ಸಿದ್ಧಾಪುರ ನಗರದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ

ಸಿದ್ಧಾಪುರ-: ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು 4 ರಾಜ್ಯಗಳಲ್ಲಿ ಜಯಭೇರಿಯನ್ನು ಬಾರಿಸಿದ್ದು ಎಲ್ಲಾ ಕಡೆ ಬಿಜೆಪಿ ಸರಕಾರ ರಚಿಸುವ ಹಂತದಲ್ಲಿದ್ದು ಕೇಸರಿಪಡೆಯ ಗೆಲುವಿನ ಸಲುವಾಗಿ ಬಿಜೆಪಿ ಸಿದ್ಧಾಪುರ ಶಕ್ತಿಕೇಂದ್ರದ ಅಧ್ಯಕ್ಷರು-ಉಪಾಧ್ಯಕ್ಷರುಗಳ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನಾ ಕಾರ್ಯಕರ್ತರು ಭಾರತಮಾತೆಗೆ, ಮೋದಿ-ಯೋಗಿಗೆ ಜೈಕಾರ ಹಾಕುತ್ತಾ ಸಿದ್ಧಾಪುರ ನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವುದರ ಮೂಲಕ ಗೆಲುವನ್ನು ಸಂಭ್ರಮಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಸಿದ್ಧಾಪುರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರವೀಣ್ ಸಿದ್ಧಾಪುರ ರವರು ನಾಲ್ಕು ಕಡೆ ಕಾಂಗ್ರೆಸ್ಸನ್ನು ಮಣ್ಣು ಮುಕ್ಕಿಸುವ ಮೂಲಕ ಸಂಪೂರ್ಣ ಕಾಂಗ್ರೆಸ್ ಮುಕ್ತ ಭಾರತಕ್ಕೆ ಅಡಿಪಾಯ ಹಾಕಿ ದ್ವಿತೀಯ ಭಾರಿಗೆ ಬಿಜೆಪಿಯನ್ನು ಆಯ್ಕೆ ಮಾಡಿದ ಮತದಾರರಿಗೆ ಧನ್ಯವಾದಗಳು ಅರ್ಪಿಸುವುದಾಗಿ ತಿಳಿಸಿದರು, ಮುಂದಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಕೂಡಾ ಚುನಾವಣೆ ನಡೆಯಲಿದ್ದು ಉತ್ತರಪ್ರದೇಶದ ರೀತಿಯಲ್ಲಿಯೇ ಪುನಃ ಕರ್ನಾಟಕದಲ್ಲಿ ಕೂಡಾ ಬಿಜೆಪಿ ಸರಕಾರವನ್ನು ತರಲು ಹಿಂದೂಗಳು ಶ್ರಮಿಸಬೇಕೆಂದು ಕರೆ ಕೊಟ್ಟರು.

ಯುವ ಮುಖಂಡರಾದ ಸುರೇಶ್ ನೆಲ್ಲಿಕ್ಕಲ್ ರವರು ಮಾತನಾಡಿ ಮತ್ತೊಮ್ಮೆ ಮೋದಿಯವರ ಯೋಗಿಯವರ ಜನಪರ ಆಡಳಿತ ಮೆಚ್ಚಿ ವಿಪಕ್ಷಗಳ ಅಪಪ್ರಚಾರಗಳ ನಡುವೆಯೂ ಅಭೂತಪೂರ್ವ ಗೆಲುವು ಸಾಧಿಸಲು ಕಾರಣೀಕರ್ತರಾದ ಕಾರ್ಯಕರ್ತರಿಗೆ ಅಭಿನಂದನೆಗಳು ಸಲ್ಲಿಸಿದರು…
ಪಂಚರಾಜ್ಯ ಚುನಾವಣೆಯ ಬಿಜೆಪಿ ಗೆಲುವು ಮುಂಬರುವ ಲೋಕಸಭಾ ಚುನಾವಣೆಯ ಗೆಲುವು ಎಂದು ವಿಶ್ಲೇಷಿಸಿದ ಅವರು 2024 ರ ಚುನಾವಣೆಯಲ್ಲಿ ಕೂಡಾ ಮೋದಿಯವರು ಗೆಲ್ಲುವ ನಿಟ್ಟಿನಲ್ಲಿ ನಾವು ಇಂದೇ ಕಾರ್ಯಪ್ರವೃತರಾಗಬೇಕೆಂದು ಕಿವಿಮಾತು ಹೇಳಿದರು.

ಈ ಸಂಧರ್ಭದಲ್ಲಿ ಸಿದ್ಧಾಪುರ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ-ಸಹಪ್ರಮುಖರು, ಹಿರಿಯ ಮುಖಂಡರುಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಸದಸ್ಯರುಗಳು, ಹಿಂದೂ ಸಂಘಟನೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು…