ಸಿದ್ದರಾಮಯ್ಯ ಬೇಜವಾಬ್ದಾರಿಯ ಹೇಳಿಕೆ ಬಿಡಬೇಕು: ಪ್ರತಾಪ್ ಸಿಂಹ

ಮಾಜಿ ಮುಖ್ಯ ಮಂತ್ರಿ, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯರವರ ಕಾರಿನ ಮೇಲೆ ಮೊಟ್ಟೆ ದಾಳಿ ಮಾಡಿದ್ದು ಸರಿಯಲ್ಲ. ಪ್ರತಿಭಟನೆ ಮಾಡಲು ಹಲವು ದಾರಿಗಳಿದ್ದವು ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಕಾರ್ಯಕರ್ತರ ನಡೆಯನ್ನು ಖಂಡಿಸಿದ್ದಾರೆ.
ಸಿದ್ದರಾಮಯ್ಯರವರ ಬೇಜವಾಬ್ದಾರಿಯ ಹೇಳಿಕೆ ಅದರಲ್ಲೂ ಟಿಪ್ಪು ಜಯಂತಿ, ಟಿಪ್ಪುವಿನ ಓಲೈಕೆಯೇ ಕೊಡಗಿನವರನ್ನು ಕೆರಳಿಸುವಂತೆ ಮಾಡಿದೆ. ಟಿಪ್ಪುವಿನ ಓಲೈಕೆ, ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದೆಲ್ಲಾ ನೀಡುವ ಬೇಜವಬ್ದಾರಿ ಹೇಳಿಕೆಗಳು ಇಂತಹ ಸನ್ನಿವೇಶಕ್ಕೆ ಕಾರಣ ಎಂದರು.