fbpx

ಸಾಂಗವಾಗಿ ನಡೆದ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆ

ಕುಶಾಲನಗರ ಪಟ್ಟಣ ಪಂಚಾಯಿತಿ ಮುಂದುವರಿದ ಸಾಮಾನ್ಯ ಸಭೆಯು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈ ವರ್ಧನ್ ಅಧ್ಯಕ್ಷತೆಯಲ್ಲಿ ನಡೆಯಿತು ನಗರದ ಮಾರುಕಟ್ಟೆ ಆರ್ ಎಂ ಸಿ ಮೈದಾನಕ್ಕೆ ಸ್ಥಳಾಂತರ ವಾದ್ದರಿಂದ ಪ.ಪಂ.ಗೆ ವಾರ್ಷಿಕ 65 ರಿಂದ 70 ಲಕ್ಷ ರೂ ನಷ್ಟನಾಗುತ್ತಿದೆ ಎಂದು ಚರ್ಚಿಸಲಾಯಿತು.

220 ಕೆ.ವಿ ವಿದ್ಯತ್ ತಂತಿ ಹಾದು ಹೋಗಿರುವುದರಿಂದ ಮಾರುಕಟ್ಟೆ ನಡೆಸಲು ಅನಾನುಕೂಲವಾಗಲಿದೆ ಪುನಾರಂಭಿಸಲು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಲಿದೆ ಎಂದು ಚರ್ಚಿಸಲಾಯಿತು ಸದಸ್ಯ ಅಮೃತ್ ರಾಜ್ ಮಾತನಾಡಿ ಮಾರುಕಟ್ಟೆ ನಿರ್ಮಾಣ ಮತ್ತು ನವೀಕರಣಕ್ಕೆ ಆಗಿರುವ ಖರ್ಚಿನ ಬಗ್ಗೆ ಯಾವುದೇ ದಾಖಲೆಗಳಿಲ್ಲದಿರುವುದರ ಬಗ್ಗೆ ಆಕ್ರೋಷ ವ್ಯಕ್ತ ಪಡಿಸಿದರು ಸದಸ್ಯ ಪ್ರಮೋದ್ ಮುತ್ತಪ್ಪ ಮಾತನಾಡಿ ಆಡಳಿತ ಪಕ್ಷದ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿದರು. ಸದಸ್ಯ ಆನಂದ್ ಕುಮಾರ್ ಮಾತನಾಡಿ ಪ.ಪಂ.ನಿಂದ ಪರವಾನಗಿ ಪಡೆಯದೆ ಕಟ್ಟಡಗಳು ನಿರ್ಮಾಣ ವಾಗುತ್ತಿವೆ ಇಂತಹ ಅನುಮತಿ ಇಲ್ಲದೆ ನಿರ್ಮಾಣವಾಗಿರುವ ಕಟ್ಟಡಗಳಲ್ಲಿ ವ್ಯಾಪಾರ ನಡಸಲು ಪರವಾನಗಿ ನೀಡಬಾರದು ಎಂದು ಸಭೆಯ ಗಮನಕ್ಕೆ ತಂದರು ಸರ್ವ ಸದಸ್ಯರು ಆನಂದ್ ರವರು ಪ್ರಸ್ತಾಪಿಸಿದ ವಿಷಯಕ್ಕೆ ಸರ್ವ ಸದಸ್ಯರು ಬೆಂಬಲ ವ್ಯಕ್ತ ಪಡಿಸಿ ಅಗತ್ಯ ಕ್ರಮ ಕೈ ಗೊಳ್ಳುವಂತೆ ತೀರ್ಮಾನಿಸಲಾಯಿತು.
