ಸಿಕ್ಕಿಂನಲ್ಲಿ ಸೇನಾ ವಾಹನ ಅಪಘಾತ:ನಾಲ್ವರ ಸಾವು

ಗಾಂಟಾಕ್: ಮಂಜಿನಿಂದ ತುಂಬಿದ ಕಡಿದಾದ ರಸ್ತೆಯಲ್ಲಿ ತೆರಯಳುತ್ತಿದ್ದ ಸಂದರ್ಭ ಸೇನಾ ವಾಹನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಪರಿಣಾಮ ಮೂವರು ಸೈನಿಕರು ಸೇರಿದಂತೆ ಕರ್ನಲ್ ರೊಬ್ಬರ 13 ವರ್ಷದ ಮಗ ಸಾವನಪ್ಪಿದ್ದು ಮತ್ತೂಬ್ಬ ಸೈನಿಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ನಾಥುಲಾದ ಸೇನಾ ಮಾರ್ಗದ ಜವಹಾರ್ ಲಾಲ್ ನೆಹರು ರಸ್ತೆಯ 17ನೇ ಮೈಲಿನ ರಸ್ತೆಯಲ್ಲಿ ಬಾರೀ ಮಂಜು ತುಂಬಿದ್ದು -6.1 ಡಿಗ್ರಿ ವಾತಾವರಣದಲ್ಲಿ ವಾಹನ ಚಲಿಸುತ್ತಿತ್ತು ಎನ್ನಲಾಗಿದೆ.ಸ್ಥಳದಿಂದ ಮೃತದೇಹ ಹೊರತೆಗೆಯಲಾಗಿದ್ದು,ಮುಂದಿನ ಕ್ರಮ ಕೈಗೊಳ್ಳಲಾಗಿದೆ.

error: Content is protected !!