fbpx

ಸಾಹಸ ಸಿಂಹದ ಘರ್ಜನೆಯ ಸ್ಮರಣೆ ಅಜರಾಮರ!

ಸ್ಯಾಂಡಲ್ ವುಡ್ಡಿನಲ್ಲಿ ಅಚ್ಚಳಿಯದ ‘ದಾದಾ’ಗಿರಿಯ ದಿನಗಳ ನೆನಪು…

ಸ್ಯಾಂಡಲ್ ವುಡ್ಡನ ಸಾಹಸಸಿಂಹ ಎಂದೇ ಹೆಸರುವಾಸಿಯಾಗಿದ್ದ ಮೇರು ನಟ ಡಾ.ವಿಷ್ಣುವರ್ಧನ್ ಅವರದು ಇಂದು 70ನೇ ವರ್ಷದ ಜನ್ಮ ದಿನ. ಅವರು ಇಹಲೋಕ ತ್ಯಜಿಸಿ ವರ್ಷಗಳು ಕಳೆದರೂ, ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಅವರು ಇನ್ನೂ ಜೀವಂತ.
ಡಾ. ವಿಷ್ಣುವರ್ಧನ್ ಅವರ ಹಿಂದಿನ ಹೆಸರು ಸಂಪತ್ ಕುಮಾರ್ ಎಂದಾಗಿತ್ತು. ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಾಗರಹಾವು ಸಿನಿಮಾದಲ್ಲಿ ಅವರಿಗೆ ನಾಯಕ ನಟನ ಪಾತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದರು. ಆಗ ಅವರಿಗೆ ಸಂಪತ್ ಕುಮಾರ್ ಹೆಸರಿನ ಬದಲು ವಿಷ್ಣುವರ್ಧನ್ ಎಂಬ ಹೆಸರು ಕೊಟ್ಟರು. ಅಲ್ಲಿಂದ ಶುರುವಾಗಿತ್ತು ಒಬ್ಬ ಅಮೋಘ‌ ನಟನ  ಅಭೂತಪೂರ್ವ ಸಿನಿ ಜರ್ನಿ…

ನಿರ್ದೇಶಕ ರಾಜೇಂದ್ರ ಬಾಬು ಅವರ‌ ನಿರ್ದೇಶನದಲ್ಲಿ ವಿಷ್ಣು ದಾದಾ ಹೀರೋ ಆಗಿ ನಟಿಸಿ, ಸುಪ್ರಸಿದ್ಧರಾದರು. ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು.ಒಟ್ಟು 23 ಸೂಪರ್ ಡೂಪರ್ ಸಿನಿಮಾಗಳನ್ನು ನಿರಂತರವಾಗಿ‌ ನೀಡಿದ ಪ್ರತಿಭಾವಂತ ನಟ ವಿಷ್ಣು ಎಂಬ ದಂತಕತೆ. 1980ರ ದಶಕದಲ್ಲಿ ಶಂಕರ್ ನಾಗ್ ಅವರ‌ ಮಹತ್ವಾಕಾಂಶಿ ಯೋಜನೆ ‘ಮಾಲ್ಗುಡಿ ಡೇಸ್’ ಅಲ್ಲಿ ಕೂಡ ನಟಿಸಿ, ಟಿವಿಯ ಕಿರುತೆರೆಯಲ್ಲೂ ಜನರ ಮನ ಗೆದ್ದರು.

ಅಪ್ರಥಮ ನಟ, ಹೃದಯವಂತ ಡಾ. ವಿಷ್ಣುವರ್ಧನ್ ಅವರು ನೀಡಿದ್ದು, ಅವಿಸ್ಮರಣೀಯವೆನ್ನುವಂತಹ 220 ಸಿನಿಮಾಗಳನ್ನು. ಹಿಂದಿ, ತಮಿಳು, ತೆಲಗು, ಮಲಯಾಳಂ, ಕನ್ನಡ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಜನಮನ ಸೆಳೆದಿದ್ದರು.

ಅವರು ಕನ್ನಡ ಸಿನಿ ಜಗತ್ತಿನಲ್ಲಿ ಸಾಹಸ ಸಿಂಹ ಆಗಿ‌ ಮಾಡಿದ ಘರ್ಜನೆ‌ ಇಂದಿಗೂ ಸ್ಮರಣೀಯ. ಅವರು ಅಭಿಮಾನಿಗಳ ಪಾಲಿಗೆ ಪ್ರೀತಿಯ ವಿಷ್ಣುದಾದಾ‌ ಆಗಿ ಅವರ‌ ದಾದಾಗಿರಿಯ ದಿನಗಳು ಸಿನಿ ಕ್ಷೇತ್ರದಲ್ಲಿ ಅಮರ ಅಜರಾಮರ…

error: Content is protected !!