ಪಟ್ಟಣದ ಹೆದ್ದಾರಿಯ ಇಕ್ಕೆಲಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಸೆಟ್ ಬ್ಯಾಕ್ ಬಿಡುವುದರ ಬಗ್ಗೆ ಮಾಹಿತಿ ಕೊರತೆ ಇದೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವಂತೆ ತಿಳಿಸಿದರು.ಸದಸ್ಯೆ ಜಯಲಕ್ಷ್ಮಮ್ಮ ಮಾತನಾಡಿ ನಗರದ 13 ಮತ್ತು 14 ನೇ ವಾರ್ಡಿನ ಮಕ್ಕಳಿಗೆ ಒಂದು ಅಂಗನವಾಡಿ ಇದೆ ಈ ಅಂಗನವಾಡಿ ಕಟ್ಟಡವು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ವಸತಿ ಗೃಹ ದ ಕಿಷ್ಕಿಂದ ಜಾಗದಲ್ಲಿ ಸುಮಾರು 30 ಚಿಣ್ಣರು ಕುಳಿತು ಕೊಳ್ಳುತ್ತಿದ್ದಾರೆ ಸ್ಥಳದ ಕೊರತೆಯಿಂದ ಪರದೆ ಹಾಕಿ ಹೊರಗೆ ಕೂರಿಸಲಾಗುತ್ತಿದೆ ಮಕ್ಕಳಿಗೆ ಯಾವುದೇ ರಕ್ಷಣೆ ಇಲ್ಲ ಆದಷ್ಟು ಬೇಗ ಬಲಮುರಿ ದೇವಸ್ಥಾನದ ಬಳಿ ಜಾಗವಿದೆ‌ ಆ ಜಾಗದಲ್ಲಿ ಅಂಗನವಾಡಿ ನಿರ್ಮಾಣ ಮಾಡಿಕ್ಕೊಡುವಂತೆ ಒತ್ತಾಯಿಸಿದರು.ಇವರ ಒತ್ತಾಯಕ್ಕೆ ಮುಖ್ಯಾಧಿಕಾರಿ ಕೃಷ್ಣಕುಮಾರ್ ಅಂಗನವಾಡಿ ನಿರ್ಮಾಣ ಮಾಡಲು ಯೋಜನೆಗಳಿವೆ ಆದರೆ ಸ್ಥಳದ ಕೊರತೆ ಇದೆ ಎಂದಾಗ ಸದಸ್ಯೆ ಜಯಲಕ್ಷ್ಮಮ್ಮ ಬಲಮುರಿ ದೇವಸ್ಥಾನದ ಬಳಿ ಜಾಗ ಗುರುತಿಸಿ ಆದಷ್ಟು ಬೇಗ ನಿರ್ಮಾಣ ಮಾಡಿ ಮಕ್ಕಳಿಗೆ ಅನುಕೂಲ ಮಾಡಿಕ್ಕೊಡುವಂತೆ ತಿಳಿಸಿದರು.ಬಲಮುರಿ ದೇವಸ್ಥಾನ ದ ಮುಂಭಾಗದಲ್ಲಿರುವ ಕಲ್ಲು ಗಣಿಗಾರಿಕೆ ಮಾಡಿ ಪಾತಾಳವಾಗಿರುವ ಜಾಗಕ್ಕೆ ಮಣ್ಣು ತುಂಬಿಸಿ ತಹಶೀಲ್ದಾರರಿಗೆ ಪತ್ರ ಬರೆದು ಬೇಲಿ ಹಾಕಿಸಿ ಪ.ಪಂ.ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಕಾವೇರಿ ನದಿಗೆ ಊರಿನ ಎಲ್ಲಾ ಚರಂಡಿಗಳ ಮೂಲಕ ತ್ಯಾಜ್ಯ ನೀರನ್ನು ಬಿಡಲಾಗುತ್ತಿದೆ ಒಳಚಂರಂಡಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿ ಸರ್ವ ಸದಸ್ಯರು ಚರ್ಚೆ ನಡೆಸಿದರು.ಹಿರಿಯ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಿ ನಿರ್ದೇಶನ ನೀಡುವಂತೆ ಸದಸ್ಯ ಆನಂದ್ ಕುಮಾರ್ ಸಭೆಯ ಗಮನಕ್ಕೆ ತಂದರು.

