fbpx

ಸುಂಟಿಕೊಪ್ಪ ಗಣೇಶ್ ಚಿತ್ರಮಂದಿರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಉಚಿತ ಪ್ರದರ್ಶನ

ಮಾ.15 ಮಂಗಳವಾರ ಹಾಗೂ ಮಾ.16 ಬುಧವಾರದಂದು. ದಿನಕ್ಕೆ ನಾಲ್ಕು ಆಟಗಳಂತೆ ಎರಡು ದಿನ ಪ್ರಸ್ತುತ ಸಿನಿ ಲೋಕದಲ್ಲಿ ಸಂಚಲನ ಮೂಡಿಸಿ, ಚರ್ಚೆಗೆ ಗ್ರಾಸವಾಗಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮಡಿಕೇರಿ ತಾಲೂಕಿನ ಸುಂಟಿಕೊಪ್ಪ ‘ಗಣೇಶ್’ ಚಿತ್ರಮಂದಿರದಲ್ಲಿ ಸಾರ್ವಜನಿಕರಿಗಾಗಿ ಉಚಿತ ಪ್ರದರ್ಶನ ಕಾಣಲಿದೆ‌. ಸಾರ್ವಜನಿಕರು, ಸಿನಿ ಪ್ರಿಯರು ಸದುಪಯೋಗ ಪಡೆದುಕೊಂಡು ಉಚಿತವಾಗಿ ಸಿನಿಮಾ ನೋಡಬಹುದಾಗಿದೆ.

ಕೊಡಗಿನಲ್ಲಿ The Kashmir files ಚಲನಚಿತ್ರವನ್ನು ಎರಡು ದಿನಗಳ ಕಾಲ ಸುಂಟಿಕೊಪ್ಪದ ಗಣೇಶ್ ಥಿಯೇಟರಿನಲ್ಲಿ ಜಿಲ್ಲೆಯ ಜನರಿಗೆ ಉಚಿತವಾಗಿ ಪ್ರದರ್ಶನ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ.
ನಾಳೆ ಮತ್ತು ನಾಡಿದ್ದು (ಮಾರ್ಚ್ 15 ಮತ್ತು 16) ದಿನಕ್ಕೆ ತಲಾ ನಾಲ್ಕು ಪ್ರದರ್ಶನವಿರುತ್ತದೆ. (10am, 2pm, 5pm, 8pm)
ಪ್ರತಿ ಪ್ರದರ್ಶನದ ಇನ್ನೂರೈವತ್ತು ಟಿಕೆಟ್‌ಗಳನ್ನು ಆಸಕ್ತರು ಸ್ಥಳದಲ್ಲಿಯೇ ಉಚಿತವಾಗಿ ಪಡೆದುಕೊಳ್ಳಬಹುದು.

ಥಿಯೇಟರ್ ಮ್ಯಾನೇಜರ್ ರಮೇಶ ಬಾಬು ಅವರನ್ನು ಸಂಪರ್ಕಿಸಬಹುದು – 9986561547.
ಪ್ರತಿ ಪ್ರದರ್ಶನದ ಐವತ್ತು ಟಿಕೇಟುಗಳನ್ನು ಜಿಲ್ಲೆಯ ಹಿರಿಯ ನಾಗರೀಕರಿಗೆ ಮತ್ತು ಕಾರ್ಯಕರ್ತರಿಗಾಗಿ ಕಾಯ್ದಿರಿಸಲಾಗಿದೆ. ಹಿರಿಯ ಕಾರ್ಯಕರ್ತರು ಸುಂಟಿಕೊಪ್ಪದ ನರಸಿಂಹಜಿಯವರನ್ನು (9448582102) ಹಾಗೂ ಮೇಜರ್ ಕುಶವಂತ್ ಕೋಳಿಬೈಲು(9483213831) ಮತ್ತು ಮಧು ಬೋಪಯ್ಯ(9741433505) ಅವರನ್ನು ಸಂಪರ್ಕಿಸಬಹುದು.

error: Content is protected !!