fbpx

ಸಿಹಿಯಾದ ಸೇಡು ತೀರಿಸಿಕೊಳ್ಳೋದು ಅಂದ್ರೆ ಹೀಗೆ…

ರತನ್ ಟಾಟಾ ಅವರು ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯವಾದ Harwardನಲ್ಲಿ Advanced Management ವಿಷಯದಲ್ಲಿ Diploma ಮಾಡಿ, ಬಂದು ಕುಟುಂಬದ ಟಾಟಾ ಕಂಪೆನಿ ಸೇರಿಕೊಂಡರು. ಸುಮಾರು 30 ವರ್ಷಗಳ ಕಾಲ ಸಾಮಾನ್ಯ ಉದ್ಯೋಗಿಯಂತೆ ಹಲವಾರು ಹುದ್ದೆಗಳಲ್ಲಿ ಕೆಲಸ ಮಾಡಿ, 1991ರಲ್ಲಿ ಕಂಪೆನಿಯ Chairmen ಹುದ್ದೆಗೇರಿದರು.

Chairmen ಆಗಿ ಕಂಪೆನಿಯನ್ನು ಮುನ್ನಡೆಸುತ್ತಿದ್ದರು. 1998ರವರೆಗೆ ಬಾರಿ ಗಾತ್ರದ ವಾಹನಗಳಾಗಿದ್ದ ಬಸ್, ಲಾರಿಯನ್ನೇ ನಿರ್ಮಾಣ ಮಾಡುತ್ತಿದ್ದ ಕಂಪೆನಿ, ಕಾರ್ ಗಳನ್ನು ತಯಾರಿಸುವ ಹೊಸ ಹೆಜ್ಜೆಯಿಟ್ಟಿತು. ಅದು ರತನ್ ಟಾಟಾ ಅವರ ದೊಡ್ಡ ಕನಸೂ ಆಗಿತ್ತು. ಆದರೆ ಟಾಟಾ ಮೋಟರ್ಸ್ ತಂದ ಮೊದಲ ಕಾರು ‘ಟಾಟಾ ಇಂಡಿಕಾ’ ಮಾರಾಟ ಸಪ್ಪೆಯಾಯಿತು. ಜನರಿಂದ ಕಾರ್ ಕುರಿತು ನಿರಾಶಾದಾಯಕ ಪ್ರತಿಕ್ರಿಯೆ ದೊರೆಯಿತು.

ಮಾರುಕಟ್ಟೆಯಲ್ಲಿ ಇದರ ಮಾರಾಟ ಮಕಾಡೆ ಮಲಗಿತ್ತು. ಇದರಿಂದ ಕಂಪೆನಿ‌ ಬಾರಿ ನಷ್ಟಕ್ಕೆ ಒಳಗಾಗಿತ್ತು. ಟಾಟಾ ಮೋಟರ್ಸ್ ಕಂಪೆನಿಯನ್ನು ಮಾರಿಬಿಡಬೇಕೆಂದು ಆಲೋಚಿಸಿ ಬಿಟ್ಟಿದ್ದರು ರತನ್ ಟಾಟಾ. ಅದಕ್ಕಾಗಿ ಅಮೇರಿಕಾಗೆ ತೆರಳಿದ್ದರು ಅವರು. ಅಲ್ಲಿ ‘Ford’ ಕಂಪೆನಿಗೆ ಮಾರಬೇಕು ಅಂದುಕೊಂಡರು. ಅಮೇರಿಕಾದಲ್ಲಿ ಮೂರು ಗಂಟೆ ಕಾಲ ‘Ford’ ಕಂಪೆಯ ಮುಖ್ಯಸ್ಥ ವಿಲ್ ಫೊಡ್೯ ಅವರ ಬಳಿ ಚರ್ಚೆ ನಡೆಸಿದರು ರತನ್ ಟಾಟಾ ಅವರು. ಆದರೆ ರತನ್ ಟಾಟಾ ಅವರನ್ನು ಅಲ್ಲಿ ತೀರಾ ಕೆಟ್ಟದಾಗಿ ಅವಮಾನಿಸಲಾಯಿತು.

