ಸಿದ್ದರಾಮಯ್ಯ ಮೇಲೆ ಮೊಟ್ಟೆ ದಾಳಿ, ಕಪ್ಪು ಬಾವುಟ ಪ್ರದರ್ಶನ: ಆಗಸ್ಟ್ 26ಕ್ಕೆ ಎಸ್ಪಿ ಕಛೇರಿ ಮುತ್ತಿಗೆ ಸಿದ್ದು ಕರೆ

ಕೊಡಗು ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ,ಕಪ್ಪು ಬಾವುಟ ಪ್ರದರ್ಶನ, ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ವಿಫಲವಾಗಿದ್ದು, ಆರ್ ಎಸ್ ಎಸ್ , ಬಿಜೆಪಿ ಏಜೆಂಟರಂತೆ ವರ್ತಿಸಿದ್ದನ್ನು ಖಂಡಿಸಿ ಇದೇ 26 ನೇ ತಾರೀಖು ಎಸ್ಪಿ ಕಛೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಸೋಮವಾರಪೇಟೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಒಬ್ಬ ಪ್ರತಿಪಕ್ಷದ ನಾಯಕ ನಿಗೆ ರಕ್ಷಣೆ ನೀಡಲಾಗದ ಪೊಲೀಸರಿಗೆ ತಕ್ಕ ಶಾಸ್ತಿಯಾಗಲಿದೆ,ಮುಂದಿನ ಆರು ತಿಂಗಳಲ್ಲಿ ಬಿಜೆಪಿಯನ್ನು ಮಟ್ಟ ಹಾಕಿ ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.

error: Content is protected !!