ಸಿದ್ದರಾಮಯ್ಯ ವಿರುದ್ದ ಕೊಡವ ಸಮಾಜದಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ: ಸಾಥ್ ನೀಡಿದ ಶಾಸಕ ಅಪಚ್ಚುರಂಜನ್ ಅಕ್ರೋಶ

ಕೊಡಗು: ಮುಸ್ಲಿಮರು,ಕ್ರೈಸ್ತರು,ದಲಿತರಂತೆ ಕೊಡವರು ಗೋ ಮಾಂಸ ಸೇವನೆ ಮಾಡುತ್ತಾರೆ ಎಂದು ಹೇಳಿಕೆ ನೀಡಿರುವ ವಿಪಕ್ಷನಾಯಕ ಸಿದ್ದರಾಮಯ್ಯ ವಿರುದ್ದ ಜಿಲ್ಲಾ ಕೇಂದ್ರ ಮಡಿಕೇರಿಯ ಜಿಲ್ಲಾಡಳಿತ ಭವನ ಎದುರು ಜಿಲ್ಲೆಯ ವಿವಿಧ ಕೂಡವ ಸಮಾಜ ಮತ್ತು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸಿದ್ದರಾಮಯ್ಯರ ಹೇಳಿಕೆಯಿಂದ ಕುಲದೇವ ಇಗ್ಗುತ್ತಪ್ಪ,ಕಾವೇರಿ ಮಾತೆಗೆ ಅವಮಾನ ಮಾಡಿದಂತಾಗಿದ್ದು, ಬಹಿರಂಗವಾಗಿ ಕ್ಷೆಮೆಯಾಚಿಸಬೇಕು ಮತ್ತು ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಸಹಾ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

error: Content is protected !!