ಸುಂಟಿಕೊಪ್ಪದಲ್ಲಿ ಆಯುಧ ಪೂಜೆ ಸಮಾರಂಭ ರದ್ದು

ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ಆಚರಿಸಿಕೊಂಡು ಬರುತ್ತಿದ್ದ ಅದ್ದೂರಿ ಆಯುಧ ಪೂಜೆ ಸಮಾರಂಭವನ್ನು ಕೋವಿಡ್ -19 ಮಾರ್ಗಸೂಚಿ ಜಾರಿಯಲ್ಲಿರುವುದರಿಂದ ರದ್ದುಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಬಿ.ಎಂ. ಪೂವಪ್ಪ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

ಅದ್ದೂರಿ ಆಯುಧ ಪೂಜೆ ಸಮಾರಂಭವನ್ನು ರದ್ದುಪಡಿಸಿರುವುದರಿಂದ ತಾ. 14 ರಂದು ಬೆಳಗ್ಗೆ 7 ಗಂಟೆಗೆ ವಾಹನ ಚಾಲಕರ ಸಂಘದ ಆಶ್ರಯದಲ್ಲಿ ಕಾರು ನಿಲ್ದಾಣದಲ್ಲಿ ವಾಹನಗಳಿಗೆ ಪೂಜೆಯನ್ನು ಮಾತ್ರ ನೆರವೇರಿಸಲಾಗುವುದು. ಕೋರೋನಾ ಪಿಡುಗು ನಿಯಂತ್ರಣಕ್ಕೆ ಬಂದಲ್ಲಿ ಮುಂದಿನ ವರ್ಷದಿಂದ ಅದ್ದೂರಿ ಆಯುಧ ಪೂಜೆಯನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

error: Content is protected !!