fbpx

ಸಾಜ್ ಜಂಗ್ ಸೆರೆ ಹಿಡಿದ ಕರಿ ಚಿರತೆ…

ಇದು ಸೃಜನಶೀಲ ಛಾಯಾಗ್ರಾಹಕನ ಕ್ಯಾಮರಾ ಕಮಾಲ್!

ಹೊಸ ಅಂಕಣ ಇನ್ನು ಮುಂದೆ ನಿಮ್ಮ ಮುಂದೆ ಬರಲಿದೆ. ‘ವನ್ಯ-ಅನನ್ಯ‘ ಗಿರಿಧರ್ ಕೊಂಪುಳಿರ‌ ಅವರಿಂದ

ಅಂಕಣ: ‘ವನ್ಯ-ಅನನ್ಯ

ಗಿರಿಧರ್ ಕೊಂಪುಳಿರ, ಪತ್ರಕರ್ತರು

ಸಾಜ್ ಜಂಗ್ ಅಂತರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕರಾಗಿ ದೊಡ್ಡ ಬೆಕ್ಕುಗಳನ್ನು ತಮ್ಮ ನಿಕಾನ್ ಕ್ಯಾಮರಾದಲ್ಲಿ ಸೆರೆ ಹಿಡಿಯುವುದರಲ್ಲಿ ನಿಸ್ಸೀಮರು. ಇವರು 5 ವರ್ಷಗಳ ಅವಿರತ ಶ್ರಮದಿಂದ ಕೊಡಗು-ಮೈಸೂರು ಗಡಿಯಲ್ಲಿರುವ ನಾಗರಹೊಳೆ ಅಭಯಾರಣ್ಯದಲ್ಲಿ ಕಡೆಗೂ ಕರಿ ಚಿರತೆಯ ಚಲನವಲನದ ಪೊಟೋ ಕ್ಲಿಕ್ಕಿಸಿರುವುದು ಇದೀಗ ಸಾಮಾಜಿಕ ತಾಣದಲ್ಲಿ ಸಕತ್ ವೈರಲ್ ಆಗಿದೆ. ಮೊದಲಿನಿಂದಲೇ ದೊಡ್ಡ ಬೆಕ್ಕು (ಬಿಗ್ ಕ್ಯಾಟ್)ಗಳಾದ ಚಿರತೆ, ಹುಲಿಗಳ ಬಗ್ಗೆ ಪೊಟೋ ಕ್ಲಿಕ್ಕಿಸಿ ಹೆಸರು ಮಾಡಿರುವ ಇರುವ ನಿತ್ಯ ಹರಿದ್ವರ್ಣ ಕಾಡಿನಲ್ಲಿ ಕರಿಚಿರತೆ ಇರುವುದನ್ನು ತಿಳಿದು ಅದನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ

ಸಾಜ್ ಜಂಗ್ ಅವರು ಅರಣ್ಯದಲ್ಲಿ ವನ್ಯ ಜೀವಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಸಾಫಾರಿ ಮಾಡುತ್ತಿರುವ ಸಂದರ್ಭ

