fbpx

ಸಿಂಹ ಮೇಲೆ ಬೊಮ್ಮಾಯಿ ಕಿಡಿ!

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಕ್ಷೇತ್ರದ ದಸರಾ ಉತ್ಸವಕ್ಕೆ ಅನುದಾನ ಬಿಡುಗಡೆ ಸಂಬಂಧ 5 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಮನವಿ ಪತ್ರ ನೀಡಿ, ಅವರ ಗಮನ ಸೆಳೆಯಲು ಹೋದ ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಮುಖ್ಯಮಂತ್ರಿಗಳು ಗರಂ ಆಗಿದ್ದಾರೆ.

ದಾಖಲೆ ಸಲ್ಲಿಸಿ, ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ಪ್ರತಾಪ್ ಸಿಂಹ ಅವರ ಮೇಲೆ ಕೆಂಡವಾದ ಸಿಎಂ, ‘ವಿಶ್ವಾಸ ಇಲ್ಲದಿದ್ದರೆ ತೆಗೆದುಕೊಂಡು ಹೋಗ್ರಿ’ ಎಂದಿದ್ದಾರೆ. ಮತ್ತೂ ಪಂಚ್ ನೀಡಿದ ಸಿಎಂ ‘ಅತಿ ಬುದ್ಧಿವಂತರ ಜೊತೆಗೆ ಕೆಲಸ ಮಾಡೋದು ಕಷ್ಟ’ ಎಂದು ಮಾತಿನ‌ ಚಾಟಿ ನೀಡಿದರು. ಮಲ್ಲಗೆ ಅಲ್ಲಿಂದ ಕಾಲ್ಕಿತ್ತ ಸಂಸದ ಸಿಂಹ ಪತ್ರಿಕಾ ಗೋಷ್ಠಿ ಮುಗಿಯುತ್ತಿದ್ದಂತೆ ಮತ್ತೆ ಬಂದು ಮುಖ್ಯಮಂತ್ರಿಗಳೊಂದಿಗೆ ದಾಖಲೆ ಸಲ್ಲಿಸುವ ಭಂಗಿಯಲ್ಲಿ ಪೊಟೋ ತೆಗೆಸಿಕೊಂಡಿದ್ದಾರೆ. ಜೊತೆಗೆ ಈ ಸಂದರ್ಭ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಕೂಡ ಹಾಜರಿದ್ದರು.

error: Content is protected !!