ಸಾಲದ ಕಂತು ಕಟ್ಟುವಂತೆ ಧರ್ಮಸ್ಥಳ ಸಂಘದಿಂದ ಒತ್ತಡ

ಕೊಡಗು: ಧರ್ಮಸ್ಥಳ ಸಂಘದಿಂದ (ಎಸ್.ಕೆ.ಡಿ.ಆರ್.ಡಿ.ಪಿ) 25ನೇ ತಾರೀಕಿನಂದು ಬೆಳಿಗ್ಗೆ 7 ರಿಂದ 9 ಗಂಟೆ ತನಕ ಹಣ ಸಂಗ್ರಹಣಾ ಕೇಂದ್ರದಲ್ಲಿ ಸಾಲದ ಕಂತು ಕಟ್ಟುವಂತೆ ಒತ್ತಡ ಎಲ್ಲಾ ಮಹಿಳೆಯರಿಗೆ ಸಂದೇಶವನ್ನು ವಾಟ್ಸಪ್ ಮೂಲಕ ಕಳಿಸಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ.
ರಾಜ್ಯ ಸರ್ಕಾರ ಮೂರು ತಿಂಗಳು ಸಂಘಗಳಿಂದ ಮತ್ತು ಸಹಕಾರ ಬ್ಯಾಂಕ್ ಸೇರಿದಂತೆ ಇನ್ನಿತರ ಲೇವಾದೇವಿಯವರಿಗೆ ಸಾಲ ಮರುಪಾವತಿ ಮಾಡಿಸಿಕೊಳ್ಳಲು ಅವಧಿಯನ್ನು ವಿಸ್ತರಣೆ ಮಾಡಿದ್ದು, ಧರ್ಮಸ್ಥಳ ಸಂಘದವರು ಮಾತ್ರ ಹಣ ಕಟ್ಟುವಂತೆ ಒತ್ತಾಯ ಮಾಡುವುದು ಸೂಕ್ತ ಕ್ರಮವಲ್ಲ. ಈ ಸಂಬಂಧ ಮಾನ್ಯ ಜಿಲ್ಲಾ ಅಧಿಕಾರಿಗಳು ಧರ್ಮಸ್ಥಳ ಸಂಘದವರಿಗೆ ಎಚ್ಚರಿಕೆ ನೀಡಿ, ಸಾಲ ಮರುಪಾವತಿಗೆ ಮೂರು ತಿಂಗಳು ಅವಕಾಶ ನೀಡುವಂತೆ ಆದೇಶ ನೀಡಬೇಕೆಂದು ಕರ್ನಾಟಕ ಕಾವಲುಪಡೆ ಮನವಿ ಮಾಡಿಕೊಂಡಿದೆ.