ಸುಂಟಿಕೊಪ್ಪ ವರ್ತಕರ ತುರ್ತು ಗಮನಕ್ಕೆ

ಸುಂಟಿಕೊಪ್ಪ: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮುಂದಿನ ಸೋಮವಾರ ತರಕಾರಿ, ದಿನಸಿ, ಹಣ್ಣು, ಮೀನು, ಮಾಂಸ ಹಾಗೂ ಕೋವಿಡ್ -19 ಮಾರ್ಗಸೂಚಿಯನ್ವಯ ಅನುಮತಿಸಲಾಗಿರುವ ಇತರೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ವರ್ತಕರು ಮತ್ತು ಅವರ ಕೆಲಸಗಾರರು ಕಡ್ಡಾಯವಾಗಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿ ನೆಗೆಟೀವ್ ರಿಪೋರ್ಟ್ ಹೊಂದಿರತಕ್ಕದ್ದು. ಕೋವಿಡ್ ಟೆಸ್ಟ್ ಮಾಡಿಸಿ ನೆಗೇಟಿವ್ ರಿಪೋರ್ಟ್ ಹೊಂದಿರದೇ ವ್ಯಾಪಾರ ನಡೆಸಿದಲ್ಲಿ ಅಂತಹ ಅಂಗಡಿಗಳಿಗೆ ಬೀಗ ಹಾಕಿ ಕಾನೂನು ಕ್ರಮ ಜರುಗಿಸಲಾಗುವುದು.