ಸಾಜ್ ರವರ ತಂದೆ,ಸಾದ್ ಬಿನ್ ಜಂಗ್ ಸಹ ವನ್ಯ ಜೀವಿ ಪ್ರೇಮಿ ತಮ್ಮ ಒಡೆತನದಲ್ಲಿ ಇದ್ದ ಅರಣ್ಯಗಳ ರಕ್ಷಣೆ ಮತ್ತ ಪರಿಸರಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.ಇವರ ಮುತ್ತಾತ ಹೈದರಾಬಾದಿನ ಪೈಗಾ ನವಾಬಿನ ಅರಸ ನವಾಬ್ ಇಫ್ತಿಕಾರ್ ಅಲಿ ಖಾನ್ ಸಹಾ ಹೈದರಬಾದಿನ ಹುಲಿ ಮತ್ತು ಚಿರತೆಗಳ ಆವಾಸ ತಾಣಗಳಲ್ಲಿ ಕಾಡುಕೋಣ ಮತ್ತು ಕಾಟಿ(ಬೈಸನ್) ಸಂರಕ್ಷಣೆಯಲ್ಲಿ ಪಣತೊಟ್ಟಿದ್ದರು.ಇಂದಿಗೂ ಭಾರತ ಮತ್ತು ಆಫ್ರಿಕಾದಲ್ಲಿ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿದ್ದಾರೆ.ಆಫ್ರಿಕಾದನಗೂರಾಂಗೋರೂ ಮತ್ತು ಸೆರೆಂಗೆಟಿಯಲ್ಲಿ ಎರಡು ಪ್ರವಾಸೋದ್ಯಮದ ನಿಟ್ಟಿನಲ್ಲಿ ಎರಡು ಸಫಾರಿ ಕ್ಯಾಂಪ್ ಗಳು ಈ ರಾಜಮನಗತನದ ಕುಟುಂಬ ನಿರ್ವಹಿಸುತ್ತಿದೆ.ಭಾರತದಲ್ಲಿ “ದಿ ಬಫರ್ ರೆಸಲ್ಯೂಷನ್ ಟ್ರಸ್ಟ್ (BCRTI) ನಡೆಸುತ್ತಿದ್ದು ಮಾನವ ಮತ್ತು ವನ್ಯಜೀವಿ ಸಂಘರ್ಷ ಮತ್ತು ವಾರ್ಷಿಕವಾಗಿ ಪರಿಸರಸ್ನೇಹಿ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದಾರೆ.ವಿಶೇಷ ಎಂದರೆ ಇವರ ರಾಜ ಲಾಂಛನದಲ್ಲೂ ಹುಲಿಗಳು ಇರುವುದು ಕಾಣಬಹುದು.ರಾಜ ವಂಶಸ್ಥ ಸಾಜ್: ಸಾಜ್ ಜಂಗ್ ಒಬ್ಬ ರಾಜ ವಂಶಸ್ಥರು. ಇವರು ಮೂಲತಃ ಬೂಪಾಲಿನ ಪಡೌಡಿ ಮತ್ತು ಹೈದರಾಬಾದಿನ ಪೈಗಾ ರಾಜರ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ವಂಶಸ್ಥರಿಗೆ ರಾಜರ ಆಳ್ವಿಕೆಯ ಕಾಲದಿಂದಲೂ ಅರಣ್ಯದ ನಂಟಿದೆ. ಇವರ ವಂಶಸ್ತರಿಗೆ ಪರಿಸರದೊಂದಿಗೆ ಅವಿನಾಭಾವ ಸಂಬಂಧ ಎಷ್ಟಿತ್ತೆಂದರೆ ಮೂರು ಶತಮಾನಗಳ ಕಾಲ ಬೂಪಾಲಿನ ಬೇಗಂ ಆಡಳಿತದಲ್ಲಿ ಬೂಪಾಲಿನ ಹುಲಿ ಕಾಡುಗಳು ಇವರ ಅಧೀನಲ್ಲಿತ್ತು ಎಂದರೆ ನಂಬುತ್ತೀರಾ? ನಂಬಲೇಬೇಕು‌. ಇದೀಗ ಕಾಡುಗಳು ಭಾರತ ಸರ್ಕಾರದ ವಶವಾಗಿದೆ.


ಶ್ರಮ ಮತ್ತು ತಾಳ್ಮೆ: ಕಬಿನಿಯಲ್ಲಿ ತನ್ನದೇ ರೆಸಾಟ್೯ ಹೊಂದಿರುವ ಸಾಜ್ ಜಂಗ್ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕಾಡಿನಲ್ಲೇ ಅಡ್ಡಾಡಿ ಕರಿ ಚಿರತೆ ಮರದಲ್ಲಿ ವಾಸ, ವಿಶ್ರಮಿಸುವುದು,ಅಡ್ಡಾಡುವುದು, ಬೇಟೆ ಹೀಗೆ ಹತ್ತು ಹಲವು ಬಂಗಿಯಿರುವ ಏಕೈಕ ಮತ್ತು ಅಪರೂಪದ ಅಳಿವಿನಂಚಿನಲ್ಲಿರುವ ಗಂಡು ಕರಿಚಿರತೆಯ ಪೊಟೋ ಕ್ಲಿಕ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರೇ ಹೇಳುವಂತೆ “ನನ್ನ ಈ ಶ್ರಮ ಹುಲ್ಲಿನ ರಾಶಿಯಲ್ಲಿ ಸೂಜಿಯನ್ನು ಹುಡುಕಿದಂತೆ” ಎಂದು ತನ್ನ ಬ್ಲಾಗ್‌ ನಲ್ಲಿ ಬರೆದುಕೊಂಡಿದ್ದಾರೆ‌ 31 ವಯೋಮಾನದ ಸಾಜ್ ಜಂಗ್.

