fbpx

ಸಿ.ಐ.ಡಿ ಅರಣ್ಯ ಘಟಕ ಭರ್ಜರಿ ಅಪರಾಧದ ಭೇಟೆ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆನೆ ದಂತ, 2 ನಕ್ಷತ್ರ ಆಮೆ ವಶ

ಎರಡು ಪ್ರತ್ಯೇಕ ಪ್ರಕರಣದಲ್ಲಿ ಮಡಿಕೇರಿಯ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕ ದಾಳಿ ನಡೆಸಿ 2 ಆನೆದಂತ ಮತ್ತು 2 ಜೀವಂತ ನಕ್ಷತ್ರ ಆಮೆಗಳನ್ನು ವಶಕ್ಕೆ ಪಡೆದು ಐವರನ್ನು ವಶಕ್ಕೆ ಪಡೆಯಲಾಗಿದೆ.

ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕಾಲೇಜು ರಸ್ತೆಯ ಬಸ್ ತಂಗುದಾಣದ ಬಳಿ ಆನೆ ದಂತಗಳನ್ನು ಮಾರಟ ಮಾಡಲು ಯತ್ನಿಸುತ್ತಿದ್ದ ಮಹದೇವಸ್ವಾಮಿ,ಗುರು.ಜಿ ಹಾಗು ಹೇಮಂತ್ ರಾಜ್ ರನ್ನು ಖಚಿತ ಮಾಹಿತಿ ಮೇರೆಗೆ ಎರಡು ಆನೆ ದಂತ ಸೇರಿದಂತೆ ಮೂವರು ಆರೋಪಿಗಳನ್ನು ಸಿಐಡಿ ಅರಣ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ. ಮಡಿಕೇರಿಯ ಮತ್ತೊಂದು ಬಸ್ ತಂಗುದಾಣದಲ್ಲಿ ಸುರೇಶ್ ಮತ್ತು ಶರವಣನ್ ಎರಡು ಜೀವಂತ ನಕ್ಷತ್ರ ಆಮೆಗಳನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಸಂದರ್ಭ ಸಿಐಡಿ ಪೊಲೀಸ್ ಅರಣ್ಯ ಘಟಕ ಇಬ್ಬರನ್ನು ಮಾಲು ಸಮೇತ ವಶಕ್ಕೆ ಪಡೆಯಲಾಗಿದೆ.ಬಂಧಿತರನ್ನು ವನ್ಯಜೀವಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

error: Content is protected !!