fbpx

ಸುಂಟಿಕೊಪ್ಪ ವ್ಯಾಪಾರಸ್ಥರ ಮತ್ತು ಸಾರ್ವಜನಿಕರ ಗಮನಕ್ಕೆ

ಇದೇ ತಿಂಗಳು 15 ರಂದು ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. ಆ ನಿಮಿತ್ತ ಅಂಗಡಿಗಳಲ್ಲಿ ಯಾವುದೇ ರೀತಿಯ ರಾಷ್ಟ್ರಧ್ವಜ/ ರಾಷ್ಟ್ರ ನಾಯಕರ ಚಿತ್ರ ಇರುವ ಮಾಸ್ಕ್ ಮತ್ತು ಪ್ಲಾಸ್ಟಿಕ್ ಬಾವುಟವನ್ನು ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಅಲ್ಲದೇ, ಸಾರ್ವಜನಿಕರು ಕೂಡ ಪ್ಲಾಸ್ಟಿಕ್ ಬಾವುಟ ಮತ್ತು ತ್ರಿವರ್ಣ ಧ್ವಜದ ಮಾಸ್ಕ್ ಧರಿಸುವಂತಿಲ್ಲ.
ಒಂದು ವೇಳೆ ಇದನ್ನು ಉಲ್ಲಂಘಿಸಿ‌ ಮಾರಾಟ ಮಾಡಿದರೆ ಮತ್ತು ಧರಿಸಿದರೆ ಅಂತಹ ಅಂಗಡಿಗಳ ಪರವಾನಗೆಯನ್ನು ರದ್ದುಪಡಿಸಲಾಗುವುದು ಮತ್ತು ಕಾನೂನು ರೀತಿಯ ಕ್ರಮಗಳನ್ನು‌ ಕೈಗೊಳ್ಳಲಾಗುವುದು ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಒ ವೇಣುಗೋಪಾಲ್ ತಿಳಿಸಿದ್ದಾರೆ.

error: Content is protected !!