ಅದರಿಂದ ಬೇಸರಗೊಂಡ ರತನ್ ಅವರು ಕಂಪೆನಿಯನ್ನು ಮಾರುವ ಡೀಲ್ ಬಿಟ್ಟು,ಬೆಳೆಸುವ ನಿರ್ಧಾರ ಮಾಡಿದರು. ಭಾರತಕ್ಕೆ ಮರಳಿ ತಮ್ಮ ಟಾಟಾ ಮೋಟಾರ್ಸ್ ಮೂಲಕ ತಕ್ಷಣ ‘ಇಂಡಿಕಾ ವೀ 2’ ಎಂಬ ಕಾರನ್ನು ಮಾರುಕಟ್ಟೆಗೆ ತಂದರು. ಅದು ಭರ್ಜರಿ ಯಶಸ್ಸನ್ನು ಕಂಡಿತು. ಮಾರುಕಟ್ಟೆಯಲ್ಲಿ ಬಾರಿ ಸದ್ದು ಮಾಡಿ, ಕಂಪೆನಿಗೆ ದೊಡ್ಡ ಲಾಭವನ್ನು ತಂದು ಕೊಟ್ಟಿತ್ತು.


ಅಷ್ಟೊತ್ತಿಗಾಗಲೇ ‘ Ford’ ಕಂಪೆನಿಯ ‘Jaguaar’ ಹಾಗು ‘Land Rover’ ಕಾರ್ ಗಳ ಮಾರಾಟ ತಲೆ ಕೆಳಗಾಗಿ ನೆಲಕಚ್ಚಿ ಬಿಟ್ಟಿತ್ತು. ಆಗ ಅವನ್ನು ಮಾರುವ ನಿರ್ಧಾರಕ್ಕೆ ಬಂದಿತ್ತು ‘Ford’ ಕಂಪೆನಿ. ಆಗ ರತನ್ ಟಾಟಾ ಅವರು ಅವುಗಳನ್ನು ಖರೀದಿಸಿತು. ಅದಕ್ಕೆ ‘Ford’ ಕಂಪೆನಿ ರತನ್ ಟಾಟಾ ಅವರಿಗೆ ವಂದಿಸಿತು. ಯಾವ ಕಂಪೆನಿಯ ಮಾಲಿಕ ಅವಮಾನಿಸಿ ವ್ಯಂಗ್ಯವಾಡಿದ್ದರೋ ಅವರದೇ ಕಂಪೆನಿ ನಷ್ಟದಲ್ಲಿದ್ದಾಗ ಅದನ್ನು ಖರೀದಿಸಿದರು.

ನಂತರ Jaguaar ಹಾಗು Land Rover ಕಾರ್ ಗಳನ್ನು ಪ್ರತಿಷ್ಠೆಯ ಗುರುತಾಗಿಸಿ ಮೇಲಕ್ಕೆ ತಂದರು. ಅವಮಾನ ವ್ಯಂಗ್ಯ ಮಾಡಿದವರ ಮುಂದೆ ಮಾತಿನ ಕ್ಷುಲ್ಲಕ ಏಟುಗಳನ್ನು ಕೊಡದೆ ಮೌನವಾಗಿದ್ದು ಬೆಳೆದೇ ತೋರಿಸಬೇಕು ಎಂಬುದನ್ನು ರತನ್ ಟಾಟಾ ಅವರು ಮಾಡಿ ತೋರಿಸಿದರು. ಇದೇ ಅಲ್ಲವೇ ಸಹಿಯಾದ ಸೇಡು ತೀರಿಸಿಕೊಳ್ಳೋದು ಅಂದ್ರೆ.

error: Content is protected !!