ಸಿದ್ದಾಪುರದಲ್ಲಿ ಮತ್ತೊಂದು ಭೀಕರ ಗೋಹತ್ಯೆ…!

ಕೊಡಗು: ಎರಡು ದಿನಗಳ ಹಿಂದೆಯಷ್ಟೇ ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಗೋವನ್ನು ಮಾರಣಹೋಮ ಮಾಡಿ,ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಸಂದರ್ಭ ವ್ಯಕ್ತಿಯೊಬಬನ್ನು ವಶಕ್ಕೆ ಪಡೆಯುತ್ತಿದ್ದಂತೆ,ಇದೀಗ ಸಿದ್ದಾಪುರ ಸಮೀಪದ ಮಠ ಗ್ರಾಮದ ಚೌಡಿಕಾಡಿನಲ್ಲಿ ಎರಡು ತಿಂಗಳ ಗಬ್ಬದ ಹಸವೊಂದನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಮಠ ಗ್ರಾಮದ ಸೇವ್ಯಾರ್ ಎಂಬುವವರು ಗುಜರಾತ್ ನ ಗಿರ್ ತಳಿಯ ವಂಶಾಭಿವೃದ್ದಿಗಾಗಿ ಇರಿಸಿಕೊಂಡಿದ್60 ರಿಂದ 80 ಸಾವಿರ ಬೆಲೆಬಾಳುವ ಗಬ್ಬದ ಹಸುವನ್ನು ಕೊಟ್ಪಿಗೆಯಿಂದಲೇ ಕದ್ದೋಯ್ದು ಈ ಕೃತ್ಯ ನಡೆಸಿದ್ದಾರೆ.ಸಿದ್ದಾಪುರದ ಕಕೇಸರಿ ಪಡೆ ಯುವಕರ ನೇತೃತ್ವದಲ್ಲಿ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ.
ಇದನ್ನು ಸಿದ್ಧಾಪುರದ ಬಿಜೆಪಿ ಮತ್ತು ವಿವಿಧ ಹಿಂದೂಪರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತಿದೆ.
ಮುಂದಿನ ದಿನಗಳಲ್ಲಿ ಸಿದ್ಧಾಪುರ ವ್ಯಾಪ್ತಿಯಲ್ಲಿ ಪೋಲಿಸರು ಗೋಹತ್ಯೆಗೆ ಕಡಿವಾಣ ಹಾಕದಿದ್ದರೆ ಸಿದ್ಧಾಪುರ ನಗರ ಬಿಜೆಪಿ ಮತ್ತು ಹಿಂದೂಸಂಘಟನೆಗಳಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ವಿವಿಧ ಹಿಂದೂ ಸಂಘಟನೆಗಳು ಎಚ್ಚರಿಕೆಯನ್ನು ನೀಡಲಾಗಿದೆ.
ಪ್ರವೀಣ್ ಸಿದ್ಧಾಪುರ
ಅಧ್ಯಕ್ಷರು ಸಿದ್ಧಾಪುರ ಬಿಜೆಪಿ ಶಕ್ತಿ ಕೇಂದ್ರ