ಸಿ.ಎಂ ಪದವಿಗೆ ಪಿಣರಾಯಿ ವಿಜಯನ್ ಪ್ರತಿಜ್ಞಾ ಸ್ವೀಕಾರ

ಕೇರಳ(ತಿರುವನಂತಪುರಂ): ಸತತ ಎರಡನೇ ಬಾರಿಗೆ ಎಡರಂಗ ಅಧಿಕಾರದ ಗದ್ದುಗೆ ಏರಿರುವ ಹಿನ್ನಲೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಪ್ರತಿಜ್ಞಾ ಸ್ವೀಕರಿಸಿದರು.

ಕೇರಳ ರಾಜಧಾನಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರತಿಜ್ಞಾ ಸ್ವೀಕರಿಸಿದ ಪಿಣರಾಯಿ ವಿಜಯನ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ.ಕೇರಳದ ರಾಜಕೀಯ ಲೆಕ್ಕಾಚಾರದಂತೆ ಒಂದು ಬಾರೀ ಎಲ್ ಡಿಎಫ್ ಮತ್ತೊಂದು ಭಾರಿಗೆ ಯುಡಿಎಫ್ ಅಧಿಕಾರಕ್ಕೆ ಬರುತ್ತಿದ್ದದು ಸಾಮಾನ್ಯ ಎನ್ನುವಂತಾಗಿತ್ತು,ಆದರೆ ಈ ಭಾರಿ ಪ್ರಭುದ್ದ ಮತದಾರ ಇತಿಹಾಸವನ್ನು ತಿರುಚಿ ಕಳೆದ ಬಾರಿಯಂತೆ ಎಲ್ ಡಿಎಫ್(ಎಡರಂಗ) ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ.