರಾಮಸ್ಥರು ಜೊತೆಗೂಡಿ ಅದ್ದೂರಿ ಗಣೇಶೋತ್ಸವವನ್ನು ಏರ್ಪಡಿಸಲಾಗಿದೆ. ಐದು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆ ಮಾಡಲಿದ್ದಾರೆ. ಇಂದು ಮಧ್ಯಾಹ್ನ ೧:೩೦ ಕ್ಕೆ ಮಹಾಮಂಗಳಾರತಿ ನೆರವೇರಿಸಲಾಯಿತು.

ಸುಂದರನಗರ ಹಾಗೂ ನೆರೆಯ ಗ್ರಾಮದಿಂದ ಭಕ್ತಾದಿಗಳು ಪೂಜೆಗೆ ಪಾಲ್ಗೊಂಡಿದ್ದರು. ನಂತರ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಸಂದರ್ಭ ಮಾತನಾಡಿದ ಸುಂದರನಗರ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಮಾರಿಮುತ್ತು, ಸ್ಥಳೀಯ ಉದ್ಯಮಿಗಳು, ಸ್ಥಳೀಯ ಪಂಚಾಯಿತಿ ಸದಸ್ಯರು ಸೇರಿದಂತೆ ಗ್ರಾಮದ ಎಲ್ಲಾ‌ ಜನತೆಯ ಸಹಕಾರದಿಂದ ಇಂದು ಸುಂದರನಗರದಲ್ಲಿ ಸಂಭ್ರಮದ ಗಣೇಶ ಉತ್ಸವವನ್ನು ನಡೆಸಲಾಗುತ್ತಿದೆ. ಉತ್ಸವ ಐದು ದಿನಗಳ ಕಾಲ ನಡೆಯಲಿದ್ದು, ಗ್ರಾಮಸ್ಥರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ನಂತರ ಮಾತನಾಡಿದ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್, ಸುಂದರನಗರದಲ್ಲಿ ಬಹಳ ಅಚ್ಚುಕಟ್ಟಾಗಿ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಗಣಪತಿ ಸೇವಾ ಸಮಿತಿ ಹಾಗೂ ಗ್ರಾಮದ ಜನತೆಯ ಸಹಕಾರದಿಂದ ನಡೆಯುತ್ತಿರುವ ಈ ಐದು ದಿನಗಳ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಆಶಿಸಿದರು.
ಈ ಸಂದರ್ಭ ಸುಂದರನಗರ ಗಣಪತಿ ಸೇವಾ ಸಮಿತಿ ಪ್ರಮುಖರಾದ ಮಂಜು, ಹರೀಶ್, ನವೀನ, ರೋಷನ್, ಅಭಿ, ವಿಕ್ಕಿ, ಹರೀಶ್, ಜೀತು, ವಿನಿ ಹಾಗೂ ಊರಿನ ಪ್ರಮುಖರಾದ ಕುಮಾರ್, ಸುಬ್ಬಯ್ಯ, ಮುರುಗ ಹಾಗೂ ಮತ್ತಿತರರು ಇದ್ದರು.

error: Content is protected !!