ಸದಸ್ಯೆ ಪುಟ್ಟಲಕ್ಷ್ಮಿಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡ ದ ಫಲಾನುಭವಿಗಳಿಗೆ ಇರುವ ಅನುಧಾನವನ್ನು ಸಮರ್ಪಕವಾಗಿ ಆದಷ್ಟು ಶೀಘ್ರ ಅಗತ್ಯ ಕ್ರಮ ಒದಗಿಸುವಂತೆ ತಿಳಿಸಿದರು.
ನಾಮನರ್ದೇಶಿತ ಸದಸ್ಯ ನಾರಾಯಣ್ ಮಾತನಾಡಿ ಸಭೆಯಲ್ಲಿ ಅನಗತ್ಯವಿಷಯಗಳ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ ಅವರು ನಗರದ ಅಭಿವೃದ್ಧಿ ಯ ಬಗ್ಗೆ ಚರ್ಚಿಸುವಂತೆ ಆಗ್ರಹಿಸಿ ಸದಸ್ಯರಿಗೆ ಚರ್ಚೆಯ ಬಗ್ಗೆ ತರಬೇತಿ ನೀಡಲು ತಜ್ಞರನ್ನು ನೇಮಿಸುವಂತೆ ತಿಳಿಸಿದರು.

ಮತ್ತೇ ಮುಂದೂಡಿದ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ:

ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ವಿಷಯ ಪ್ರಸ್ಥಾಪ ವಾಗುತ್ತಿದ್ದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸ್ಥಾಯಿ ಸಮಿತಿ ಆಯ್ಕೆಯಲ್ಲಿ ಮತ ಚಲಾಯಿಸುವ ಹಕ್ಕು ಇದೆ ಎಂದು ಅಧ್ಯಕ್ಷರು ತಿಳಿಸಿದಾಗ ಸದಸ್ಯ ಪ್ರಮೋದ್ ಮುತ್ತಪ್ಪ ಕಳೆದ ಬಾರಿ ಅಧ್ಯಕ್ಷರ ಚುನಾವಣೆಯಲ್ಲಿ ಸದಸ್ಯರ ಹಕ್ಕು ಚ್ಯುತಿಯಾಗಿದೆ ಆದ್ದರಿಂದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಮತದಾನದ ಹಕ್ಕು ಇಲ್ಲ ಎಂದು ವಾದಿಸಿದರು ಅಧ್ಯಕ್ಷರು ಸಂಬಂಧಿಸಿದ ಮೇಲಾಧಿಕಾರಿಗಳಿಂದ ಚುನಾವಣೆ ಪ್ರಕ್ರಿಯೆಯ ಬಗ್ಗೆ ನಿರ್ದೇಶನ ಪಡೆದು ನಂತರ ಚುನಾವಣೆ ನಡೆಸುವುದಾಗಿ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಸದಸ್ಯರುಗಳಾದ ಜಯಲಕ್ಷ್ಮಿ.ರೇಣುಕಾ.ಶೈಲಾ.ಶಂಭುಲಿಂಗಪ್ಪ.ಕೆ.ಜಿ.ಮನು.‌ರೂಪಾಉಮಾಶಂಕರ್.ಶೇಕ್ ಕಲೀಂ.ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.ಯಿತಿ ಅಧ್ಯಕ್ಷ ಜೈ ವರ್ಧನ್ ಅಧ್ಯಕ್ಷತೆಯಲ್ಲಿ ನಡೆಯಿತು ನಗರದ ಮಾರುಕಟ್ಟೆ ಆರ್ ಎಂ ಸಿ ಮೈದಾನಕ್ಕೆ ಸ್ಥಳಾಂತರ ವಾದ್ದರಿಂದ ಪ.