ಕ್ರಿಕೆಟ್ ನಂಟು: ಸಾಜ್ ಕುಟುಂಬಕ್ಕೆ ಕ್ರಿಕೆಟಿನ ನಂಟು ಅಪಾರವಾಗಿದೆ.ಇವರ ಮುತ್ತಾತ ನವಾಬ್ ಇಫ್ತಿಕರ್ ಅಲಿ ಖಾನ್ ಭಾರತ ತಂಡದ ಪರ ಇಂಗ್ಲಂಡ್ ವಿರುದ್ದ ಬಾಡಿಲೈನರ್ಸ್ ಸೀರಿಸ್ ನಲ್ಲಿ ಆಡಿದ್ದರು ಬಳಿಕ ಇವರ ತಂದೆ ಸಾದ್ ಬಿನ್ ಜಂಗ್ ಸಹಾ ಭಾರತದ ಆಡಿದರೆ ಬಳಿಕ ಮುಂದಿನ ತಲೆಮಾರಿನ ಭಾರತ ತಂಡದ ಮಾಜಿ ನಾಯಕ ಸಹಾ ಕ್ರಿಕೆಟಿನಲ್ಲಿ ಹೆಸರು ಮಾಡಿರುವುದು ಸ್ಮರಿಸಬಹುದು.

ನಿಕಾನ್ ಕ್ಯಾಮರಾ ಸಂಸ್ಥೆಯ ಅಂಬಾಸಿಡರ್ ಕೂಡ ಆಗಿರು ಸಾಜ್ ಜಂಗ್, NGC ನಲ್ಲಿ ವನ್ಯಜೀವಿ ಛಾಯಾಗ್ರಹಣ ಕುರಿತ ಅದರಲ್ಲೂ ಕರಿ ಚಿರತೆ ಕುರಿತ ಸಂಚಿಕೆಯನ್ನೂ ಮಾಡಿದ್ದಾರೆ.

ವಂಶ ಪಾರಂಪರಿಕವಾಗಿ ವನ್ಯಜೀವಿ ಮತ್ತು ಅರಣ್ಯ ಸಂಕ್ಷಣೆಯಲ್ಲಿ ತೊಡಗಿಕೊಂಡಿದ್ದು,ಅದೇ ಕುಟುಂಬದ ಕುಡಿ ಸಾಜ್ ಜಂಗ್ ದಕ್ಷಿಣ ಭಾರತಕ್ಕೆ ಬಂದು ಕಬಿನಿಯಲ್ಲಿ ಬೈಸನ್ ಹೆಸರಿನ ಪರಿಸರ ಸ್ನೇಹಿ ರೆಸಾರ್ಟ್ ಜೊತೆಗೆ ಅಪರೂಪದ ಕರಿಚಿರತೆ ಹುಡುಕಿ ಅದರ ಛಾಯಾಚಿತ್ರ ಸೆರೆ ಹಿಡಿಯುವ ಮೂಲಕ ನಾಗರಹೊಳೆಯಲ್ಲೂ ಕರಿಚಿರತೆ ಇರುವುದನ್ನು ಸಾಕ್ಷಿಗೊಳಿರುವುದು ಇವರ ವನ್ಯಜೀವಿ ಮೇಲೆ ಇರವ ಕಾಳಜಿಗೆ ಇರುವ ಕೈಗನ್ನಡಿ.

ಗಿರಿಧರ್ ಕೊಂಪುಳಿರ, ಪತ್ರಕರ್ತರು
error: Content is protected !!