ಸಾಮಾಜಿಕ ಅಂತರ ಕಾಯಲು ಯೋಗ್ಯವಾದ ಡ್ರಂಸೀಡರ್

ವರದಿ: ಗಿರಿಧರ್ ಕೊಂಪುಳಿರ
ಕೊಡಗು: ಜಿಲ್ಲೆಯಲ್ಲಿ ಉತ್ತಮಮಳೆಯಾಗುತ್ತಿದ್ದು ಕೃಷಿಚಟುವಟಿಕೆ ಚುರುಕುಗೊಂಡಿರುವ ನಡುವೆ ಕೊರೊನಾ ಮಹಾಮಾರಿಗೆ ಹೆದರಿ ಭತ್ತ ನಾಟಿ ಮಾಡಲು ಕೆಲಸದವರ ಕೊರತೆ ಉಂಟಾಗಿದೆ.
ಈ ಸಮಸ್ಯೆ ನೀಗಿಸಲು ರೈತರು ಡ್ರಂಸೀಡರ್ ಮೂರೆ ಹೋಗುತ್ತಿದ್ದರೆ. ಭತ್ತವನ್ನು ಮೂಳಕೆ ಬರಿಸಿ ಈ ಯಂತ್ರದ ಮೂಲಕ ಬಿತ್ತನೆ ಮಾಡುವುದು ಈ ಪದ್ದತಿಯಾಗಿದೆ, ಗ್ರಾಮೀಣ ಪ್ರದೇಶದಲ್ಲಿ ಈ ಪದ್ದತಿ ಜನಪ್ರಿಯಗೊಳ್ಳುತ್ತಿದೆ.
ಕೊರೊನಾ ಲಗ್ಗೆ ಇಡುವ ಮೊದಲು ಜಿಲ್ಲೆಯಲ್ಲಿ ಕೂಡುನಾಟಿ ಮಾಡುವ ಪದ್ದತಿಯನ್ನು ಪೂರ್ವಜರ ಕಾಲದಿಂದ ನಡೆಸಿಕೊಂಡು ಬರಲಾಗಿದ್ದು ಆದರೆ ಇದೀಗ ಪದ್ದತಿಯೇ ಪಾಲಿಸದಂತಾಗಿದೆ.

ಡ್ರಂಸೀಡರ್ ಬಿತ್ತನೆಗೆ 24 ಗಂಟೆ ನೆನಸಿಟ್ಟು ಬಳಿಕ ಒಂದು ಚೀಲದಲ್ಲಿ ಮೊಳಕೆಯೊಡಯಲು ಬಿಡಲಾಗುತ್ತದೆ. ಈ ಎರಡು ಏಕರೆ ಭತ್ತದ ಗದ್ದೆಗೆ 50 ಕೆಜಿ ಭತ್ತ ಬೇಕಾಗುತ್ತಿತ್ತು, ಆದರೆ ಡ್ರಂಸೀಡರ್ ಮೂಲಕ 20 ಕೆಜಿ ಭತ್ತದಲ್ಲಿ ಬಿತ್ತನೆ ಮಾಡಬಹುದಾಗಿದೆ ಎಂದು ಭತ್ತ ಕೃಷಿ ಮಾಡುವ ರೈತರು ಅಭಿಪ್ರಾಯ ಪಟ್ಟಿದ್ದಾರೆ. ಸಂಪೂರ್ಣ ನಾಟಿ ಕೆಲಸಕ್ಕೆ 5 ರಿಂದ 6 ಸಾವಿರ ಉಳಿತಾಯ ಮಾಡಿದಂತಾಗಿದೆ..
ವರದಿ: ಗಿರಿಧರ್ ಕೊಂಪುಳಿರ