ಪಂ.ಗೆ ವಾರ್ಷಿಕ 65 ರಿಂದ 70 ಲಕ್ಷ ರೂ ನಷ್ಟನಾಗುತ್ತಿದೆ ಎಂದು ಚರ್ಚಿಸಲಾಯಿತು. 220 ಕೆ.ವಿ ವಿದ್ಯತ್ ತಂತಿ ಹಾದು ಹೋಗಿರುವುದರಿಂದ ಮಾರುಕಟ್ಟೆ ನಡೆಸಲು ಅನಾನುಕೂಲವಾಗಲಿದೆ ಪುನಾರಂಭಿಸಲು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಲಿದೆ ಎಂದು ಚರ್ಚಿಸಲಾಯಿತು ಸದಸ್ಯ ಅಮೃತ್ ರಾಜ್ ಮಾತನಾಡಿ ಮಾರುಕಟ್ಟೆ ನಿರ್ಮಾಣ ಮತ್ತು ನವೀಕರಣಕ್ಕೆ ಆಗಿರುವ ಖರ್ಚಿನ ಬಗ್ಗೆ ಯಾವುದೇ ದಾಖಲೆಗಳಿಲ್ಲದಿರುವುದರ ಬಗ್ಗೆ ಆಕ್ರೋಷ ವ್ಯಕ್ತ ಪಡಿಸಿದರು ಸದಸ್ಯ ಪ್ರಮೋದ್ ಮುತ್ತಪ್ಪ ಮಾತನಾಡಿ ಆಡಳಿತ ಪಕ್ಷದ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿದರು. ಸದಸ್ಯ ಆನಂದ್ ಕುಮಾರ್ ಮಾತನಾಡಿ ಪ.ಪಂ.ನಿಂದ ಪರವಾನಗಿ ಪಡೆಯದೆ ಕಟ್ಟಡಗಳು ನಿರ್ಮಾಣ ವಾಗುತ್ತಿವೆ ಇಂತಹ ಅನುಮತಿ ಇಲ್ಲದೆ ನಿರ್ಮಾಣವಾಗಿರುವ ಕಟ್ಟಡಗಳಲ್ಲಿ ವ್ಯಾಪಾರ ನಡಸಲು ಪರವಾನಗಿ ನೀಡಬಾರದು ಎಂದು ಸಭೆಯ ಗಮನಕ್ಕೆ ತಂದರು ಸರ್ವ ಸದಸ್ಯರು ಆನಂದ್ ರವರು ಪ್ರಸ್ತಾಪಿಸಿದ ವಿಷಯಕ್ಕೆ ಸರ್ವ ಸದಸ್ಯರು ಬೆಂಬಲ ವ್ಯಕ್ತ ಪಡಿಸಿ ಅಗತ್ಯ ಕ್ರಮ ಕೈ ಗೊಳ್ಳುವಂತೆ ತೀರ್ಮಾನಿಸಲಾಯಿತು.
ಪಟ್ಟಣದ ಹೆದ್ದಾರಿಯ ಇಕ್ಕೆಲಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಸೆಟ್ ಬ್ಯಾಕ್ ಬಿಡುವುದರ ಬಗ್ಗೆ ಮಾಹಿತಿ ಕೊರತೆ ಇದೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವಂತೆ ತಿಳಿಸಿದರು.ಸದಸ್ಯೆ ಜಯಲಕ್ಷ್ಮಮ್ಮ ಮಾತನಾಡಿ ನಗರದ 13 ಮತ್ತು 14 ನೇ ವಾರ್ಡಿನ ಮಕ್ಕಳಿಗೆ ಒಂದು ಅಂಗನವಾಡಿ ಇದೆ ಈ ಅಂಗನವಾಡಿ ಕಟ್ಟಡವು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ವಸತಿ ಗೃಹ ದ ಕಿಷ್ಕಿಂದ ಜಾಗದಲ್ಲಿ ಸುಮಾರು 30 ಚಿಣ್ಣರು ಕುಳಿತು ಕೊಳ್ಳುತ್ತಿದ್ದಾರೆ ಸ್ಥಳದ ಕೊರತೆಯಿಂದ ಪರದೆ ಹಾಕಿ ಹೊರಗೆ ಕೂರಿಸಲಾಗುತ್ತಿದೆ ಮಕ್ಕಳಿಗೆ ಯಾವುದೇ ರಕ್ಷಣೆ ಇಲ್ಲ ಆದಷ್ಟು ಬೇಗ ಬಲಮುರಿ ದೇವಸ್ಥಾನದ ಬಳಿ ಜಾಗವಿದೆ‌ ಆ ಜಾಗದಲ್ಲಿ ಅಂಗನವಾಡಿ ನಿರ್ಮಾಣ ಮಾಡಿಕ್ಕೊಡುವಂತೆ ಒತ್ತಾಯಿಸಿದರು.