ಸಾಲು ಸಾಲು ರಜೆಗೆ ಊರಿನತ್ತ ಹೊರಟ ಜನ!

ಬೆಂಗಳೂರು: ಎರಡನೇ ಶನಿವಾರದಿಂದ ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಜನ ಊರಿಗೆ ಹೊರಟಿದ್ದಾರೆ‌.

ಆದರೆ, ಸರ್ಕಾರಿ ಬಸ್ ಗಳಿಲ್ಲದೆ ಜನ ಪರದಾಡುವ ಪರಿಸ್ಥಿತಿ ಎದುರಾಗಿದೆ. ಖಾಸಗಿ ಬಸ್ ಗಳಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣ ಕೇಳಲಾಗ್ತಿದೆ. ಬೆಂಗಳೂರಿನ ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ದೂರದ ಊರಿಗೆ ತೆರಳುವವರು ಬಸ್ ಗಾಗಿ ಕಾಯುವಂತಾಗಿದೆ.

ಏಪ್ರಿಲ್ 10 ಎರಡನೇ ಶನಿವಾರ, ಏಪ್ರಿಲ್ 11 ಭಾನುವಾರ, ಏಪ್ರಿಲ್ 13 ಯುಗಾದಿ ಹಬ್ಬಕ್ಕೆ ರಜೆ ಇರುವುದರಿಂದ ಜನ ಊರಿಗೆ ಹೊರಟಿದ್ದಾರೆ. ಇದೇ ವೇಳೆ ಸಾರಿಗೆ ಮುಷ್ಕರ ಮುಂದುವರೆದ ಹಿನ್ನೆಲೆಯಲ್ಲಿ ಬಸ್ ಗಾಗಿ ಕಾಯುವಂತಾಗಿದೆ.

error: Content is protected !!