ಇವರ ಒತ್ತಾಯಕ್ಕೆ ಮುಖ್ಯಾಧಿಕಾರಿ ಕೃಷ್ಣಕುಮಾರ್ ಅಂಗನವಾಡಿ ನಿರ್ಮಾಣ ಮಾಡಲು ಯೋಜನೆಗಳಿವೆ ಆದರೆ ಸ್ಥಳದ ಕೊರತೆ ಇದೆ ಎಂದಾಗ ಸದಸ್ಯೆ ಜಯಲಕ್ಷ್ಮಮ್ಮ ಬಲಮುರಿ ದೇವಸ್ಥಾನದ ಬಳಿ ಜಾಗ ಗುರುತಿಸಿ ಆದಷ್ಟು ಬೇಗ ನಿರ್ಮಾಣ ಮಾಡಿ ಮಕ್ಕಳಿಗೆ ಅನುಕೂಲ ಮಾಡಿಕ್ಕೊಡುವಂತೆ ತಿಳಿಸಿದರು.ಬಲಮುರಿ ದೇವಸ್ಥಾನ ದ ಮುಂಭಾಗದಲ್ಲಿರುವ ಕಲ್ಲು ಗಣಿಗಾರಿಕೆ ಮಾಡಿ ಪಾತಾಳವಾಗಿರುವ ಜಾಗಕ್ಕೆ ಮಣ್ಣು ತುಂಬಿಸಿ ತಹಶೀಲ್ದಾರರಿಗೆ ಪತ್ರ ಬರೆದು ಬೇಲಿ ಹಾಕಿಸಿ ಪ.ಪಂ.ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಕಾವೇರಿ ನದಿಗೆ ಊರಿನ ಎಲ್ಲಾ ಚರಂಡಿಗಳ ಮೂಲಕ ತ್ಯಾಜ್ಯ ನೀರನ್ನು ಬಿಡಲಾಗುತ್ತಿದೆ ಒಳಚಂರಂಡಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿ ಸರ್ವ ಸದಸ್ಯರು ಚರ್ಚೆ ನಡೆಸಿದರು.ಹಿರಿಯ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಿ ನಿರ್ದೇಶನ ನೀಡುವಂತೆ ಸದಸ್ಯ ಆನಂದ್ ಕುಮಾರ್ ಸಭೆಯ ಗಮನಕ್ಕೆ ತಂದರು.

ಸದಸ್ಯೆ ಪುಟ್ಟಲಕ್ಷ್ಮಿಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡ ದ ಫಲಾನುಭವಿಗಳಿಗೆ ಇರುವ ಅನುಧಾನವನ್ನು ಸಮರ್ಪಕವಾಗಿ ಆದಷ್ಟು ಶೀಘ್ರ ಅಗತ್ಯ ಕ್ರಮ ಒದಗಿಸುವಂತೆ ತಿಳಿಸಿದರು.
ನಾಮನರ್ದೇಶಿತ ಸದಸ್ಯ ನಾರಾಯಣ್ ಮಾತನಾಡಿ ಸಭೆಯಲ್ಲಿ ಅನಗತ್ಯವಿಷಯಗಳ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ ಅವರು ನಗರದ ಅಭಿವೃದ್ಧಿ ಯ ಬಗ್ಗೆ ಚರ್ಚಿಸುವಂತೆ ಆಗ್ರಹಿಸಿ ಸದಸ್ಯರಿಗೆ ಚರ್ಚೆಯ ಬಗ್ಗೆ ತರಬೇತಿ ನೀಡಲು ತಜ್ಞರನ್ನು ನೇಮಿಸುವಂತೆ ತಿಳಿಸಿದರು.

error: Content is protected !!